ಪೋಷಕರ ಮನೆ ಅಲಂಕರಿಸಿ, ಪೋಟೋ ಶೇರ್ ಮಾಡಿದ ಕಂಗನಾ ರಣಾವತ್‌!

First Published Mar 2, 2021, 2:15 PM IST

ಕಂಗನಾ ರಣಾವಾತ್ ತಮ್ಮ ಕುಟುಂಬದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕೆಲವು ದಿನಗಳ ಹಿಂದೆ ಅವರು ತಮ್ಮ ಕುಟುಂಬ ಸದಸ್ಯರಿಗೆ ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ ಪೋಷಕರ ಮನೆಯನ್ನು ಸಹೋದರ ಅಕ್ಷತ್‌ ಹೆಂಡತಿ ರೀತು ಜೊತೆ ಅಲಂಕರಿಸಿದರು, ಈ ಮನೆಯ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕಂಗನಾ ಫೋಟೋಗಳೊಂದಿಗೆ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಮನೆ ಸಾಕಷ್ಟು ಲಕ್ಷುರಿಯಸ್‌ ಆಗಿ ಕಾಣುತ್ತದೆ ಹಾಗೂ ಒಂದು ಗೋಡೆ ಬಹಳ ವಿಶೇಷವಾಗಿದೆ. ಕುಟುಂಬ ಸದಸ್ಯರ ಫೋಟೋಗಳನ್ನು ಈ ಗೋಡೆಯ ಮೇಲೆ ಹಾಕಲಾಗಿದೆ.