ಕರೀನಾರ ನೋ ಮೇಕಪ್ ಲುಕ್: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಇತ್ತೀಚೆಗೆ ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಅವರು ನೀಲಿ ಡೆನಿಮ್ ಮತ್ತು ಪ್ರಿಂಟೆಡ್ ಶರ್ಟ್ ಧರಿಸಿದ್ದರು. ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಕನ್ನಡಕ ಧರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕರೀನಾರ ಈ ಫೋಟೋಗಳನ್ನು ನೋಡಿದ ನಂತರ, ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ, ಆಕೆಯ ಮುಖದಲ್ಲಿ ಸುಕ್ಕುಗಳು ಮತ್ತು ಮುಖ ದಪ್ಪವಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಮೇಕಪ್ ಇಲ್ಲದ ಕರೀನಾ ಈ ಲುಕ್‌ನ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ, ಕರೀನಾಳನ್ನು ಹೊರತುಪಡಿಸಿ, ಇತರ ಅನೇಕ ಸೆಲೆಬ್ರೆಟಿಗಳು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡರು.
ಕರೀನಾ ರ ಈ ಮೇಕಪ್ ಇಲ್ಲದ ಫೋಟೋಗೆ ಒಬ್ಬ ವ್ಯಕ್ತಿ ಬರೆದಿದ್ದಾರೆ - ಅವಳ ಮುಖಕ್ಕೆ ಏನಾಯಿತು, ವಯಸ್ಸಾಗಿರುವ ಹಾಗೇ ಕಾಣಲಾರಂಭಿಸಿದೆ. ಇನ್ನೊಬ್ಬರು -ಕರೀನಾ ಕಪೂರ್‌ಗೆ ಏನಾಯಿತು? ಎದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯೂಸರ್ ಅವರ ಮುಖ ಏಕೆ ವಿಚಿತ್ರವಾಗಿ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅನೇಕರು ಅಚ್ಚರಿಯ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ.
ಈ ವರ್ಷ ಕರೀನಾ ಕಪೂರ್ ತನ್ನ ಎರಡನೇ ಮಗನಿಗೆ ಜನ್ಮ ನೀಡಿದ್ದಾರೆ. ಮಗ ಹುಟ್ಟಿದ ಕೆಲವು ತಿಂಗಳ ನಂತರ ಅವರು ಕೆಲಸಕ್ಕೆ ಮರಳಿದರು. ಅವರ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ ಕರೀನಾ ಕಪೂರ್ ಪ್ರಸ್ತುತ ಯಾವುದೇ ಬಾಲಿವುಡ್ ಸಿನಿಮಾದ ಆಫರ್ ಹೊಂದಿಲ್ಲ. ಆಮೀರ್ ಖಾನ್ ಜೊತೆ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ವರ್ಷ ಕ್ರಿಸ್ಮಸ್ ಹಬ್ಬದಂದು ಈ ಚಿತ್ರ ಬಿಡುಗಡೆಯಾಗಲಿದೆ.
ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ. ತಲೈವಿ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಕೆ ಚೆನ್ನೈಗೆ ತೆರಳಿದರು. ಈ ಸಮಯದಲ್ಲಿ, ಅವರು ಕಪ್ಪು ಸಲ್ವಾರ್ ಸೂಟ್ ಧರಿಸಿದ್ದರು.
ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಬಾಂದ್ರಾದಲ್ಲಿ ಮಕ್ಕಳೊಂದಿಗೆ ಹೋಟೆಲ್ ಬಳಿ ಕಾಣಿಸಿಕೊಂಡರು. ಅವರು ತಮ್ಮ ಮಕ್ಕಳೊಂದಿಗೆ ಡಿನ್ನರ್‌ಗೆ ಬಂದಿದ್ದರು. ಈ ಸಮಯದಲ್ಲಿ, ಸೊಹೈಲ್ ಕ್ಯಾಮರಾಮನ್‌ಗೆ ಪೋಸ್ ನೀಡಿದರು.
ಬಾಂದ್ರಾದಲ್ಲಿ ಅರ್ಜುನ್ ರಾಮ್‌ಪಾಲ್ ಕಾಣಿಸಿಕೊಂಡಿದ್ದಾರೆ. ಅವರು ಸ್ಕೈ ಬ್ಲ್ಯೂ ಕಲರ್ ಟಿ-ಶರ್ಟ್ ಮತ್ತು ಬೂದು ಬಣ್ಣದ ಲೋಯರ್ ಧರಿಸಿದ್ದರು. ಅವರು ಕ್ಯಾಪ್ ಮತ್ತು ಕನ್ನಡಕಗಳನ್ನು ಸಹ ಧರಿಸಿದ್ದರು.
ಫೇಮಸ್ ಕಾಮಿಡಿಯನ್ ಕೃಷ್ಣ ಅಭಿಷೇಕ್ ಅವರ ಪತ್ನಿ ಕರಿಷ್ಮಾ ಶಾ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.ಈ ಸಮಯದಲ್ಲಿ ಅವರ ಇಬ್ಬರು ಮಕ್ಕಳು ಜೊತೆಯಲ್ಲಿದ್ದರು. ದಂಪತಿಗಳು ಮಕ್ಕಳೊಂದಿಗೆ ಛಾಯಾಗ್ರಾಹಕರಿಗೆ ಸಾಕಷ್ಟು ಪೋಸ್ ನೀಡಿದರು.
ಖುಷಿ ಕಪೂರ್ ಜಿಮ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಅವರು ಕಪ್ಪು ಟಾಪ್ ಮತ್ತು ಪಿಂಕ್ ಕಲರ್ ಪ್ಯಾಂಟ್‌ನಲ್ಲಿ ಕಂಡು ಬಂದಿದ್ದಾರೆ. ತನ್ನ ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡು ಮಾಸ್ಕ್ ಧರಿಸಿದ್ದ ಖುಷಿ ಕೈಯಲ್ಲಿ ಬ್ಯಾಗ್ ಹಾಗೂ ಫೋನ್ ಹಿಡಿದಿದ್ದರು.
ಜಾನ್ವಿ ಕಪೂರ್ ಖಾರ್‌ನಲ್ಲಿ ಜಿಮ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ಅವರ ಮುಖದ ಮೇಲೆ ಆತಂಕ ಹಾಗೂ ಬೇಸರ ಎದ್ದು ಕಾಣುತ್ತಿತ್ತು. ಈ ಸಮಯದಲ್ಲಿ ಅವರು ಜಿಮ್ ವೇರ್ ಧರಿಸಿದ್ದರು ಮತ್ತು ಅವರು ಹೇರ್ ಓಪನ್ ಆಗಿ ಬಿಟ್ಟು ಮಾಸ್ಕ್ ಧರಿಸಿದ್ದರು.