- Home
- Entertainment
- Cine World
- ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ
ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ
ಮಾಜಿ ಪತಿ ನಿಧನದಿಂದ ಕರಿಷ್ಮಾ ಹೃದಯ ಮತ್ತಷ್ಟು ಭಾರವಾಗಿದೆ. ಪತಿಯಿಂದ ದೂರವಾಗಿರುವ ಕರೀಷ್ಮಾ ವೈಯುಕ್ತಿಕ ಬದುಕಿನಲ್ಲಿ ಕಣ್ಣೀರ ಕತೆಗಳೇ ಹೆಚ್ಚು. ಈ ಪೈಕಿ ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೀತಿ , ಬಿರುಕು ತನ್ನನ್ನು ಏಕಾಂಗಿಯಾಗಿಸಿತು. ಈ ನೋವುಮಾತ್ರ ಘನಘೋರ ಎಂದಿದ್ದಾರೆ. ಅಷ್ಟಕ್ಕೂ ಏನಾಗಿತ್ತು?

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ ಹಲವರನ್ನು ಅಚ್ಚರಿಗೊಳಿಸಿದೆ. ಪತಿಯಿಂದ ದೂರವಾಗಿದ್ದರೂ ಕರಿಷ್ಮಾ, ಮಾಜಿ ಪತಿ ನಿಧನಕ್ಕೆ ಕಣ್ಣೀರು ಹಾಕಿದ್ದಾರೆ. ಕರೀಷ್ಮಾ ಕಪೂರ್ ಬಾಲಿವುಡ್ ಬದುಕು ಸುಂದರವಾಗಿದ್ದರೆ, ವೈಯುಕ್ತಿಕ ಬದುಕಿನಲ್ಲಿ ಕಣ್ಣೀರು ಹಾಕಿದ್ದೇ ಜಾಸ್ತಿ. ಅದರಲ್ಲೂ ಎಂಗೇಜ್‌ಮೆಂಟ್‌ವರೆಗೆ ಹೋಗಿದ್ದ ಅಭಿಷೇಕ್ ಬಚ್ಚನ್ ಜೊತೆಗಿ ನಿಶ್ಚಿತಾರ್ಥ ಮುರಿದು ಬಿದ್ದಾಗ ಅನುಭವಿಸಿದ ನೋವನ್ನು ಕರೀಷ್ಮಾ ತೋಡಿಕೊಂಡಿದ್ದಾರೆ.
ಸುಭಾಷ್ ಕೆ ಜಾ ನಡೆಸಿದ ಸಂದರ್ಶನದ ವಿಡಿಯೋ ಒಂದು ಮತ್ತೆ ಸದ್ದು ಮಾಡುತ್ತಿದೆ. ಈ ಸಂದರ್ಶನದಲ್ಲಿ ಕರೀಷ್ಮಾ ಕಪೂರ್, ತಮ್ಮ ಪ್ರೀತಿ ಮುರಿದು ಬಿದ್ದಾಗ ಅನುಭವಿಸಿದ ನೋವು ಹೇಳಿಕೊಂಡಿದ್ದಾರೆ. 5 ವರ್ಷದ ಪ್ರೀತಿ, ಎಲ್ಲರೂ ಒಪ್ಪಿಕೊಂಡಿದ್ದರು. ಇನ್ನೇನು ಎಂಗೇಜ್‌ಮೆಂಟ್ ಸನಿಹದಲ್ಲಿದ್ದಾಗ ಈ ಮುರಿದು ಬಿದ್ದಿತ್ತು. ನನ್ನ ಹೃದಯವೇ ಒಡೆದು ಹೋಗಿತ್ತು. ನೋವು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನೋವಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಎಲ್ಲರೂ ನನ್ನ ಬಿಟ್ಟು ಹೋದರು, ನಾನು ಏಕಾಂಗಿಯಾದೆ ಎಂದು ಕರೀಷ್ಮಾ ಕಪೂರ್ ಹೇಳಿದ್ದಾರೆ.
ಕರೀಷ್ಮಾ ಕಪೂರ್ ಹಾೂ ಅಭಿಷೇಕ್ ಬಚ್ಚನ್ ಪ್ರೀತಿ ಗೌಪ್ಯವಾಗಿ ಉಳಿದಿರಲಿಲ್ಲ. ಇವರಿಬ್ಬರು ಬರೋಬ್ಬರಿ 5 ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದರು. ಅಮಿತಾಬ್ ಬಚ್ಚನ್‌ನ 60ನೇ ಹುಟ್ಟು ಹಬ್ಬದ ದಿನ ಅಂದರೆ 2002ರಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಿರ್ಧಾರವಾಗಿತ್ತು. ಇವರಿಬ್ಬರ ಪ್ರೀತಿಯನ್ನು ಎರಡು ಕುಟಂಬ ಒಪ್ಪಿಕೊಂಡಿತ್ತು. ಹೀಗಾಗಿ ನಿಶ್ಚಿತಾರ್ಥ, ಮದುವೆ ಮಾತ್ರ ಬಾಕಿ ಉಳಿದಿತ್ತು.
ಇನ್ನೇನು ಎಂಗೇಜ್ಮೆಂಟ್ ಆಗಬೇಕು ಅನ್ನುವಷ್ಟರಲ್ಲಿ ಇಬ್ಬರು ಬೇರೆ ಬೇರೆಯಾಗಿದ್ದರು. ಎರಡು ಕುಟುಂಬಗಳು ಬೇರೆಯಾಗಿತ್ತು. ಇದಕ್ಕೆ ಸ್ಪಷ್ಟ ಕಾರಣ ಇದುವರೆಗೂ ಬಹಿರಂಗವಾಗಿಲ್ಲ. ಬಚ್ಚನ್ ಕುಟುಂಬ ಈ ಸಂಬಂಧ ಇಷ್ಟವಿರಲಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಖಚಿತ ಕಾರಣ ಗೌಪ್ಯವಾಗಿಯೇ ಉಳಿದಿದೆ. ಇಬ್ಬರ ಪ್ರೀತಿ ಕೊನೆಗೊಂಡಿದ್ದು ಯಾಕೆ ಅನ್ನೋ ಪ್ರಶ್ನೆ ಹಲವರು ಬಾರಿ ಚರ್ಚೆಯಾಗಿದೆ.
ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೀತಿ ಮುರಿದು ಬಿದ್ದಾಗ ಕರೀಷ್ಮಾ ಕಪೂರ್ ಅಕ್ಷರಶಃ ಕುಗ್ಗಿ ಹೋಗಿದ್ದರು. ಕಣ್ಣೀರಲ್ಲೇ ದಿನ ದೂಡಿದ್ದರು. ಕುಟುಂಬಸ್ಥರು ತೀವ್ರ ನೋವುಂಡಿದ್ದರು. ಇದರಿಂದ ಕರಿಷ್ಮಾ ಹಾಗೂ ಕುಟುಂಬ ಹೊರಬರಲು ಸುದೀರ್ಘ ದಿನವೇ ತೆಗೆದುಕೊಂಡಿತ್ತು. ಬಳಿಕ ಕುಟುಂಬಸ್ಥರ ಸೂಚನೆ ಪ್ರಕಾರ ಸಂಜಯ್ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈ ಸಂಬಂಧಲ್ಲೂ ಆರಂಭಿದಲೇ ಬಿರುಕು ಕಾಣಿಸಿಕೊಂಡಿತ್ತು. ಕೊನೆಗೆ ಕರೀಷ್ಮಾ ಪತಿಯಿಂದ ದೂರವಾದರು.
ಕರೀಷ್ಮಾ ಕಪೂರ್ ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಅದು ಪ್ರೀತಿ, ರಿಲೇಶನ್‌ಶಿಪ್, ಮದುವೆ, ವೈವಾಹಿಕ ಜೀವನ ಎಲ್ಲವೂ ದಿಢೀರ್ ಯೂ ಟರ್ನ್ ತೆಗೆದುಕೊಂಡು ವೈಯುಕ್ತಿಕ ಬದುಕಿನಲ್ಲಿ ಮರೆಯಲಾಗದ ಕಪ್ಪು ಚುಕ್ಕೆಯಾಗಿದೆ. ಕರೀಷ್ಮಾ ಸದ್ಯ ಇಬ್ಬರು ಮಕ್ಕಳ ಜೊತೆಗಿದ್ದಾರೆ.