Jr NTR ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಗೊತ್ತಾ?
ಜೂನಿಯರ್ ಎನ್‌ಟಿಆರ್ (Jr NTR) ಮತ್ತು ಅವರ ಪತ್ನಿ ಲಕ್ಷ್ಮಿ ಪ್ರಣತಿ (Lakshmi Pranathi) ಇಂದು ಗುರುವಾರ ತಮ್ಮ 11 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2011ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟ ಈ ತೆಲಗು ಸೂಪರ್‌ಸ್ಟಾರ್ ವಿರುದ್ಧ ಹಿಂದೆ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ಸಹ ದಾಖಲಾಗಿತ್ತು ಎಂದು ವರದಿಯಾಗಿದೆ.

ನಟ ಜೂನಿಯರ್ ಎನ್‌ಟಿಆರ್ ಕೇವಲ ದಕ್ಷಿಣ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. RRR ಬಿಡುಗಡೆಯೊಂದಿಗೆ, ಅವರು ಪ್ಯಾನ್-ಇಂಡಿಯಾ ಸಂವೇದನೆಯಾಗಿದ್ದಾರೆ. ಇತರ ಹಿಂದಿ ಸಿನಿಮಾ ನಟರಂತೆಯೇ ಈ ನಟ ಬಾಲಿವುಡ್ ಅಭಿಮಾನಿಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿದ್ದಾರೆ.
ದೇಶದಾದ್ಯಂತದ ಚಲನಚಿತ್ರ ಪ್ರೇಮಿಗಳು ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ತೆಲುಗು ನಟ ತನ್ನ
ವೈಯಕ್ತಿಕ ಜೀವನ ಆದಷ್ಟೂ ಪ್ರಚಾರದಿಂದ ದೂರವಿರುವಂತೆ ನಿರ್ವಹಿಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿದ್ದರೂ, ಹಬ್ಬಗಳಂತಹ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ, ಅವರು ತಮ್ಮ ಕುಟುಂಬದ ಚಿತ್ರಗಳನ್ನು ಪೋಸ್ಟ್ ಮಾಡುವುದು ತುಂಬಾ ವಿರಳ.
ಜೂನಿಯರ್ NTR ಮತ್ತು ಲಕ್ಷ್ಮಿ ಪ್ರಣತಿ ಅವರು ಮೇ 5, 2011 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಅವರದು ಆರೇಂಜ್ಡ್ ಮ್ಯಾರೇಜ್. ಈ ಸಂಬಂಧವನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೂಚಿಸಿದ್ದು.
ಲಕ್ಷ್ಮಿ ಅವರು ಖ್ಯಾತ ತೆಲುಗು ಸುದ್ದಿ ವಾಹಿನಿ ‘ಸ್ಟುಡಿಯೋ ಎನ್’ ಮಾಲೀಕ ಲಕ್ಷ್ಮಿ ನಾರ್ನೆ ಶ್ರೀನಿವಾಸ ರಾವ್ ಅವರ ಪುತ್ರಿ. ಜೂನಿಯರ್ ಎನ್‌ಟಿಆರ್ ಮತ್ತು ಲಕ್ಷ್ಮಿ ಅವರ ವಯಸ್ಸಿನ ವ್ಯತ್ಯಾಸ 10 ವರ್ಷಗಳು.
ಜೂನಿಯರ್ NTR ಮತ್ತು ಲಕ್ಷ್ಮಿ ಪ್ರಣತಿ ಅವರು ಮೇ 5, 2011 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಅವರದು ಆರೇಂಜ್ಡ್ ಮ್ಯಾರೇಜ್. ಈ ಸಂಬಂದವನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೂಚಿಸಿದ್ದು.
ಜೂನಿಯರ್ ಎನ್‌ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ದಕ್ಷಿಣ ಭಾರತದ ವಿವಾಹವನ್ನು ಅದ್ದೂರಿಯಾಗಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರು ತಮ್ಮ ಮೊಮ್ಮಗ ಜೂನಿಯರ್ ಎನ್‌ಟಿಆರ್ ಅವರ ಮದುವೆಯಲ್ಲಿ ಯಾವುದೇ ಒಂದು ಕೊರತೆ ಇರದಂತೆ ಮಾಡಿದ್ದರು ಎಂದು ಹೇಳಲಾಗುತ್ತದೆ.
ವರದಿಯ ಪ್ರಕಾರ, ದಂಪತಿಗಳ ಮದುವೆಗೆ ಸುಮಾರು 100 ಕೋಟಿ ರೂ ವೆಚ್ಚವಾಗಿದೆ. ಲಕ್ಷ್ಮಿ ಪ್ರಣತಿ ಅವರ ಮದುವೆಯ ಸೀರೆಯ ಬೆಲೆಯೇ 1 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು ಮಾತ್ರವಲ್ಲದೆ ಮಂಟಪದ ಅಲಂಕಾರಕ್ಕೂ 18 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. ಮದುವೆ ಅತಿಥಿಗಳಿಗಾಗಿ ವಿಶೇಷ ರೈಲು ಸಹ ಇತ್ತು ಎಂಬ ವರದಿಗಳೂ ಇವೆ. ಸುಮಾರು 15,000 ಅತಿಥಿಗಳು ಮದುವೆಯಲ್ಲಿ ಭಾಗವಹಿಸಿದ್ದರು.
ಜೂನಿಯರ್ ಎನ್‌ಟಿಆರ್ ಮತ್ತು ಲಕ್ಷ್ಮಿ ಪ್ರಣಂತಿ 2011 ರಲ್ಲಿ ವಿವಾಹವಾಗಿದ್ದರೂ, ನಟ 2010 ರಲ್ಲಿಯೇ ಮದುವೆಯಾಗಲು ಬಯಸಿದ್ದರು. ಆಗ ಲಕ್ಷ್ಮಿಗೆ ಕೇವಲ 17 ವರ್ಷ ವಯಸ್ಸಾಗಿತ್ತು, ಹೀಗಾಗಿ ನಟನ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಜೂನಿಯರ್ ಎನ್‌ಟಿಆರ್ ನಂತರ ಲಕ್ಷ್ಮಿಗೆ 18 ವರ್ಷ ತುಂಬುವವರೆಗೆ ಕಾಯಬೇಕಾಯಿತು, ನಂತರ ಅವರು ಅಂತಿಮವಾಗಿ 2011 ರಲ್ಲಿ ವಿವಾಹವಾದರು.
ಜೂನಿಯರ್ ಎನ್‌ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ಅವರಿಗೆ ಇಬ್ಬರು ಪುತ್ರರು - ಅಭಯ್ ರಾಮ್ ಮತ್ತು ಭಾರ್ಗವ್ ರಾಮ್. ಅವರ ಹಿರಿಯ ಮಗ ಅಭಯ್ ಜುಲೈ 22, 2014 ರಂದು ಜನಿಸಿದರೆ, ಭಾರ್ಗವ್ ನಾಲ್ಕು ವರ್ಷಗಳ ನಂತರ ಜೂನ್ 14, 2018 ರಂದು ಜನಿಸಿದರು.
ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಕೆಲಸದ ಮುಂಭಾಗದಲ್ಲಿ, ಜೂನಿಯರ್ ಎನ್‌ಟಿಆರ್ ಕೊನೆಯ ಬಾರಿಗೆ ಎಸ್‌ಎಸ್ ರಾಜ್‌ಮೌಳಿಯ ಆರ್‌ಆರ್‌ಆರ್‌ನಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರಿಯಾ ಸರನ್ ಸಹ ನಟರು.