ಜಾನ್ವಿ ಕಪೂರ್ ಮಾಲ್ಡೀವ್ಸ್ ಹಾಲಿಡೇಯ ಹಾಟ್ ಆವತಾರ ವೈರಲ್!
ಈ ದಿನಗಳಲ್ಲಿ ಜಾನ್ವಿ ಕಪೂರ್ (Janhvi Kapoor) ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು, ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಅವರು ಈಗಾಗಲೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.
ಹಂಚಿಕೊಂಡ ಫೋಟೋಗಳಲ್ಲಿ, ಹಳದಿ ಹಾಟ್ ಬಿಕಿನಿಯಲ್ಲಿ ಜಾನ್ವಿ ತನ್ನ ಟೋನ್ ಫಿಗರ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದು. ಅವರು ತೆರೆದ ಕೂದಲು ಮತ್ತು ಯಾವುದೇ ಮೇಕಪ್ ಇಲ್ಲದೇ ತುಂಬಾ ಬೋಲ್ಡ್ ಹಾಗೂ ಮಾದಕವಾಗಿ ಕಾಣುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋಗೆ 'ಕೊಳಕು ಕೂದಲು, ಮಳೆಬಿಲ್ಲಿನ ಆಕಾಶ, ಉಪ್ಪು ಗಾಳಿ ಮತ್ತು ಅಂತ್ಯವಿಲ್ಲದ ಸಾಗರ ಎಂದು ಜಾನ್ವಿ ಕ್ಯಾಪ್ಷನ್ ನೀಡಿದ್ದಾರೆ.
ಕೆಲವು ಗಂಟೆಗಳ ಹಿಂದೆ ಮತ್ತೆ ಕೆಲವು ಪೋಟೋಗಳು ಹಂಚಿಕೊಂಡು ಮಾಲ್ಡೀವ್ಸ್‌ನಲ್ಲಿ ಅವರ ಇಡೀ ದಿನದ ಚಟುವಟಿಕೆಗಳನ್ನು ತೋರಿಸುತ್ತದೆ. ಕಳೆದ 24 ಗಂಟೆಗಳು ವಿನೋದಮಯವಾಗಿವೆ ಎಂದು ಬರೆದಿದ್ದಾರೆ.
ಜಾನ್ವಿ ಕಪೂರ್ ಅವರು ಇಂದು ಶೇರ್ ಮಾಡಿರುವ ಹಾಲಿಡೇ ಫೋಟೋಗಳು ಸಖತ್ ವೈರಲ್ ಆಗಿವೆ. ಅವರ ಪೋಸ್ಟ್‌ಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ.
ಈ ವರ್ಷ ಜಾನ್ವಿ ಕಪೂರ್ ಅವರ ಗುಡ್‌ಲಕ್ ಜೆರ್ರಿ ಮತ್ತು ಮಿಲೀ ಎಂಬ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಎರಡೂ ಚಿತ್ರಗಳಿಗೆ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ.
ಜಾನ್ವಿ ಕಪೂರ್ ಇತ್ತೀಚಿನ ದಿನಗಳಲ್ಲಿ ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಾಜ್‌ಕುಮಾರ್ ರಾವ್ ಜೊತೆಗಿನ ಈ ಚಿತ್ರ ಕ್ರಿಕೆಟ್ ಆಧಾರಿತವಾಗಿದೆ. ಈ ಸಿನಿಮಾಕ್ಕಾಗಿ ಜಾಹ್ನವಿ ಸಾಕಷ್ಟು ಕ್ರಿಕೆಟ್ ಅಭ್ಯಾಸಗಳನ್ನು ಕೂಡ ಮಾಡುತ್ತಿದ್ದರು.
ಜಾನ್ವಿ ಕಪೂರ್ 2018ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಶಾನ್ ಖಟ್ಟರ್ ಜೊತೆಗಿನ ಅವರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದ ನಂತರ ಅವರು ಗಂಜಾನ್ ಸಕ್ಸೇನಾ ದಿ ಕಾರ್ಗಿಲ್ ಗರ್ಲ್, ರೂಹಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜಾನ್ವಿ ಕಪೂರ್ ಅವರ ಮುಂದಿನ ಚಿತ್ರಗಳ ಬಗ್ಗೆ ಹೇಳುವುದಾದರೆ, ಅವರು ವರುಣ್ ಧವನ್ ಜೊತೆ ಬಾವಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ, ಇದರ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ