- Home
- Entertainment
- Cine World
- ವಾರ್ 2ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ ಜೂ.ಎನ್‌ಟಿಆರ್: ಈ ದಿನದಂದು ಸಿನಿಮಾ ಬಿಡುಗಡೆ
ವಾರ್ 2ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ ಜೂ.ಎನ್‌ಟಿಆರ್: ಈ ದಿನದಂದು ಸಿನಿಮಾ ಬಿಡುಗಡೆ
ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಆ.14ರಂದು ‘ವಾರ್ 2’ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾದ ಟೀಸರ್ ಈ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿವೆ.

ಸೌತ್ ಇಂಡಿಯನ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಜನ್ಮದಿನದ ಹಿನ್ನೆಲೆಯಲ್ಲಿ ‘ವಾರ್ 2’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಜೂ ಎನ್‌ಟಿಆರ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಟ ಹೃತಿಕ್ ರೋಷನ್ ನಾಯಕನ ಪಾತ್ರದಲ್ಲಿದ್ದಾರೆ. ಕಿಯಾರ ಅದ್ವಾನಿ ಈ ಚಿತ್ರದ ನಾಯಕಿ. ಟೀಸರ್‌ನಲ್ಲಿ ಮೋಹಕ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಆ.14ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾದ ಟೀಸರ್ ಈ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿವೆ. ವೈಆರ್‌ಎಫ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ನಂ.1 ಟ್ರೆಂಡಿಂಗ್‌ನಲ್ಲಿದೆ. ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.
ಹೃತಿಕ್ ರೋಷನ್, ಟೈಗರ್ ಶ್ರಾಫ್ ಹೀರೋಗಳಾಗಿ ನಟಿಸಿದ ಚಿತ್ರ 'ವಾರ್'. ಈ ಸ್ಪೈ ಥ್ರಿಲ್ಲರ್ ಸೂಪರ್ ಸಕ್ಸಸ್ ಆಗಿ ಬಾಕ್ಸಾಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡಿತು. ಇದರ ಸೀಕ್ವೆಲ್ ಆಗಿ ಬರುತ್ತಿರುವ ಚಿತ್ರವೇ ವಾರ್ 2.
ಈ ಸಿನಿಮಾದಲ್ಲಿ ಎನ್‌ಟಿಆರ್ ರಾ ಏಜೆಂಟ್ ಆಗಿ ನಟಿಸಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ. ಈ ಹಿಂದೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಶಾರುಖ್ ಖಾನ್ ಅವರು ಏಜೆಂಟ್ ಪಾತ್ರದಲ್ಲಿ ನಟಿಸಿ ಉತ್ತಮ ಯಶಸ್ಸನ್ನು ಗಳಿಸಿದ್ದಾರೆ. ಎಲ್ಲಕ್ಕಿಂತ ವಿಭಿನ್ನವಾಗಿ ಎನ್‌ಟಿಆರ್ ಪಾತ್ರ ಇರಲಿದೆ.