ಮೂರು ಮಕ್ಕಳ ತಂದೆಯನ್ನು ವರಿಸಿದ ಬಾಲಿವುಡ್‌ ಈ ಟಾಪ್‌ ನಟಿ!

First Published Apr 3, 2021, 5:35 PM IST

ಬಾಲಿವುಡ್‌ನ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಜಯಾಪ್ರದಾ ಅವರಿಗೆ 59 ವರ್ಷ. ಏಪ್ರಿಲ್ 3,1962ರಂದು ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ದಕ್ಷಿಣ ಮತ್ತು ಬಾಲಿವುಡ್‌ನ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಈ ನಟಿಯ ಪರ್ಸನಲ್‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಜೀವನದ ರಹಸ್ಯಗಳನ್ನು ಬಹಿರಂಗಪಡಿಸಿದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ದೀರ್ಘಕಾಲದಿಂದ ನಟನೆಯಿಂದ ದೂರ ಉಳಿದಿದ್ದಾರೆ ಮತ್ತು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು 14 ವರ್ಷದವರಿದ್ದಾಗ, ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಅವರ ಡ್ಯಾನ್ಸ್‌ ನೋಡಿದ ನಿರ್ದೇಶಕರೊಬ್ಬರು ತೆಲುಗು ಚಿತ್ರವೊಂದರಲ್ಲಿ ಡ್ಯಾನ್ಸ್ ನಂಬರ್‌ನಲ್ಲಿ ಅವಕಾಶ ಕೊಟ್ಟರು.  3-4 ನಿಮಿಷಗಳ ಡ್ಯಾನ್ಸ್‌ಗೆ 10 ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಆದರೆ, ಆ ಡ್ಯಾನ್ಸೇ‌ ಅವರನ್ನು ಜನಪ್ರಿಯಗೊಳಿಸಿತು ಮತ್ತು ಹಲವಾರು ಚಿತ್ರಗಳಿಂದ ಆಫರ್‌ ಪಡೆಯುವಂತೆ ಮಾಡಿತು.