ರೂಮರ್ಡ್ ಬಾಯ್‌ಫ್ರೆಂಡ್ Orhan Awatramani ಜೊತೆ ಪೋಸ್ ನೀಡಿದ Janhvi Kapoor
ಕೆಲವು ಸಮಯದಿಂದ ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಮತ್ತು ಓರ್ಹಾನ್ ಅವತ್ರಮಣಿ (Orhan Awatramani) ಲಿಂಕಪ್ ಸುದ್ದಿಗಳು ಸಖತ್ ಸದ್ದು ಮಾಡುತ್ತಿವೆ. ಈಗ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಬರ್ತ್‌ಡೇಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅವರ ರೂಮರ್ಡ್ ಬಾಯ್‌ಫ್ರೆಂಡ್ ಓರ್ಹಾನ್ ಅವತ್ರಮಣಿಯ ಜೊತೆ ನಟಿ ಪೋಸ್ ನೀಡಿದ್ದಾರೆ ಮತ್ತು ಫೋಟೋಗಳು ಸಖತ್ ವೈರಲ್ ಆಗಿವೆ

ಈ ವರ್ಷದ ಜನ್ಮದಿನದಂದು ಜಾನ್ವಿ ಅವರ ಫೋಟೋಗಳಿಗೆ ಓರ್ಹಾನ್ ಪ್ರತಿಕ್ರಿಯೆಯನ್ನು ನೀಡಿದ್ದರು. ಬಾಲಿವುಡ್ ನಟಿಯರಾದ ಜಾನ್ವಿ ಕಪೂರ್, ಶನಯಾ ಕಪೂರ್ ಮತ್ತು ಅವರ ಫ್ರೆಂಡ್ಸ್ ಇತ್ತೀಚೆಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಜಾನ್ವಿ ಬರ್ತ್‌ಡೇ ಪಾರ್ಟಿಯ ಫೋಟೋಗಳು ಈಗ ಹೊರಬಿದ್ದಿವೆ. ಪಾರ್ಟಿಯ ಫೋಟೋಗಳ ಕೊಲಾಜ್ ಅನ್ನು ಜಾನ್ವಿ Instagramನಲ್ಲಿ ಫೋಸ್ಟ್ ಮಾಡಿದ್ದಾರೆ. ಈ ಸಮಯದಲ್ಲಿ ಶನಯಾ ಕಪ್ಪು ಬಣ್ಣದ ಕೋ-ಆರ್ಡ್‌ಗಳನ್ನು ಧರಿಸಿದ್ದರು.
ಜಾನ್ವಿ ಮ್ಯಾಂಚಿಂಗ್ ಫ್ಲೋಟರ್‌ಗಳೊಂದಿಗೆ ಶಾರ್ಟ್ ಹಳದಿ ಉಡುಪನ್ನು ಧರಿಸಿದ್ದರು. ಜಾನ್ವಿ ಅವರು ಅಪ್‌ಲೋಡ್ ಮಾಡಿರುವ ಫೋಟೋಗಳಲ್ಲಿ ಹಲವಾರು ಗೆಳೆಯರೊಂದಿಗೆ ಕಾಣಿಸಿಕೊಂಡಿದ್ದಾರೆ.
ನಟಿ ತನ್ನ ವಂದತಿ ಬಾಯ್‌ಫ್ರೆಂಡ್ ಓರ್ಹಾನ್ ಅವತ್ರಮಣಿಯ ಜೊತೆ ಪೋಸ್ ನೀಡಿದ್ದಾರೆ, ಓರ್ಹಾನ್ ಅವತ್ರಮಣಿ ಕಪ್ಪು ಟೀ ಶರ್ಟ್ ಮತ್ತು ಜಾನ್ವಿಯ ಡ್ರೆಸ್‌ನಂತೆ ಹಳದಿ ಬಣ್ಣದ ಲೆಗ್ಗಿಂಗ್ ಧರಿಸಿದ್ದಾರೆ.
ಕಳೆದ ವಾರ, ಓರ್ಹಾನ್ ಅವರು ಅಜಯ್ ದೇವಗನ್ ಅವರ ಮಗಳು ನೈಸಾ ದೇವಗನ್ ಅವರ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಓರ್ಹಾನ್ ಅವತ್ರಮಣಿ ತಮ್ಮ ಇತ್ತೀಚಿನ ಊಟಿ ಹಾಲಿಡೇಯಲ್ಲಿ ಜಾನ್ವಿ ಮತ್ತು ಅವರ ಸಹೋದರಿ ಖುಷಿ ಕಪೂರ್ ಜೊತೆಗೂಡಿದರು.
ಓರ್ಹಾನ್ ಅವತ್ರಮಣಿಯ ಜೊತೆ ಜಾನ್ವಿಯ ಪೋಟೊ ಹೊರಬಿದ್ದ ತಕ್ಷಣ ವೈರಲ್ ಆಗಿವೆ ಮತ್ತು ಫ್ಯಾನ್ಸ್ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ ಹಾಗೂ ನಟಿಯ ಬಾಯ್‌ಫ್ರೆಂಡ್ ಎಂದು ಗೆಸ್ ಮಾಡುತ್ತಿದ್ದಾರೆ.
ಜಾನ್ವಿ 2021 ರಲ್ಲಿ ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ ಹಾರರ್-ಕಾಮಿಡಿ ರೂಹಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ಈಗಾಗಲೇ ಗುಡ್ ಲಕ್ ಜೆರ್ರಿ ಮತ್ತು ಮಿಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ವರುಣ್ ಧವನ್ ಜತೆ ಬವಾಲ್ ಮತ್ತು ಮಿಸ್ಟರ್ ಅಂಡ್ ಮಿಸೆಸ್ ಮಹಿ ನಟಿಯ ಮುಂದಿನ ಯೋಜನೆಗಳಲ್ಲಿ ಸೇರಿವೆ. ಇದೀಗ ಜಾನ್ವಿ ಮಿಸ್ಟರ್ ಅಂಡ್ ಮಿಸೆಸ್ ಮಹಿ ಚಿತ್ರದ ಶೂಟಿಂಗ್ ನಲ್ಲಿದ್ದಾರೆ.