ಹಬ್ಬಕ್ಕೆ ಬನಾರಸಿ ಸೀರೆಯುಟ್ಟು ಮಿಂಚಿದ ಕಾಜೊಲ್: ಬೆಲೆ ಮಾತ್ರ ದುಬಾರಿ
- ಬನಾರಸಿ ಸೀರೆಯುಟ್ಟು ಮಿಂಚಿದ ಕಾಜೊಲ್
- ದುರ್ಗಾಪೂಜೆಯಲ್ಲಿ ಬಾಲಿವುಡ್ ನಟಿ ಉಟ್ಟ ಸೀರೆಯ ಬೆಲೆ ಗೊತ್ತಾ ?
ನವರಾತ್ರಿಯ(Navratri) 9 ದಿನಗಳ ಹಬ್ಬದ ಸಮಯದಲ್ಲಿ ಅಷ್ಟಮಿಯ ಒಂದು ಮಹತ್ವದ ದಿನವೆಂದು ಪರಿಗಣಿಸಲಾಗುತ್ತದೆ. ಬಾಲಿವುಡ್ ನಟಿ ಕಾಜೋಲ್ ದೇವಗನ್ ಶಕ್ತಿ, ಸದ್ಗುಣ, ದುಷ್ಟ ನಾಶ ಮಾಡುವ ತಾಯಿ ದುರ್ಗೆಯ ಆಚರಣೆ ಮಾಡಲು ಬನಾರಸಿ ಸೀರೆಯಲ್ಲಿ ಮಿಂಚಿದ್ದಾರೆ.
ಬ್ಯಾಕ್‌ಲೆಸ್ ನೀಲಿ ಬೆನಾರಸಿ ಸೀರೆಯುಟ್ಟು ಹಬ್ಬದ ಸಂಭ್ರವನ್ನು ಹೆಚ್ಚಿಸಿದ್ದಾರೆ ನಟಿ. ಅಷ್ಟಮಿಯಂದು, ಭಕ್ತರು ತಾಯಿ ದುರ್ಗೆಯ ಮಹಾಗೌರಿ ಅವತಾರವನ್ನು ಪೂಜಿಸುತ್ತಾರೆ. ದುರ್ಗಾ ಅಷ್ಟಮಿ ಪೂಜೆಗೆ ಕಾಜೋಲ್ ತನ್ನ ಕ್ವೀನ್ ಸ್ಟೈಲ್ ತೋರಿಸಿದ್ದಾರೆ.
ಕಾಜೋಲ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಈ ಹಬ್ಬದ ವಾರದಲ್ಲಿ ನಮ್ಮ ಫ್ಯಾಷನ್ ಲುಕ್‌ಗಳನ್ನು ಹಂಚಿಕೊಂಡಿದ್ದಾರೆ. ಫೊಟೋದಲ್ಲಿ ನಟಿ ಕಟ್ ಸ್ಲೀವ್ಸ್ ಬ್ಲೌಸ್ ಅನ್ನು ಧರಿಸಿದ್ದರು.
ಬ್ರಾಂಡ್‌ನ ಮಾಸ್ಟರ್ ಕುಶಲಕರ್ಮಿಗಳು ರಚಿಸಿದ ಗೋಟಾ ಪಟ್ಟಿಯ ಅನಿತಾ ಅವರ ಸಹಿ ಕೈ ಕಸೂತಿಯನ್ನು ಹೊಂದಿರುವ ರಾಜಮನೆತನದ ಕೈಯಿಂದ ನೇಯ್ದ ಬನಾರಸಿ ರೇಷ್ಮೆ ಸೀರೆಯೊಂದಿಗೆ ಕಾಜೋಲ್ ಮಿಂಚಿದ್ದಾರೆ.
ತನ್ನ ಕಾಂತಿಯುತವಾದ ಸೀರೆಯುಟ್ಟು ಪೋನಿಟೇಲ್ ಮಾಡಿದ್ದ ಕಾಜೋಲ್, ಒಂದು ಜೋಡಿ ಡ್ರಾಪ್ ಪರ್ಲ್ ನವರತ್ನ ಫ್ಲವರ್ ಸ್ಟಡ್‌ಗಳನ್ನು ಧರಿಸಿದ್ದರು. ಅದಕ್ಕೆ ಗೋಲ್ಡನ್ ಲೇಪನವಿತ್ತು. ಒಂದು ಚಿಕ್ಕ ಬಿಂದಿ ಫೆಸ್ಟಿವ್ ಲುಕ್ ಕಂಪ್ಲೀಟ್ ಮಾಡಿತ್ತು. ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಹಚ್ಚಿದ್ದ ಕಾಜೋಲ್ ಸಿಂಪಲ್ ಆಗಿದ್ದರೂ ಕ್ಯೂಟ್ ಮೇಕಪ್ ಸ್ಟೈಲ್‌ನಲ್ಲಿ ಕಂಡುಬಂದಿದ್ದಾರೆ.
ಕ್ಯಾಮರಾಕ್ಕೆ ಸೊಗಸಾದ ಪೋಸ್ ಕೊಡುವ ಮೂಲಕ, ಕಾಜೋಲ್ ನಮಗೆ ಸ್ಟೈಲಿಷ್ ಫೋಟೋಗಳನ್ನು ಕೊಟ್ಟಿದ್ದಾರೆ. ದಿನ 2. ಎಲ್ಲರಿಗೂ ದುರ್ಗಾ ಅಷ್ಟಮಿಯ ಶುಭಾಶಯಗಳು ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ದಿದ್ದಾರೆ.
Kajol
ಈ ಸೀರೆ ಭಾರತೀಯ ಫ್ಯಾಷನ್ ಡಿಸೈನರ್, ಅನಿತಾ ಡೋಂಗ್ರೆ ಅವರ ನಾಮಸೂಚಕ ಬ್ರಾಂಡ್‌ನಿಂದ ಸಿದ್ಧವಾಗಿದೆ. ಇದು ಸ್ಥಳೀಯ ಕರಕುಶಲ ಸಂಪ್ರದಾಯದ ಟಚ್ ಹೊಂದಿದೆ. ಆಧುನಿಕ ಸೌಂದರ್ಯ, ಐಷಾರಾಮಿ ವಿನ್ಯಾಸಗಳೂ ಇವೆ. ಡಿಸೈನರ್ ವೆಬ್‌ಸೈಟ್‌ನಲ್ಲಿ ಸೀರೆಗೆ ಸುಮಾರು 80,000 ಬೆಲೆ ನಮೂದಿಸಲಾಗಿದೆ.