ದುರ್ಗಾ ಪೂಜೆಯಲ್ಲಿ ತಂಗಿ ಜೊತೆ ಜಗಳವಾಡಿದ ಕಾಜೋಲ್ ವಿಡೀಯೋ ವೈರಲ್!
ಬಾಲಿವುಡ್ ಉದ್ಯಮದಲ್ಲಿ, ಸೆಲೆಬ್ರಿಟಿಗಳು ಪರಸ್ಪರ ಜಗಳ ಮಾಡುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಆದರೆ ಸಹೋದರರು ಅಥವಾ ಸಹೋದರಿಯರ ನಡುವಿನ ಜಗಳದ ಸುದ್ದಿಗಳು ವಿರಳವಾಗಿ ಕೇಳಿಬರುತ್ತವೆ. ಆದರೆ, ಅಂತಹ ಒಂದು ಸುದ್ದಿ ಹೊರಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಸಹೋದರಿಯರು ಅಂದರೆ ಕಾಜೋಲ್ (Kajol) ಮತ್ತು ತನಿಶಾ ಮುಖರ್ಜಿ ( Tanishaa Mukerjee) ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು.
ವಾಸ್ತವವಾಗಿ ನವರಾತ್ರಿಯ ಸಮಯದಲ್ಲಿ ಕಾಜೋಲ್ ಮತ್ತು ಆಕೆಯ ಸಹೋದರಿ ಮತ್ತು ತಾಯಿ ತನುಜಾ ದುರ್ಗಾ ಪೂಜೆಗೆ ಆಗಮಿಸಿದ್ದರು ಮತ್ತು ಈ ಸಮಯದಲ್ಲಿ ಸಹೋದರಿಯರಿಬ್ಬರೂ ಸಾರ್ವಜನಿಕವಾಗಿ ಪರಸ್ಪರ ಜಗಳವಾಡಲು ಪ್ರಾರಂಭಿಸಿದರು.
ಕಾಜೋಲ್ ಪ್ರತಿ ವರ್ಷ ದುರ್ಗಾ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ಆಕೆ ಮುಂಬೈನ ಮೂರು ವಿವಿಧ ಸ್ಥಳಗಳಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಭಾಗವಹಿಸಲು ಬಂದಿದ್ದರು. ಈ ಸ್ಥಳಗಳಲ್ಲಿ, ಅವರು ಸಹೋದರಿ ತನಿಷಾ ಮತ್ತು ತಾಯಿಯೊಂದಿಗೆ ಕಾಣಿಸಿಕೊಂಡರು.
ಕಾಜೋಲ್ ದುರ್ಗಾ ಪೂಜೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇವುಗಳಲ್ಲಿ ಒಂದರಲ್ಲಿ ತಾನಿಶಾ ಮತ್ತು ಕಾಜೋಲ್ ಜಗಳವಾಡುತ್ತಿರುವುದು ಕಂಡುಬರುತ್ತದೆ. ಪರಸ್ಪರ ಜಗಳದ ಸಮಯದಲ್ಲಿ, ಕಾಜೋಲ್ ತನಿಷಾಳನ್ನು ಶಟ್-ಅಪ್ ಎಂದು ಬೈಯುವುದು ಕಾಣಬಹುದು.
ಈ ನಡುವೆ ತನಿಷಾ ಏನನ್ನೋ ಹೇಳಲು ಹೊರಟಾಗ, ಆಕೆಯ ತಾಯಿ ತನುಜಾ ಅವರು ಅವಳರನ್ನು ಮೌನವಾಗಿಸುತ್ತಾರೆ ಮತ್ತು ಪರಿಸ್ಥತಿಯನ್ನು ನಿಭಾಯಿಸಿದ್ದರು ನಂತರ, ಮೂವರೂ ಅಲ್ಲಿ ಹಾಜರಿದ್ದ ಮಾಧ್ಯಮ ಛಾಯಾಗ್ರಾಹಕರಿಗೆ ಪೋಸ್ ನೀಡಿದರು.
ಈ ಸಮಯದಲ್ಲಿ, ತನಿಷಾ ತನ್ನಿಂದ ದೂರವಿರಲು ಅಕ್ಕ ಕಾಜೋಲ್‌ಗೆ ಹೇಳುತ್ತಾರೆ. ಈ ಮೂರು ಜನರು ಸಾಂಪ್ರದಾಯಿಕ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಈ ಸಮಯದ ಇವರ ಫೋಟೊ ವೈರಲ್ ಆಗಿವೆ.
ಈ ಸಮಯದಲ್ಲಿ, ಕಾಜೋಲ್ ಗೋಲ್ಡನ್ ಮತ್ತು ನೀಲಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕಾಜೋಲ್ ತನ್ನ ಸೀರೆಗೆ ಹೊಂದುವ ಬಳೆಗಳನ್ನು ಕೂಡ ಧರಿಸಿದ್ದರು. ತಮ್ಮ ಲುಕ್ ಅನ್ನು ತುಂಬಾ ಸಿಂಪಲ್ ಆಗಿ ಇಟ್ಟುಕೊಂಡಿದ್ದ ಕಾಜೋಲ್ ಕೆಂಪು ಬಣ್ಣದ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಂಡಿದ್ದರು
ಕಾಜೋಲ್ ಈಗ ಸಿನಿಮಾಗಳಲ್ಲಿ ಕಾಣಿಸಿವುದು ತುಂಬಾ ಅಪರೂಪ . ಅವರು ವರ್ಷದಲ್ಲಿ ಕೇವಲ ಒಂದು ಸಿನಿಮಾದಲ್ಲಿ ಲೆಸ ಮಾಡಿದ್ದರು. ಸುದ್ದಿಯ ಪ್ರಕಾರ, ಅವಳು ತಾಯಿಯಾದಾಗಿನಿಂದ, ಅವಳು ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿದರು
ತನ್ನ ಮೊದಲ ಆದ್ಯತೆ ತನ್ನ ಮಕ್ಕಳು ಮತ್ತು ಕುಟುಂಬ ಮತ್ತು ಅವರ ಮೇಲೆ ಹೆಚ್ಚು ಗಮನಹರಿಸಲು ಬಯಸುತ್ತಾರೆ ಹಾಗೂ ಅವರು ತನ್ನ ಮಕ್ಕಳ ಬಗ್ಗೆ ತುಂಬಾ ಪೊಸೆಸಿವ್ ಆಗಿರುದ್ದಾರೆ ಎಂಬ ವಿಷಯವನ್ನು ಕಾಜೋಲ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕೆಲಸದ ಮುಂಭಾಗದಲ್ಲಿ, ಕಾಜೋಲ್ ರಾಜಕುಮಾರ್ ಹಿರಾನಿಯ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಬಂದವು. ಆದರೆ, ಈ ವರೆಗೂ ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದು ಕಾಜೋಲ್ ಹೇಳಿದ್ದರು.
ನಾನು ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದೇನೆ. ಓದುತ್ತಿದ್ದೇನೆ ಮತ್ತು ಕಲ್ಪನೆಗಳಿಗಾಗಿ ವಾಸ್ತವಿಕವಾಗಿ ಜನರನ್ನು ಭೇಟಿ ಮಾಡುತ್ತಿದ್ದೇನೆ. ಯಾವುದನ್ನೂ ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ . ಅವರು ಶೀಘ್ರದಲ್ಲೇ ದಿ ಲಾಸ್ಟ್ ಹರ್ರೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.