ಪುರುಷರ ಬಗ್ಗೆ ಜಾನ್ವಿಯ ಜಡ್ಜ್ಮೇಂಟ್ ಅನ್ನು ತಾಯಿ ಶ್ರೀದೇವಿ ಎಂದೂ ನಂಬುತ್ತಿರಲಿಲ್ಲವಂತೆ!
ಜಾನ್ವಿ ಕಪೂರ್ (Janhvi Kapoor) ಬಾಲಿವುಡ್‌ನ ಮೊಸ್ಟ್ ಫೇಮಸ್ ಸ್ಟಾರ್ ಕಿಡ್. ಇದುವರೆಗೂ ಮಾಡಿದ್ದು ಕೇಲವೇ ಚಿತ್ರಗಳಾದರೂ ನಟಿ ಸಖತ್ ಜನಪ್ರಿಯ 6 ಮಾರ್ಚ್ 1997 ರಂದು ಮುಂಬೈನಲ್ಲಿ
ಜನಿಸಿದ ಜಾನ್ವಿಗೆ 25 ವರ್ಷ ತುಂಬಿದೆ. ಅವರ ಹಳೆಯ ಇಂಟರ್‌ವ್ಯೂವ್ ಒಂದು ಬೆಳಕಿಗೆ ಬಂದಿದ್ದು ಅದರಲ್ಲಿ ಅವರ ತಾಯಿ ಶ್ರೀದೇವಿ ಬಗ್ಗೆ ಹೇಳಿಕೊಂಡಿದ್ದಾರೆ. ಪುರುಷರ ಬಗ್ಗೆ ಜಾನ್ವಿ ಅವರ ಜಡ್ಜ್‌ಮೇಂಟ್ ಅನ್ನು ಶ್ರೀದೇವಿ ಅವರು ನಂಬುತ್ತಿರಲಿಲ್ಲ ಎಂದು ಜಾನ್ವಿ ಬಹಿರಂಗ ಪಡಿಸಿದ್ದಾರೆ.
ಜಾನ್ವಿ ಕಪೂರ್ 2018 ರಲ್ಲಿ ಧಡಕ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಗಳ ಮೊದಲ ಚಿತ್ರದ ಬಗ್ಗೆ ಶ್ರೀದೇವಿ (Sridevi) ತುಂಬಾ ಉತ್ಸುಕರಾಗಿದ್ದರು' ಆದರೆ ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು ಅವರು ನಿಧನರಾದರು. ಜಾನ್ವಿ ತನ್ನ ಚೊಚ್ಚಲ ಚಿತ್ರಕ್ಕಾಗಿ ಜೀ ಸಿನಿ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಯನ್ನು ಸಹ ಪಡೆದರು.
ಬಾಲಿವುಡ್ ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ತಮ್ಮ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು. ಅವರಿಗೆ ತುಂಬಾ ಹತ್ತಿರವಾಗಿದ್ದರು. ಶ್ರೀದೇವಿ ಅವರು ಅತ್ಯಂತ ರಕ್ಷಣಾತ್ಮಕ ತಾಯಿ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಶ್ರೀದೇವಿ ತುಂಬಾ ಪ್ರೊಟೆಕ್ಟೀವ್ ತಾಯಿಯಾಗಿದ್ದರು ಮತ್ತು ಅವರ ಮಗಳು ಜಾನ್ವಿ ಕಪೂರ್ ಯಾರೊಂದಿಗಾದರೂ ಡೇಟಿಂಗ್ ಮಾಡುವ ಬಗ್ಗೆ ಚಿಂತಿಸುತ್ತಿದ್ದರು.ಬ್ರೈಡ್ಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ, ಜಾನ್ವಿ ತನ್ನ ತಾಯಿಯನ್ನು ನೆನಪಿಸಿಕೊಂಡರು ಮತ್ತು ಪುರುಷರ ಬಗ್ಗೆ ನನ್ನ ತೀರ್ಪನ್ನು ಅವರ ತಾಯಿ ನಂಬುವುದಿಲ್ಲ ಎಂದು ಬಹಿರಂಗಪಡಿಸಿದರು.
'ಹೌದು, ಮತ್ತು ಅವಳು ಹುಡುಗರ ಬಗ್ಗೆ ನನ್ನ ಜಡ್ಜ್‌ಮೆಂಟ್ ನಂಬುವುದಿಲ್ಲ ಎಂದು ಅವರು ಹೇಳುತ್ತಾರೆ, ಅವರೆ ನನಗೆ ಯಾರನ್ನಾದರೂ ಆಯ್ಕೆ ಮಾಡುತ್ತಾರೆ. ಏಕೆಂದರೆ ನಾನು ತುಂಬಾ ಸುಲಭವಾಗಿ ಪ್ರೀತಿಸುತ್ತೇನೆ' ಎಂದಿದ್ದರು ಜಾನ್ವಿ.
'ಅವನು ಪ್ರತಿಭಾವಂತನಾಗಿರಬೇಕು ಮತ್ತು ಅವನು ಮಾಡುವ ಕೆಲಸದಲ್ಲಿ ಉತ್ಸುಕನಾಗಿರಬೇಕು. ನಾನು ಉತ್ಸುಕನಾಗಿರಬೇಕು ಮತ್ತು ಅವನಿಂದ ಏನನ್ನಾದರೂ ಕಲಿಯಬೇಕು. ಹಾಸ್ಯ ಪ್ರಜ್ಞೆಯೂ ಅತ್ಯಗತ್ಯ. ಮತ್ತು ಖಂಡಿತ' ಎಂದು ಆದರ್ಶ ಸಂಗಾತಿಯ ಕಲ್ಪನೆಯ ಬಗ್ಗೆ ನಟಿಯನ್ನು ಕೇಳಿದಾಗ ಹೇಳಿದರು,
ಜಾನ್ವಿ ಕರಣ್ ಜೋಹರ್ ಅವರ ಬಹು ತಾರಾಗಣದ ಚಿತ್ರ ತಖ್ತ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮಿಲಿ ಸಿನಮಾವನ್ನು ಸಹ ಹೊಂದಿದ್ದಾರೆ' ಮಿಲ್ಲಿ ಮಲಯಾಳಂನ ಹೆಲೆನ್ ಚಿತ್ರದ ರಿಮೇಕ್ ಆಗಿದ್ದು, ಆಕೆಯ ತಂದೆ ಬೋನಿ ಕಪೂರ್ ಈ ಥ್ರಿಲ್ಲರ್ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಮಿಲಿ ಮತ್ತು ತಖ್ತ್ ಜೊತೆಗೆ, ಜಾನ್ವಿ ಕೆಲವು ರೋಚಕ ಚಿತ್ರಗಳಾದ ಗುಡ್ ಲಕ್ ಜೆರ್ರಿ, ವಲಿಮಾ ಮತ್ತು ದೋಸ್ತಾನಾ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.