ಮದುವೆಯಾದ ಮೇಲೂ ಶ್ರೀದೇವಿ, ಹೇಮಾ ಮಾಲಿನಿ ಜೊತೆ ಅಫೇರ್ ಇಟ್ಟುಕೊಂಡಿದ್ದ ಈ ಹೀರೋ!
ಜೀತೇಂದ್ರ ನಿನ್ನೆಯಷ್ಟೇ 83ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಪ್ರೇಮ ಜೀವನದ ಬಗ್ಗೆ ಹರಿದಾಡುತ್ತಿದ್ದ ಗಾಇಪ್ಗಳ ಬಗ್ಗೆ ಇಲ್ಲಿದೆ ವರದಿ

ಜಂಪಿಂಗ್ ಜಾಕ್ ಆಗಿ ಪ್ರಸಿದ್ಧಿ ಪಡೆದ ಪ್ರಮುಖ ನಟ ಜಿತೇಂದ್ರಗೆ 83 ವರ್ಷ ತುಂಬಿದೆ. 1942 ಏಪ್ರಿಲ್ 7 ರಂದು ಅಮೃತಸರದಲ್ಲಿ ಜನಿಸಿದ ಜಿತೇಂದ್ರ 1974 ರಲ್ಲಿ ಶೋಭಾರನ್ನು ವಿವಾಹವಾದರು. ಆದರೆ ತಮಗೆ 14 ವರ್ಷ ವಯಸ್ಸಿದ್ದಾಗ ಜಿತೇಂದ್ರ ಮೊದಲ ಬಾರಿಗೆ ನೋಡಿದ ಹುಡುಗಿ ಶೋಭಾ ಎಂದು ನಿಮಗೆ ತಿಳಿದಿದೆಯೇ. ಆಕೆಯನ್ನು ಮದುವೆಯಾದ ನಂತರ ಜಿತೇಂದ್ರ ವೃತ್ತಿ ಜೀವನದಲ್ಲಿ ಯಶಸ್ಸಿನ ಶಿಖರ ಏರುತ್ತಿದ್ದಂತೆ ಹಲವು ಸ್ಟಾರ್ ನಟಿಯರೊಂದಿಗೆ ರಿಲೇಷನ್‌ನಲ್ಲಿದ್ದರಂತೆ.
ಜಿತೇಂದ್ರ ನಿಜವಾದ ಹೆಸರು ರವಿ ಕಪೂರ್. ಅವರಿಗೆ 14 ವರ್ಷ ವಯಸ್ಸಿದ್ದಾಗ ಶೋಭಾರನ್ನು ಮೊದಲ ಬಾರಿಗೆ ಮೆರೈನ್ ಡ್ರೈವ್‌ನಲ್ಲಿ ನೋಡಿ ಅವರನ್ನು ಪ್ರೀತಿಸಲು ಪ್ರಾರಂಭಿಸಿದರು. ಆದರೆ, ಶೋಭಾ ಕಾಲೇಜಿನಲ್ಲಿದ್ದಾಗ ಜಿತೇಂದ್ರ ಬಾಲಿವುಡ್ ಸ್ಟಾರ್ ಆಗಿ ಮಿಂಚುತ್ತಿದ್ದರು. ಆ ಸಮಯದಲ್ಲಿಯೇ ಈ ಇಬ್ಬರ ನಡುವೆ ನಿಜವಾದ ಪ್ರೇಮ ಚಿಗುರೊಡೆಯಿತು.
ಶೋಭಾ ಏರ್ ಹೋಸ್ಟೆಸ್ ಆಗಿ ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಮಯದಲ್ಲಿ, ಅವರು ಭಾರತಕ್ಕೆ ಬಂದಾಗಲೆಲ್ಲಾ, ಜಿತೇಂದ್ರ ಪ್ರೇಮ ವ್ಯವಹಾರದ ಬಗ್ಗೆ ಸುದ್ದಿಗಳನ್ನು ಕೇಳುತ್ತಿದ್ದರು. ಆದರೆ ಏನೋ ಬಣ್ಣಬಣ್ಣದ ಮಾತಾಡಿ ಶೋಭಾನನ್ನು ಒಪ್ಪಿಸಿದ ಜಿತೇಂದ್ರ. ಆಕೆಯನ್ನು ಲಾಂಗ್ ಡ್ರೈವ್‌ಗೆ ಕರೆದುಕೊಂಡು ಹೋಗುತ್ತಿದ್ದರಂತೆ.
ಹೀಗಾಗಿ ಜಿತೇಂದ್ರ ಇತರ ನಟಿಯರೊಂದಿಗೆ ಅಫೇರ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದರೂ ಶೋಭಾ ಜೀತೇಂದ್ರರನ್ನು ಮದುವೆಯಾಗಲು ನಿರ್ಧರಿಸಿದರು. ಅವರ ಮದುವೆಗೆ 1973 ಏಪ್ರಿಲ್ 13 ರಂದು ದಿನಾಂಕವನ್ನು ನಿಗದಿಪಡಿಸಲಾಯಿತು. ಆದರೆ ಈ ಸಮಯದಲ್ಲಿ ಜಿತೇಂದ್ರ ತಂದೆ ಅನಾರೋಗ್ಯಕ್ಕೆ ಒಳಗಾದರು, ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಾಯಿತು. ಇದರಿಂದ ಮದುವೆ ಇನ್ನೇನು ಎರಡು ಗಂಟೆಗಳಿವೆ ಎನ್ನುವಾಗ ಮದುವೆ ನಿಂತುಹೋಯಿತು. ಇತ್ತ ಶೋಭಾ ಮದುವೆಯಾಗಲು ಆಗಲೇ ತನ್ನ ಕೆಲಸವನ್ನು ಬಿಟ್ಟಿದ್ದಳು.
ಇತ್ತ ಜಿತೇಂದ್ರ ವೃತ್ತಿಜೀವನವು ಕುಸಿತ ಕಂಡ ನಂತರ ಜಿತೇಂದ್ರ ಮತ್ತು ಶೋಭಾ ಸಂಬಂಧದಲ್ಲಿಯೂ ಸಮಸ್ಯೆಗಳು ಮತ್ತಷ್ಟು ಹೆಚ್ಚಾದವು. ಅವರ ಸಿನಿಮಾಗಳು ಸತತವಾಗಿ ಸೋಲಲು ಪ್ರಾರಂಭಿಸಿದವು. ನಂತರ 1974 ರಲ್ಲಿ ಜಿತೇಂದ್ರ ಚಿತ್ರ 'ಬಿದಾಯಿ' ಬಿಡುಗಡೆಯ ದಿನಾಂಕ ಬಂದಿತು. ಈ ಸಿನಿಮಾ ಬಿಡುಗಡೆಯಾಗುವ ಮೊದಲು, ಈ ಸಿನಿಮಾ ಹಿಟ್ ಆದರೆ ತಾನು ಮದುವೆಯಾಗುವುದಾಗಿ ಶೋಭಾಗೆ ಜಿತೇಂದ್ರ ಮಾತುಕೊಟ್ಟರಂತೆ. ಅದರಂತೆ 1974 ಅಕ್ಟೋಬರ್ 9 ರಂದು ಬಿಡುಗಡೆಯಾದ 'ಬಿದಾಯಿ' ಸೂಪರ್ ಹಿಟ್ ಆಯಿತು. ಕೊಟ್ಟ ಮಾತಿನಂತೆ 1974 ಅಕ್ಟೋಬರ್ 31 ರಂದು ಶೋಭಾರನ್ನು ಜೀತೇಂದ್ರ ವಿವಾಹವಾದರು.
1974 ಅಕ್ಟೋಬರ್ 31 ರಂದೇ ಶೋಭಾ ಜೊತೆಗಿನ ತನ್ನ ಮದುವೆಯ ಬಗ್ಗೆ ಜಿತೇಂದ್ರ ತನ್ನ ಹೆತ್ತವರಿಗೆ ಹೇಳಿದರಂತೆ. ಆದರೆ ಅವರು ಕೆಲವು ದಿನ ಕಾಯುವಂತೆ ಹೇಳಿದರಂತೆ. ಆದರೆ ಜಿತೇಂದ್ರ ತನ್ನ ಮದುವೆಯನ್ನು ಮುಂದೂಡಲು ಒಪ್ಪಲಿಲ್ಲ. ಕೊನೆಗೂ ಮದುವೆಯಾದರು. ಆ ಸಮಯದಲ್ಲಿ ಶೋಭಾ ತಾಯಿ ಜಪಾನ್‌ನಲ್ಲಿ ಇದ್ದ ಕಾರಣ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಜಿತೇಂದ್ರ ಮತ್ತು ಶೋಭಾ ದಂಪತಿಗೆ ಏಕ್ತಾ ಕಪೂರ್, ತುಷಾರ್ ಕಪೂರ್ ಎಂಬ ಇಬ್ಬರು ಮಕ್ಕಳು ಜನಿಸಿದರು.
ಇತ್ತ ಶೋಭಾರನ್ನು ಮದುವೆಯಾಗಿದ್ದ ನಟ ಜೀತೇಂದ್ರ ಇದೇ ಸಮಯದಲ್ಲಿ ಹೇಮಾ ಮಾಲಿನಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅತ್ತ ಹೇಮಾಮಾಲಿನಿ ಅವರು ನಟ ಧರ್ಮೇಂದ್ರ ಅವರನ್ನು ಇದೇ ಸಮಯದಲ್ಲಿ ಪ್ರೀತಿಸುತ್ತಿದ್ದರು ಇದರಿಂದ ಜಿತೇಂದ್ರ ಮತ್ತು ಶೋಭಾ ನಡುವಿನ ಸಂಬಂಧವೂ ಏರಿಳಿತಗಳ ನಡುವೆ ಸಾಗುತ್ತಿತ್ತು. ಜೀವನದಲ್ಲಿನ ಈ ಗೊಂದಲದಿಂದ ಬೇಸತ್ತ ಜಿತೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾಗಲು ನಿರ್ಧರಿಸಿದರು. ಆದರೆ ಅವರಿಬ್ಬರೂ ವಿವಾಹ ವೇದಿಕೆಯಲ್ಲಿದ್ದಾಗ, ಕುಡಿದ ಮತ್ತಿನಲ್ಲಿದ್ದ ಧರ್ಮೇಂದ್ರ ಅಲ್ಲಿಗೆ ಬಂದು ಗಲಾಟೆ ಮಾಡಿದರು ಈ ರೀತಿಯಾಗಿ, ಜಿತೇಂದ್ರ ಮತ್ತು ಹೇಮಾ ಮದುವೆ ಮುಂದೂಡಲ್ಪಟ್ಟಿತು.
ಜಿತೇಂದ್ರ ಒಮ್ಮೆ ದಕ್ಷಿಣದಲ್ಲೂ ಸಿನಿಮಾಗಳನ್ನು ಮಾಡಿದ್ದಾರೆ. ಆ ಸಮಯದಲ್ಲಿ ಅವರು ಶ್ರೀದೇವಿ ಅವರನ್ನು ಭೇಟಿಯಾದರು. ಬಾಲಿವುಡ್‌ನಲ್ಲಿ ಅವಕಾಶಗಳಿಗಾಗಿ ಶ್ರೀದೇವಿ ಅವರನ್ನು ಮುಂಬೈಗೆ ಕರೆತಂದರು. ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು. ಇದರಿಂದ ಇವರಿಬ್ಬರ ಸಂಬಂಧದ ಬಗ್ಗೆ ವದಂತಿ ಪ್ರಾರಂಭವಾದವು. ಆ ಸಮಯಕ್ಕೆ ಜಿತೇಂದ್ರಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಶ್ರೀದೇವಿ ಜೊತೆಗಿನ ಸಂಬಂಧವನ್ನು ಮುಗಿಸದಿದ್ದರೆ, ತಾನು ಮನೆ ಬಿಟ್ಟು ಹೋಗುವುದಾಗಿ ಪತ್ನಿ ಶೋಭಾ ಜಿತೇಂದ್ರಗೆ ಅಲ್ಟಿಮೇಟಮ್ ನೀಡಿದರು. ಕೊನೆಗೆ ಜಿತೇಂದ್ರ ಶ್ರೀದೇವಿ ಜೊತೆಗಿನ ತನ್ನ ಸ್ನೇಹವನ್ನು ಮುರಿದುಕೊಂಡು ಮದುವೆ ಬಂಧವನ್ನು ಉಳಿಸಿಕೊಂಡರು.
ಜಿತೇಂದ್ರ ಪ್ರೇಮಪುರಾಣ ಇಷ್ಟಕ್ಕೆ ನಿಂತಿಲ್ಲ, ನಟಿ ಜಯಪ್ರದಾ ಜೊತೆಯೂ ಜಿತೇಂದ್ರ ಬಹಳಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಶ್ರೀದೇವಿ ತರಹ ಜಯಪ್ರದಾ ಕೂಡ ದಕ್ಷಿಣದಿಂದ ಬಂದವರು. ಜಿತೇಂದ್ರ ಅವರೇ ಆಕೆಯನ್ನು ಬಾಲಿವುಡ್‌ನಲ್ಲಿ ಪ್ರಮೋಟ್ ಮಾಡಿದರು. ಜಯಪ್ರದಾರನ್ನು ಬಾಲಿವುಡ್‌ಗೆ ಕರೆತಂದ ಜಿತೇಂದ್ರ ತಾನು ಶ್ರೀದೇವಿ ಮಾತ್ರವಲ್ಲ ಯಾರನ್ನಾದರೂ ಸ್ಟಾರ್ ಮಾಡಬಲ್ಲೆ ಎಂದು ಹೇಳಿದ್ದರಂತೆ. ಕೆಲವು ವರದಿಗಳ ಪ್ರಕಾರ ಜಯಪ್ರದಾ ಜಿತೇಂದ್ರನನ್ನು ಹುಚ್ಚನಂತೆ ಪ್ರೀತಿಸಿದರಂತೆ, ಆದರೆ ಆಕೆಯ ವಿಷಯದಲ್ಲಿ ಜಿತೇಂದ್ರ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ, ಇದರಿಂದ ಇವರ ಸಂಬಂಧ ಬ್ರೇಕಪ್‌ಗೆ ಕಾರಣವಾಯಿತು ಎಂಬ ಮಾಹಿತಿ ಇದೆ. ಹೀಗೆ ಮದುವೆಯಾದ ಮೇಲೂ ಜಿತೇಂದ್ರ ಮೂವರು ನಟಿಯರೊಂದಿಗೆ ಅಫೇರ್ ನಡೆಸಿದ್ದರು.