KRKಗೆ ಮತ್ತೊಂದು ಸಂಕಷ್ಟ; ಈಗ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಬಂಧನ
ಕೆಆರ್ ಕೆ ಎಂದೇ ಕರೆಸಿಕೊಳ್ಳುವ ಕಮಲ್ ಆರ್ ಖಾನ್ ಅವರ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. 2019 ರ ಜನವರಿಯ ಮೊದಲ ವಾರದಲ್ಲಿ, ಲೈಂಗಿಕ ದೌರ್ಜನ್ಯ ಮತ್ತು ದೂರುದಾರರ ಕೈ ಹಿಡಿದಿದ್ದಕ್ಕಾಗಿ ವರ್ಸೋವಾ ಪೊಲೀಸರು ಅವರನ್ನು ಬಂಧಿಸಿದ್ದಾರೆ ವರದಿಗಳ ಪ್ರಕಾರ, ಮುಂಬೈನ ಬೊರಿವಲಿಯಲ್ಲಿರುವ 24 ನೇ ಎಂಎಂ ನ್ಯಾಯಾಲಯದ ಆದೇಶದ ನಂತರ ಅವರನ್ನು ಬಂಧಿಸಲಾಗಿದೆ. ಈ ವಿಷಯದ ಬಗ್ಗೆ ಮಾಹಿತಿ ನೀಡಿದ ವರ್ಸೋವಾ ಪೊಲೀಸರು, ಕೆಆರ್‌ಕೆಯನ್ನು ಸೆಪ್ಟೆಂಬರ್ 5 ರಂದು ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಬಗ್ಗೆ ವಿವಾದಾತ್ಮಕ ಕಾಮೆಂಟ್‌ಗಳ ಅರೋಪದ ಕೇಸ್‌ನಲ್ಲಿ ಕೆಆರ್‌ಕೆ ಆಗಸ್ಟ್ 30 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು, ಆದರೆ ಇದೀಗ ಅವರನ್ನು ನಟಿಯೊಬ್ಬರ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿದೆ.
27 ವರ್ಷದ ಸಂತ್ರಸ್ತೆ ತಾನು 2017 ರಲ್ಲಿ ಮುಂಬೈಗೆ ಬಂದಿದ್ದೆ. ಅಲ್ಲಿ ಪಾರ್ಟಿಯೊಂದರಲ್ಲಿ ಕೆಆರ್‌ಕೆಯನ್ನು ಭೇಟಿಯಾಗಿದ್ದಳು ಈ ಸಮಯದಲ್ಲಿ, ಕೆಆರ್‌ಕೆ ತನ್ನನ್ನು ತಾನು ಚಲನಚಿತ್ರ ನಿರ್ಮಾಪಕ ಎಂದು ಪರಿಚಯಿಸಿಕೊಂಡಿದ್ದರು. ಇಬ್ಬರೂ ತಮ್ಮ ಸಂಖ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು ಎಂದು ದೂರಿನಲ್ಲಿ ಹೇಳಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದ ಸಂತ್ರಸ್ತೆ, 2017 ರಲ್ಲಿ ಕೆಆರ್‌ಕೆ ಅವರು ಇಮ್ರಾನ್ ಹಶ್ಮಿ ಅವರೊಂದಿಗೆ ಕ್ಯಾಪ್ಟನ್ ನವಾಬ್ ಚಿತ್ರವನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಅವರಿಗೆ ಪ್ರಮುಖ ಪಾತ್ರ ನೀಡುವುದಾಗಿ ಹೇಳಿದ್ದರು. ಇದಾದ ನಂತರ ಕೆಆರ್‌ಕೆ ಸಂತ್ರಸ್ತೆಯೊಂದಿಗೆ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದ್ದರು.
2019 ರಲ್ಲಿ ಕೆಆರ್‌ಕೆ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಮನೆಗೆ ಆಹ್ವಾನಿಸಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ. ಆದರೆ, ಅವಳು ಆ ದಿನ ಹೋಗದೆ ಮರುದಿನ ಅವನ ಮನೆಗೆ ಹೋಗಿದ್ದಳಂತೆ. ಅಲ್ಲಿ ಕೆಆರ್‌ಕೆ ಜ್ಯೂಸ್ ಕುಡಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದರಂತೆ. ಈ ಸಮಯದಲ್ಲಿ ಅವಳು ತುಂಬಾ ಭಯದಲ್ಲಿದ್ದು, ಹೇಗೋ ಅಲ್ಲಿಂದ ಓಡಿಹೋದಳು ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಕೆಆರ್‌ಕೆ ತನ್ನನ್ನು ಬಾಲಿವುಡ್ ಉದ್ಯಮದ ಅತಿದೊಡ್ಡ ವಿಮರ್ಶಕ. ದೊಡ್ಡ ತಾರೆಯರ ಚಿತ್ರ ಬಿಡುಗಡೆಯಾದಾಗ, ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ . ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ತಾರೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡುತ್ತಲೇ ಇರುತ್ತಾರೆ.
2020 ರಲ್ಲಿ, ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಸಾವಿನ ನಂತರವೂ ಅವರು ಅನೇಕ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದರು, ಈ ಕಾರಣದಿಂದ ಅವರನ್ನು ಕೆಲವು ದಿನಗಳ ಹಿಂದೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಸಲ್ಮಾನ್ ಖಾನ್ ಅವರ ಚಿತ್ರ ರಾಧೆ OTT ನಲ್ಲಿ ಬಿಡುಗಡೆಯಾದಾಗಲೂ ಅವರು ಸಲ್ಮಾನ್ ಬಗ್ಗೆ ತುಂಬಾ ಅಸಭ್ಯ ಕಾಮೆಂಟ್‌ಗಳನ್ನು ಮಾಡಿದ್ದರು ಮತ್ತು ಇದಾದ ಬಳಿಕ ಸಲ್ಮಾನ್ ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.