ಪೃಥ್ವಿ ಜೊತೆ ಪೂಲ್ ಡೇ..! ಕಂಗನಾ ಫೋಟೋಸ್ ವೈರಲ್
ಬಾಲಿವುಡ್ ನಟಿ ಕಂಗನಾ ರಣಾವತ್ ಡೇ ಔಟ್ ಅಕ್ಕನ ಮಗನ ಜೊತೆ ಪೂಲ್‌ನಲ್ಲಿ ಮಿಂದೆದ್ದ ನಟಿ

Kangana
ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಅಕ್ಕನ ಮಗ ಪೃಥ್ವಿ ಜೊತೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಇದು ಇವರ ಸೋಷಿಯಲ್ ಮೀಡಿಯಾದಲ್ಲಿ ನಾವು ಕಾಣಬಹುದು. ಪೃಥ್ವಿ-ಕಂಗನಾ ಬಾಂಡ್ ಸಖತ್ ಸ್ಪೆಷಲ್.
Kangana
ಶೂಟಿಂಗ್, ಸಿನಿಮಾ ಎಂದು ದೇಶಾದ್ಯಂತ ಓಡಾಡುತ್ತಿರುವ ನಟಿ ಫ್ಯಾಮಿಲಿಗಾಗಿ ಬಹಳಷ್ಟು ಸಮಯ ಸ್ಪೆಂಡ್ ಮಾಡುತ್ತಾರೆ. ಈ ನಡುವೆ ದೇಶದಲ್ಲಾಗುವ ಎಲ್ಲ ಅಪ್ಡೇಟ್‌ಗಳನ್ನು ತಿಳಿದು ಅದಕ್ಕೆ ಪ್ರತಿಕ್ರಿಯಿಸುತ್ತಾರೆ ಕೂಡಾ.
Kangana
ಇತ್ತೀಚೆಗೆ ನಟಿ ಬುಡಾಪೆಸ್ಟ್ ವಾಟರ್‌ಪಾರ್ಕ್‌ನಲ್ಲಿ ಚಿಲ್ ಮಾಡಿದ್ದಾರೆ. ಹ್ಯಾಟ್, ಬ್ಲಾಕ್ ಸ್ವಿಮ್ ಸೂಟ್‌ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಕಂಗನಾ. ಜೊತೆಗೆ ಪೃಥ್ವಿಯದ್ದೂ ಫುಲ್ ಮಸ್ತಿ ಕಾಣಬಹುದು
Kangana
ನಟಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿನ ಫೋಟೋಗಳ ಜೊತೆ ಕ್ಯಾಪ್ಶನ್ ಕೂಡಾ ಕೊಡಲಾಗಿದೆ. ನನ್ನ ಮಗುವಿನೊಂದಿಗೆ ಒಂದು ದಿನ.. ಅವನು ಅಲ್ಲಿಗೆ ಬಂದು ತುಂಬಾ ರೋಮಾಂಚನಗೊಂಡಿದ್ದನು ಎಂದಿದ್ದಾರೆ ಕಂಗನಾ
Kangana
ಕೆಲಸದ ವಿಚಾರದಲ್ಲಿ ಕಂಗನಾ ಇತ್ತೀಚೆಗೆ ತನ್ನ ಮುಂದಿನ ಸಿನಿಮಾ 'ಧಕಾಡ್' ಚಿತ್ರೀಕರಣವನ್ನು ಮುಗಿಸಿದ್ದಾರೆ. ಶೂಟ್ ಮಧ್ಯೆ ಬಹಳಷ್ಟು ಫೋಟೋ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.
Kangana
ಫೋಟೋಗಳನ್ನು ಹಂಚಿಕೊಂಡ ಕಂಗನಾ, ಚಿತ್ರದ ಸುಗಮ ಚಿತ್ರೀಕರಣಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ತನ್ನ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪ್ರಸಿದ್ಧ ಕವಿ ಗಾಲಿಬ್ ಅನ್ನು ಉಲ್ಲೇಖಿಸಿ, "ಮೊಹಬ್ಬತ್ ಮೇ ನಹಿ ಹೈ ಫರಕ್ ಜೀನ್ ಔರ್ ಮರ್ನೆ ಕಾ, ಯುಎಸ್ ಕೋ ದೇಖ್ ಕರ್ ಜೀತ್ ಹೈ ಜಿಸ್ ಕಾಫಿರ್ ಪೆ ದಮ್ ನಿಕ್ಲೆ" ಎಂದು ಬರೆದಿದ್ದಾರೆ.
Kangana
'ಧಾಕಡ್' ಸ್ಪೈ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಕಂಗನಾ ಏಜೆಂಟ್ ಅಗ್ನಿ ಎಂಬ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ತಾ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುವುದನ್ನು ಕಾಣಬಹುದು.
Kangana
'ಧಕಾಡ್' ಹೊರತಾಗಿ, ಕಂಗನಾ ತನ್ನ ಕಿಟ್ಟಿಯಲ್ಲಿ 'ತಲೈವಿ', 'ತೇಜಸ್' ಮತ್ತು 'ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ' ಮುಂತಾದ ಚಿತ್ರಗಳನ್ನು ಹೊಂದಿದ್ದಾರೆ ತಲೈವಿ ಶೂಟ್ ಮುಗಿದಿದ್ದು ಈಗಾಗಲೇ ಇದರ ಹಾಡು ಹಿಟ್ ಆಗಿದೆ.
Kangana
Kangana
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.