ಸೈಲೆಂಟಾಗಿರೋ ಗಂಡ ಬೇಕು, ನಂಗೆ ಮಾತಾಡೋಕೆ ಇಷ್ಟ ಎಂದ ಕಂಗನಾ
ಮದುವೆಯಾಗೋಕೆ ಎಂಥಾ ಹುಡುಗ ಬೇಕು ? ತನ್ನ ವರನ ಆಯ್ಕೆ ತಿಳಿಸಿದ ಕ್ವೀನ್ ನಟಿ ಕಂಗನಾ ರಣಾವತ್ ಅವರ ವಿವಾಹದ ಕುರಿತ ಯೋಚನೆಗಳಿವು

ಬಾಲಿವುಡ್ ಕ್ವೀನ್ ಕಂಗನಾ ರಣಾವತ್(Kangana Ranaut) ನಟನೆ ಎಲ್ಲರಿಗೂ ಗೊತ್ತು. ಅವರ ಕಾಂಟ್ರವರ್ಸಿಗಳೇನೇ ಇದ್ದರೂ ನಟನೆಗೆ ಮಾತ್ರ ಎಲ್ಲರೂ ಅಭಿಮಾನಿಗಳೇ. ಬಾಲಿವುಡ್‌ನಲ್ಲಿ(Bollywood) ಸಕತ್ ಹೆಸರು ಹಣ ಖ್ಯಾತಿ ಎಲ್ಲವನ್ನೂ ಸಂಪಾದಿಸಿದ ನಟಿಯ ಮದುವೆ ಯಾವಾಗ ?
ಕಂಗನಾ ಪ್ರತಿ ವಿಚಾರಕ್ಕೂ ರಿಯಾಕ್ಟ್ ಮಾಡುತ್ತಾರೆ. ಅವರು ಮದುವೆ ಯಾವಾಗಾ ? ಯಾರನ್ನು ಮದುವೆಯಾಗ್ತಾರೆ ? ಮದುವೆ ಹೇಗಿರಬಹುದು ಎಂಬೆಲ್ಲ ಕುತೂಹಲ ಎಲ್ಲರಿಗೂ ಇದೆ. ಇದಕ್ಕೆಲ್ಲ ಉತ್ತರ ಕೊಟ್ಟಿದ್ದಾರೆ ನಟಿ.
ತಲೈವಿ ಸಿನಿಮಾದ ಪ್ರಮೊಷನ್‌ಗೆ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್ ಮದುವೆಯಾಗೋ ಹುಡುಗನ ಕುರಿತು ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
ನಿಮಗೆ ಮಾತಾಡೋ ಪತಿ ಬೇಕಾ ಅಥವಾ ಮೌನವಾಗಿರೋ ಸೈಲೆಂಟ್ ಗಂಡ ಬೇಕಾ ಎಂದು ಕಪಿಲ್ ಶರ್ಮಾ ಕೇಳಿದಾಗ ನನಗೆ ಸುಮ್ನಿರೋ ಗಂಡ ಬೇಕು ಎಂದಿದ್ದಾರೆ ಕಂಗನಾ ರಣಾವತ್.
Drugs case: ಆರ್ಯನ್ ಅರೆಸ್ಟ್ ಬಗ್ಗೆ ಶಾರೂಖ್ ಕ್ಷಮೆ ಕೇಳ್ಬೇಕಿತ್ತು ಎಂದ ಕಂಗನಾ
ನನಗೆ ಸುಮ್ಮನೆ ಇರೋ ಗಂಡ ಬೇಕು. ಯಾಕೆಂದರೆ ನನಗೆ ಮಾತಾಡೋದು ಎಂದರೆ ತುಂಬಾ ಇಷ್ಟ. ಹಾಗೆಯೇ ಮಾತುಗಳನ್ನು ಕೇಳಿಸಿಕೊಳ್ಳುವವರು ಎಂದರೂ ಇಷ್ಟ. ಹಾಗಾಗಿ ಸುಮ್ಮನಿರೋ ಗಂಡ ನನ್ನ ಆಯ್ಕೆ ಎಂದಿದ್ದಾರೆ
ತಲೈವಿ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ ಕಂಗನಾ ರಣಾವತ್. ಸದ್ಯ ಇವರ ಮದುವೆಯ ಬಗ್ಗೆಯೇ ಎಲ್ಲರಿಗೂ ಕುತೂಹಲವಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.