ಕರಿಷ್ಮಾಳ ಪುತ್ರಿಯ ಈ ಕೆಟ್ಟ ಚಟದ ಬಗ್ಗೆ ಕರೀನಾಗೆ ಆತಂಕ!
ಬಾಲಿವುಡ್ ನಟಿ ಕರೀನಾ ಕಪೂರ್ ಅವರ ನೀಸ್ ಹಾಗೂ ಕರಿಷ್ಮಾ ಕಪೂರ್ ಪುತ್ರಿ ಸಮೈರಾ ಕಪೂರ್‌ಗೆ ಸಂಭಂಧಿಸಿದ ವಿಷಯ ವೈರಲ್ ಆಗುತ್ತಿದೆ. ಚಿಕ್ಕಮ್ಮ ಕರೀನಾ ತನ್ನ ಅಕ್ಕನ ಮಗಳ ಕೆಟ್ಟ ಚಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಮಗಳ ಬಗ್ಗೆ ಗಮನ ಹರಿಸಲು ಸಹೋದರಿ ಕರಿಷ್ಮಾಗೆ ಸಲಹೆ ನೀಡಿದ್ದಾರೆ.
ಎರಡನೆಯ ಮಗುವಿಗೆ ತಾಯಿಯಾಗಲಿರುವ ಕರೀನಾ ಈ ದಿನಗಳಲ್ಲಿ, ಪತಿ ಸೈಫ್ ಅಲಿ ಖಾನ್ ಮತ್ತು ಮಗ ತೈಮೂರ್ ಅಲಿ ಖಾನ್ ಜೊತೆ ಹಿಮಾಚಲ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ತನ್ನ ಮಗನೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್‌ನ ನಟಿ ತನ್ನ ವೃತ್ತಿಪರ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕಾಗಿ ಸಮಯ ತೆಗೆದುಕೊಳ್ಳುತ್ತಾರೆ. ಕರೀನಾ ಆಗಾಗ್ಗೆ ಕುಟುಂಬದೊಂದಿಗೆ ಪ್ರವಾಸಗಳಿಗೆ ಹೋಗುತ್ತಾರೆ.
ಅವರು ಒಳ್ಳೆಯ ನಟಿ ಮಾತ್ರವಲ್ಲ, ಒಳ್ಳೆ ತಾಯಿ, ಹೆಂಡತಿ, ಮಗಳು, ಸಹೋದರಿ ಮತ್ತು ಚಿಕ್ಕಮ್ಮ ಕೂಡ ಹೌದು. ಕರೀನಾ ತನ್ನ ಅಕ್ಕನ ಮಗಳಿಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಅವಳನ್ನು ತುಂಬಾ ಪ್ರೀತಿಸುತ್ತಾರೆ
ಸಮೈರಾಳ ಒಂದು ಅಭ್ಯಾಸವನ್ನು ಅವರು ಇಷ್ಟಪಡುವುದಿಲ್ಲ ಮತ್ತು ಅವಳು ಅದರ ಬಗ್ಗೆ ಗಮನ ಹರಿಸಬೇಕೆಂದು ಬಯಸುತ್ತಾರೆ ಕರೀನಾ.
ಅಷ್ಟೇ ಅಲ್ಲ, ಈ ಬಗ್ಗೆ ಕರಿಷ್ಮಾರ ಜೊತೆ ಮಾತನಾಡುತ್ತಾ ಮಗಳ ಬಗ್ಗೆಯೂ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ ಕರೀನಾ .
ಕರೀನಾ ತನ್ನ ಸಹೋದರಿಯ ಮಗಳು ಮತ್ತು ಅವಳ ಸಂಬಂಧದ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
ತನ್ನ ಸಹೋದರಿ ಕರಿಷ್ಮಾಳ ಮಗಳು ಸಮೈರಾ ತುಂಬಾ ಕೆಟ್ಟ ಚಟವನ್ನು ಹೊಂದಿದ್ದಾಳೆ ಮತ್ತು ಅದು ಫೋನ್ ಆಡಿಕ್ಷನ್ ಆಗಿದೆ. ಇದರಿಂದಾಗಿ ಅವಳು ಇಡೀ ಫೋನ್‌ನಲ್ಲಿ ದಿನವಿಡೀ ನಿರತರಾಗಿರುತ್ತಾಳೆ ಎನ್ನುತ್ತಾರೆ ಬಾಲಿವುಡ್ ದಿವಾ.
ನನ್ನ ನೀಸ್‌ಗೆ ಕೇವಲ 14 ವರ್ಷ. ಅವಳು ಇಡೀ ದಿನ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುತ್ತಾಳೆ ಎಂದು ಅಕ್ಕ ಕರಿಷ್ಮಾಳ ಮಗಳ ಬಗ್ಗೆ ಹೇಳುತ್ತಾರೆ ನಟಿ ಕರೀನಾ.
ಸಮೈರಾ ಸೋಶಿಯಲ್ ಮೀಡಿಯಾದ ಬಳಕೆಯನ್ನು ಕಡಿಮೆ ಮಾಡಬೇಕೆಂದು ನಾನು ಲೋಲೋಗೆ ಹೇಳಿದೆ. ಏಕೆಂದರೆ ನೀವು ಇಡೀ ದಿನ ಸೋಷಿಯಲ್ ಮೀಡಿಯಾದಲ್ಲಿ ನಿರತರಾಗಿರುವಾಗ, ನೀವು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ, ನೀವು ಪುಸ್ತಕಗಳನ್ನು ಓದುವುದಿಲ್ಲ ಅಥವಾ ಕುಟುಂಬ ಮತ್ತು ಸ್ನೇಹಿತರಿಗೆ ಸಮಯವನ್ನು ನೀಡುವುದಿಲ್ಲ ಎಂದು ಹೇಳಿದ ಬೇಬೊ.
ಸಮೈರಾ ದಿನವಿಡೀ ಮೊಬೈಲ್ ಬಳಸುತ್ತಾಳೆ, ನಂತರ ಒಂದು ದಿನ ಎಲ್ಲರೂ ಮರೆತುಬಿಡುತ್ತಾರೆ. ಇದೇ ಮುಂದುವರಿದರೆ, ಹೊರಗಿನ ಪ್ರಪಂಚದ ಜೊತೆ ಹೊಂದಿಕೊಳ್ಳುವುದೇ ಅವಳಿಗೆ ಮರೆತು ಹೋಗುತ್ತದೆ, ಎನ್ನುತ್ತಾರೆ ಕರೀನಾ.
ಕರಿಷ್ಮಾ ಮತ್ತು ಉದ್ಯಮಿ ಸಂಜಯ್ ಕಪೂರ್ ಪುತ್ರಿ. ಪೋಷಕರ ವಿಚ್ಛೇದನದ ನಂತರ, ಸಮೈರಾ ತನ್ನ ತಾಯಿ ಜೊತೆಗೆ ಇದ್ದಾಳೆ. ಆಗಾಗ ತಂದೆಯನ್ನು ಭೇಟಿಯಾಗಲು ಹೋಗುತ್ತಾಳೆ.