ನಟ ರಾಮ್ ಚರಣ್‌ಗಿರೋ ದೊಡ್ಡ ವೀಕ್‌ನೇಸ್ ರಿವೀಲ್ ಮಾಡಿ ಫುಲ್ ಕಾಡಿಸಿದ್ದ ಜೂ.ಎನ್‌ಟಿಆರ್
ಎಲ್ಲರಿಗೂ ಏನಾದರೊಂದು ವೀಕ್‌ನೆಸ್ ಇರುತ್ತೆ. ಸೆಲೆಬ್ರಿಟಿಗಳು ಇದಕ್ಕೆ ಹೊರತಲ್ಲ, ಅದೇ ರೀತಿ ನಟ ರಾಮ್ ಚರಣ್‌ಗೂ ಒಂದು ದೌರ್ಬಲ್ಯ ಇದೆ. ಅದನ್ನು ಜೂ. ಎನ್‌ಟಿಆರ್ ಬಯಲು ಮಾಡಿದ್ದಾರೆ. ಅಷ್ಟೇ ಅಲ್ಲ, ಚೆನ್ನಾಗಿ ಆಟ ಆಡಿದ್ದಾರೆ. ಒಂದು ರೀತಿಯಲ್ಲಿ ರ‍್ಯಾಗಿಂಗ್ ಮಾಡಿದ್ದಾರೆ ಎಂದೇ ಹೇಳಬಹುದು ಅದೇನು ಅಂತ ಇಲ್ಲಿ ನೋಡೋಣ..
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಈಗ “ಗೇಮ್ ಚೇಂಜರ್” ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗುತ್ತೆ. ದಿಗ್ಗಜ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾ ಆಗಿರೋದ್ರಿಂದ, ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಮೊದಲಿಗೆ ಈ ಕಾಂಬಿನೇಷನ್ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಪ್ರಮೋಷನ್‌ನಲ್ಲಿ ಟೀಮ್ ಬ್ಯುಸಿ ಇದೆ. ವಿಜಯವಾಡದ ವಜ್ರ ಗ್ರೌಂಡ್‌ನಲ್ಲಿ ರಾಮ್ ಚರಣ್‌ರ ಅತಿ ಉದ್ದದ ಕಟೌಟ್ (256 ಅಡಿ ಎತ್ತರ) ಸ್ಥಾಪಿಸಲಾಗಿದೆ. ಇನ್ನೇನು ಅದನ್ನ ಲಾಂಚ್ ಮಾಡ್ತಿದ್ದಾರೆ.
ಇದರಜತೆಗೆ ಆದಷ್ಟು ಬೇಗನೇ ಆಂಧ್ರಪ್ರದೇಶದಲ್ಲಿ ಒಂದು ದೊಡ್ಡ ಪ್ರೀ ರಿಲೀಸ್ ಈವೆಂಟ್ ಇದೆಯಂತೆ. ಅದರ ತಯಾರಿ ನಡೀತಿದೆ. ಇದರಲ್ಲಿ ಚಿರಂಜೀವಿ, ಪವನ್, ಬನ್ನಿ, ಚರಣ್ ಜೊತೆಗೆ ಬೇರೆ ಮೆಗಾ ಹೀರೋಗಳು ಭಾಗವಹಿಸ್ತಾರಂತೆ. ಇದು 'ಗೇಮ್ ಚೇಂಜರ್' ಸಿನಿಮಾಗೆ ಪ್ರಮೋಷನ್ ತರೋದಷ್ಟೇ ಅಲ್ಲ, ಮೆಗಾ ಫ್ಯಾಮಿಲಿ ಒಂದೇ ಅನ್ನೋ ಸಂದೇಶ ಕೊಡೋ ಈವೆಂಟ್ ಕೂಡ ಆಗುತ್ತಂತೆ. ಬನ್ನಿ ನಿಜವಾಗ್ಲೂ ಬರ್ತಾರಾ ಅನ್ನೋದು ಪ್ರಶ್ನೆ. ಬಂದ್ರೆ ಮಾತ್ರ ಬೇರೇ ಲೆವೆಲ್. ಪವನ್, ಬನ್ನಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ್ರೆ, ಅದರ ರೇಂಜ್ ಬೇರೆನೇ ಇರುತ್ತೆ ಅಂತ ಅಭಿಮಾನಿಗಳು ಹೇಳ್ತಿದ್ದಾರೆ.
ಈ ಮಧ್ಯೆ ನಟ ರಾಮ್ ಚರಣ್‌ಗೆ ಸಂಬಂಧಿಸಿದ ಒಂದು ದೌರ್ಬಲ್ಯ ಈಗ ಬಯಲಾಗಿದೆ ರಾಮ್ ಚರಣ್, ಎನ್‌ಟಿಆರ್ ಒಳ್ಳೆ ಫ್ರೆಂಡ್ಸ್. ಬೆಸ್ಟ್ ಫ್ರೆಂಡ್ಸ್ ಕೂಡ. ಇಂಡಸ್ಟ್ರಿಯಲ್ಲಿ ಈ ಇಬ್ಬರೂ ಆಗಾಗ್ಗೆ ಭೇಟಿ ಮಾಡ್ತಾನೆ ಇರ್ತಾರೆ ಇವರಿಗೆ ಮಹೇಶ್ ಬಾಬು ಕೂಡ ಫ್ರೆಂಡ್. ಈ ಮೂವರ ಸ್ನೇಹ ಬಹಳ ದಿನಗಳಿಂದ ಇದೆ. ಮಹೇಶ್‌ರನ್ನ ಬಿಟ್ಟರೆ, ಎನ್‌ಟಿಆರ್, ರಾಮ್ ಚರಣ್ ಕೊನೆಯದಾಗಿ “ಆರ್‌ಆರ್‌ಆರ್” ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ರು. ಈ ಸಿನಿಮಾ ಭಾರಿ ಗೆಲುವು ಸಾಧಿಸಿತ್ತು. ಆಸ್ಕರ್ ಕೂಡ ಗೆದ್ದುಕೊಂಡಿತ್ತು. “ನಾಟು ನಾಟು” ಹಾಡಿಗೆ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ಆಸ್ಕರ್ ಬಂದಿದ್ದು ಗೊತ್ತೇ ಇದೆ.
ಆದ್ರೆ ಈ ಸಿನಿಮಾ ಪ್ರಮೋಷನ್ ಸಮಯದಲ್ಲಿ ರಾಮ್ ಚರಣ್‌ರ ದೊಡ್ಡ ಸೀಕ್ರೆಟ್ ಒಂದನ್ನ ಎನ್‌ಟಿಆರ್ ಬಯಲು ಮಾಡಿದ್ರು. ಚರಣ್‌ರ ದೌರ್ಬಲ್ಯನ ರಿವೀಲ್ ಮಾಡಿದ್ರು. ರಾಮ್ ಚರಣ್‌ಗೆ ಮರೆಗುಳಿತನ ಇದೆಯಂತೆ. ಅದರಲ್ಲೂ ಹೆಸರುಗಳ ವಿಷಯದಲ್ಲಿ ಅಂತ ಎನ್‌ಟಿಆರ್ ಹೇಳಿದ್ರು. ಈಗ ಹೇಳಿದ ಹೆಸರು ಸ್ವಲ್ಪ ಹೊತ್ತಾದ್ಮೇಲೆ ಕೇಳಿದ್ರೆ ಹೇಳೋಕ್ಕೆ ಆಗಲ್ಲ ಅಂತ ಹೇಳಿದ್ರು. ಈ ಸಂದರ್ಭದಲ್ಲಿ 'ಆರ್‌ಆರ್‌ಆರ್' ಶೂಟಿಂಗ್‌ನ ಒಂದು ಅನುಭವವನ್ನು ಕೂಡ ಅವರು ಹೇಳಿದ್ರು.
ರಾಮ್‌ಚರಣ್ ಒಬ್ಬ ಅಸಿಸ್ಟೆಂಟ್ ಒಂದು ಹೆಸರು ಹೇಳಿದ್ರೆ, ಸ್ವಲ್ಪ ಹೊತ್ತಾದ್ಮೇಲೆ ಬೇರೆ ರೀತಿ ಕರೀತಿದ್ರಂತೆ, ಆಮೇಲೆ ಇನ್ನೊಂದು ಹೆಸರಿನಿಂದ ಕರೀತಿದ್ರಂತೆ. ಏನು ಅಂತ ಆ ಹುಡುಗನನ್ನ ಕೇಳಿದ್ರೆ, ಹೆಸರು ತಪ್ಪಿದ್ರೂ ಸರ್ ಕರೀತಿರೋದು ನನ್ನನ್ನೇ ಅಂತ ಗೊತ್ತಾಗುತ್ತೆ, ಹೆಸರು ಸರಿ ಮಾಡೋದು ಮುಖ್ಯ ಅನ್ನಿಸಿಲ್ಲ ಅಂತ ಆ ಹುಡುಗ ಹೇಳಿದ್ರಂತೆ. ಇದನ್ನ ಕೇಳಿದ ಆ್ಯಂಕರ್ ನನ್ನ ಹೆಸರು ನೆನಪಿದ್ಯಾ ಅಂತ ಕೇಳಿದ್ರು. ಒಮ್ಮೆಲೆ ಸಿಕ್ಕಿಬಿದ್ದ ರಾಮ್ ಚರಣ್ ನಗುತ್ತಾ ಮುಚ್ಚಿಹಾಕಿದ್ರು. ಒಟ್ಟಾರೆ, ರಾಮ್ ಚರಣ್‌ರ ದೌರ್ಬಲ್ಯ ಬಯಲು ಮಾಡಿ ಚೆನ್ನಾಗಿ ಆಟ ಆಡಿದ್ರಂತೆ ಎನ್‌ಟಿಆರ್.
ಈಗ ರಾಮ್ ಚರಣ್ “ಗೇಮ್ ಚೇಂಜರ್” ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸೋಲೋ(ಏಕಾಂಗಿ) ಹೀರೋ ಆಗಿ ಬಂದು ಆರು ವರ್ಷ ಆಗಿದೆ. 'ವಿಜಯ್ ವಿಧೇಯ ರಾಮ' ನಂತರ ರಾಮ್‌ಚರಣ್ ಸೋಲೋ ಸಿನಿಮಾ ಮಾಡಿಲ್ಲ. 'ಆರ್‌ಆರ್‌ಆರ್' ನಲ್ಲಿ ತಾರಕ್ ಜೊತೆ ನಟಿಸಿದ್ರು. ಆಮೇಲೆ 'ಆಚಾರ್ಯ' ದಲ್ಲಿ ಅಪ್ಪ ಚಿರಂಜೀವಿ ಜೊತೆ ನಟಿಸಿದ್ರು. ಈಗ ಸೋಲೋ ಆಗಿ 'ಗೇಮ್ ಚೇಂಜರ್' ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಜನವರಿ 10 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತೆ. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಹೀರೋಯಿನ್. ದಿಲ್ ರಾಜು ನಿರ್ಮಾಪಕ.