ತೆಲುಗು ಸ್ಟಾರ್ ನಟರಾದ ರಾಮ್ ಚರಣ್(Ram Charan) ಮತ್ತು ಜೂ ಎನ್ ಟಿ ಆರ್(Jr NTR) ಅಭಿನಯದ ಆರ್ ಆರ್ ಆರ್(RRR) ಸಿನಿಮಾ ಕೊನೆಗೂ 1000 ಕೋಟಿ ರೂಪಾಯಿ ಗಡಿದಾಟುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ತೆಲುಗು ಸ್ಟಾರ್ ನಟರಾದ ರಾಮ್ ಚರಣ್(Ram Charan) ಮತ್ತು ಜೂ ಎನ್ ಟಿ ಆರ್(Jr NTR) ಅಭಿನಯದ ಆರ್ ಆರ್ ಆರ್(RRR) ಸಿನಿಮಾ ಕೊನೆಗೂ 1000 ಕೋಟಿ ರೂಪಾಯಿ ಗಡಿದಾಟುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆರ್ ಆರ್ ಆರ್ ಅನೇಕ ಸಿನಿಮಾ ಕಲೆಕ್ಷಗಳನ್ನು ಧೂಳಿಪಟ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ ಆರ್ ಆರ್ ಆರ್ 1000 ಕೋಟಿ ಕಲೆಕ್ಷನ್(1000 crore club worldwide) ಮಾಡಿ ಅಬ್ಬರಿಸುತ್ತಿದೆ. ವಿಶ್ವದಾದ್ಯಂತ ಆರ್ ಆರ್ ಆರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ ಟಾಪ್ 2 ಸ್ಥಾನದಲ್ಲಿ ಆಮೀರ್ ಖಾನ್ ನಟನೆಯ ದಂಗಲ್ ಮತ್ತು ಬಾಹುಬಲಿ ಕನ್ ಕ್ಲೂಷನ್ ಸಿನಿಮಾವಿದೆ. ಇದೀಗ ಮೂರನೆ ಸ್ಥಾನದಲ್ಲಿ ಆರ್ ಆರ್ ಆರ್ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ 2024 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಂಗಲ್(Dangal) ಸಿನಿಮಾವಿದೆ. 1810 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಹುಬಲಿ -2(Bahubali 2) ಎರಡನೇ ಸ್ಥಾನದಲ್ಲಿದೆ. ಇದೀಗ ಆರ್ ಆರ್ ಆರ್ 1000 ಕೋಟಿಯ ಕಡಿ ದಾಟುವ ಮೂಲಕ 3ನೇ ಸ್ಥಾನದಲ್ಲಿದೆ.

RRR Movie: ಆ ಒಂದು ಹಾಡಿಗೆ 17 ಟೇಕ್‌ಗಳನ್ನು ತೆಗೆದುಕೊಂಡಿದ್ದ ರಾಜಮೌಳಿ!

ಈ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದ ಎರಡು ಸಿನಿಮಾಗಳಿರುವುದು ಹೆಮ್ಮೆಯ ವಿಚಾರವಾಗಿದೆ. ಈಗಾಗಲೇ ಅನೇಕ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿ ಮುನ್ನುಗ್ಗುತ್ತಿರುವ ರಾಜಮೌಳಿ ಅವರ ಆರ್ ಆರ್ ಆರ್ ದಂಗಲ್ ಮತ್ತು ಬಾಲಿವುಡ್-2 ಸಿನಿಮಾವನ್ನು ಬೀಟ್ ಮಾಡುತ್ತಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಂದಹಾಗೆ 16ನೇ ದಿನ ಹಿಂದಿಯಲ್ಲಿ ಆರ್ ಆರ್ ಆರ್ 8 ಕೋಟಿ ಬಾಚಿಕೊಂಡಿತ್ತು. ಈಗಾಗಲೇ ಹಿಂದಿಯಲ್ಲಿ ಒಟ್ಟು 221.59 ಕೋಟಿ ಬಾಚಿಕೊಂಡಿದೆ. 100 ಕೋಟ ಕ್ಲಬ್ ಸೇರಿದ ಅತ್ಯಂತ ವೇಗದ ಸಿನಿಮಾಗಳಲ್ಲಿ ಆರ್ ಆರ್ ಆರ್ ಕೂಡ ಒಂದು.

ಅಬ್ಬಾ, Alia Bhattಗೆ ಎಷ್ಟು ಸೊಕ್ಕು, ಅದಕ್ಕೆ ಹೇಳೋದು ಉತ್ತರ ಭಾರತೀಯ ನಟಿ ಅಂತ!

ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.