ಜೇಹ್ Birthday ದಿನ ಒಂದೇ ಫ್ರೇಮ್‌ನಲ್ಲಿ ಸೈಫ್ 4 ಮಕ್ಕಳು ಸೆರೆಯಾಗಿದ್ಹೀಗೆ!
ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಕಿರಿಯ ಮಗ ಜೆಹ್ (Jeh Ali Khan) ಮೊದಲ ಹುಟ್ಟುಹಬ್ಬವನ್ನು ಫೆಬ್ರವರಿ 21 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ, ಜೆಹ್ ಅವರ ತಾಯಿಯ ಅಜ್ಜ ರಣಧೀರ್ ಕಪೂರ್ ಅವರ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿಯನ್ನು ನಡೆಸಲಾಯಿತು, ಇದರಲ್ಲಿ ಸೈಫ್ ಅಲಿಖಾನ್ ಅವರ ಎಲ್ಲಾ ನಾಲ್ಕು ಮಕ್ಕಳು ಒಟ್ಟಿಗೇ ಕಾಣಿಸಿಕೊಂಡರು. ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಸೈಫ್ ಅವರ ನಾಲ್ವರು ಮಕ್ಕಳಾದ ಸಾರಾ, ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಮಯದಲ್ಲಿ, ಅಣ್ಣ ಇಬ್ರಾಹಿಂ ತೈಮೂರ್ ಅನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡಾಗ, ಇದನ್ನು ನೋಡಿದ ಕರೀನಾ ಕಪೂರ್ ಅವರ ಕಿರಿಯ ಮಗ ಜೆಹ್ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ನೋಡಿದ ಸಾರಾ ಅಲಿ ಖಾನ್ ಮತ್ತು ತಂದೆ ಸೈಫ್ ಅಲಿ ಖಾನ್ ನಗುತ್ತಿದ್ದಾರೆ.
ಸೈಫ್ ಮಕ್ಕಳಾದ ಸಾರಾ, ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಪೋಟೋದಲ್ಲಿ ಸೈಫ್ ತನ್ನ ನಾಲ್ಕೂ ಮಕ್ಕಳ ಜೊತೆ ಪೋಸ್ ಕೊಡುತ್ತಿರುವ ಈ ಫೋಟೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಕೂಡ ಆಗಿದೆ.
ಫೋಟೋವೊಂದರಲ್ಲಿ, ಒಂದು ವರ್ಷದ ಜೆಹ್ ತನ್ನ ಅಕ್ಕ ಸಾರಾ ಅಲಿ ಖಾನ್ ಅವರ ಮಡಿಲಲ್ಲಿ ಕಾಣಿಸಿಕೊಂಡಿದ್ದಾನೆ. ಈ ಸಮಯದಲ್ಲಿ, ತಂದೆ ಸೈಫ್ ಮತ್ತು ಹಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.
ಮತ್ತೊಂದು ಫೋಟೋದಲ್ಲಿ, ಜೆಹ್ ಅಕ್ಕ ಸಾರಾ ಅಲಿ ಖಾನ್ ಅವರೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಸಾರಾ ಅಲಿ ಜೆಹ್‌ಗೆ ಏನನ್ನೋ ತಿನ್ನಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವನು ಆಟದ ಸಾಮಾನು ಹಿಡಿಯಲು ಪ್ರಯತ್ನಿಸುತ್ತಿದ್ದಾನೆ.
ಮತ್ತೊಂದು ಫೋಟೋದಲ್ಲಿ, ಜೆಹ್ ಸಹೋದರಿ ಸಾರಾ ಅಲಿ ಖಾನ್ ಅವರ ಮಡಿಲಲ್ಲಿದ್ದಾರೆ. ಅದೇ ಸಮಯದಲ್ಲಿ, ಅವನ ಸಹೋದರ ಇಬ್ರಾಹಿಂ ಅಲಿ ಖಾನ್ ಜೆಹ್ ಅನ್ನು ಮುದ್ದಿಸಿದಾಗ, ಅವನು ಅಣ್ಣನ ಮುಖಕ್ಕೆ ಪ್ರೀತಿಯಿಂದ ಹೊಡೆಯಲು ಪ್ರಾರಂಭಿಸುತ್ತಾನೆ. ಈ ಫೋಟೋದಲ್ಲಿ ಜೆಹ್ ತುಂಬಾ ಮುದ್ದಾಗಿ ಕಾಣುತ್ತಿದ್ದಾನೆ.
ಸಾರಾ ಅಲಿ ಖಾನ್ ಅವರು ಬಿಳಿ ಬಣ್ಣದ ಫ್ರಾಕ್ ಧರಿಸಿ ಜೆಹ್ ಅವರ ಹುಟ್ಟುಹಬ್ಬದ ಆಚರಣೆಗೆ ಆಗಮಿಸಿದರು, ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ, ಎರಡನೇ ಫೋಟೋದಲ್ಲಿ, ಜೆಹ್ ತನ್ನ ಅತ್ತೆ ಸಬಾ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದಾನೆ.
ಈ ಫೋಟೋದಲ್ಲಿ ಜೆಹ್ ಅವರ ದೊಡ್ಡಮ್ಮ ಕರಿಷ್ಮಾ ಕಪೂರ್ (Karishma Kapoor) ಅವರ ಮಡಿಲಲ್ಲಿ ಕಾಣಿಸಿಕೊಂಡಿದ್ದಾನೆ. ಮತ್ತೊಂದು ಫೋಟೋದಲ್ಲಿ, ಜೆಹ್ ತಾಯಿ ಕರೀನಾ ಕಪೂರ್ ಅವರ ಮಡಿಲಲ್ಲಿ ಪೋಸ್ ನೀಡುತ್ತಿದ್ದಾನೆ.