ಡಿವೋರ್ಸ್ ಆದರೆ ನನ್ನನೇ ಮದುವೆ ಆಗಿ; ಜೂಹಿ ಚಾವ್ಲಾಗೆ ಪ್ರಪೋಸ್ ಮಾಡಿದ ನೆಟ್ಟಿಗ
ಸಿದ್ಧ್- ಕಿಯಾರಾ ಮದುವೆಗೆ ಸ್ಟೈಲಿಷ್ ಆಗಿ ರೆಡಿಯಾಗಿದ್ದ ಜೂಹಿ ಚಾವ್ಲಾಗೆ ಪ್ರಪೋಸ್ ಮಾಡಿದ ನೆಟ್ಟಿಗ....
ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲಿ ಅಭಿನಯಿಸಿರುವ ನಟಿ ಜೂಹಿ ಚಾವ್ಲಾ ಕೆಲವು ದಿನಗಳ ಹಿಂದೆ ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾನಿ ಮದುವೆಯಲ್ಲಿ ಭಾಗಿಯಾಗಿದ್ದರು.
ಒಂದು ವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಜೂಹಿ ಭಾಗಿಯಾಗಿದ್ದರು. ಈ ವೇಳೆ ಧರಿಸಿದ್ದ ಎರಡು ಟ್ರೆಡಿಷನ್ ಲುಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಲವ್ ಟ್ರೆಡಿಷನಲ್? ನಮ್ಮ ಟೀಂಗೆ ಸ್ವಾಗತ ಎಂದು ಬರೆದುಕೊಂಡ ಜೂಹಿ ನೇರಳೆ ಬಣ್ಣದ ಗ್ರ್ಯಾಂಡ್ ಸೆಲ್ವಾರ್ ಧರಿಸಿದ್ದಾರೆ. ಸುಜಾತಾ ರಜಿನಿ ಈ ಲುಕ್‌ನ ಡಿಸೈನ್ ಮಾಡಿದ್ದಾರೆ.
ನನ್ನಲ್ಲಿರುವ ಅಪ್ಪಟ ಭಾರತೀಯರನ್ನು ಫ್ಲಾಂಟ್ ಮಾಡುತ್ತಿರುವೆ ಎಂದು ಕೆಂಪು ಬಣ್ಣದ ಲೆಹೆಂಗಾ ಫೋಟೋ ಹಾಕಿದ್ದಾರೆ. ಕಾಜಲ್ ನಿಷಾದ್ ಈ ಲುಕ್‌ನ ಡಿಸೈನ್ ಮಾಡಿದ್ದಾರೆ.
ಈ ವಯಸ್ಸಿನಲ್ಲೂ ನೀವು ಇಷ್ಟೊಂದು ಸೂಪರ್ ಆಗಿದ್ದೀರಿ, ಯಾಕೆ ಇನ್ನೊಂದು ಮದುವೆ ಮಾಡಿಕೊಳ್ಳಬಾರದು? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದರಲ್ಲಿ ಪ್ರಪೋಸಲ್ ವೈರಲ್ ಆಗಿದೆ.
ನೀವು ದಯವಿಟ್ಟು ಡಿವೋರ್ಸ್ ಪಡೆಯುವ ನಿರ್ಧಾರ ಮಾಡಿದ್ದರೆ ನನ್ನನೇ ಮದುವೆ ಮಾಡಿಕೊಳ್ಳಿ. ನಿಮಗಾಗಿ ಕಾಯುತ್ತಿರುವೆ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾನೆ.
ಜೂಹಿ ಈ ಲುಕ್ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಯಲ್ಲಿ ಅತಿ ಸುಂದರವಾಗಿ ಕಾಣಿಸುತ್ತಿದ್ದ ಹಾಗೆ ಬೆಸ್ಟ್ ಡ್ರೆಸ್ ನಟಿ ಕಿರೀಟ ಪಡೆದುಕೊಂಡಿದ್ದಾರೆ.