ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತಿದ್ದರಾ? ನಟಿ ಇದಕ್ಕೆ ಹೇಳಿದ್ದೇನು?
ಸೌತ್ ಸಿನಿಮಾದ ಫೇವರೇಟ್ ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇವರು ಬೇರೆಯಾಗುತ್ತಿದ್ದಾರೆ (Divorce) ಎಂಬ ವಂದತಿಗಳು ಸದ್ದು ಮಾಡುತ್ತಿವೆ. ಅದರ ಜೊತೆ ಸಮಂತಾ ಮುಂಬೈ (Mumbai) ಶಿಫ್ಟ್ ಆಗಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದಕ್ಕೆ ಸಮಂತಾ ಏನು ಹೇಳಿದ್ದಾರೆ ನೋಡಿ ಇಲ್ಲಿದೆ.
ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಜೀವನದ (Personal Life) ಸಮಸ್ಯೆಗಳಿಂದಾಗಿ ಕಳೆದ ತಿಂಗಳಿನಿಂದ ಸುದ್ದಿಯಾಗುತ್ತಿದ್ದಾರೆ. ಅವರು ನಾಗ ಚೈತನ್ಯರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಆದಾಗ್ಯೂ, ಸಮಂತಾ ಮತ್ತು ನಾಗ ಇಬ್ಬರೂ ಸುದ್ದಿಯ ಬಗ್ಗೆ ಇದುವರೆಗೆ ಏನನ್ನೂ ಮಾತನಾಡಲಿಲ್ಲ.
ಸಮಂತಾ ತನ್ನ ಬಟ್ಟೆ ಬ್ರಾಂಡ್ ಸಾಕಿಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ಸಮಯದಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರು ತಮ್ಮ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಸಮಂತಾ ರುತ್ ಪ್ರಭು ಅವರಿಗೆ ನೀವು ಮುಂಬೈಗೆ (Mumbai) ಶಿಫ್ಟ್ ಆಗುತ್ತಿದ್ದಾರಾ? ಅಭಿಮಾನಿ ನೀವು ನಿಜವಾಗಿಯೂ ಮುಂಬೈಗೆ ಹೋಗುತ್ತಿದ್ದೀರಾ ? ಸಮಂತಾರಿಗೆ ಅಭಿಮಾನಿ ಒಬ್ಬರು ಕೇಳಿದಾಗ ಹೈದರಾಬಾದ್ (ಈಗ ವಾಸಿಸುತ್ತಿರುವ) ಅವರ ಮನೆಯಾಗಿದೆ ಮತ್ತು ಸ್ಯಾಮ್ ತಾವು ಎಲ್ಲಿಗೂ ಹೋಗುತ್ತಿಲ್ಲ ಎಂದು ಹೇಳಿದರು.
ಸಮಂತಾ ಈ ವದಂತಿಯನ್ನು ಎಲ್ಲಿಂದ ಪ್ರಾರಂಭವಾಗುತ್ತದೆ ಎಂದು ತನಗೆ ತಿಳಿದಿಲ್ಲ ಮತ್ತು ಅನೇಕ ವದಂತಿಗಳಂತೆ ಇದು ಕೂಡ ಸುಳ್ಳು ಎಂದು ಸಮಂತಾ ಹೇಳಿದ್ದಾರೆ .'ಹೈದರಾಬಾದ್ ನನ್ನ ಮನೆ ಮತ್ತು ಯಾವಾಗಲೂ ನನ್ನ ಊರಾಗಿರುತ್ತದೆ. ಹೈದರಾಬಾದ್ ನನಗೆ ಎಲ್ಲವನ್ನೂ ನೀಡುತ್ತಿದೆ ಮತ್ತು ನಾನು ಇಲ್ಲಿ ವಾಸಿಸುವುದನ್ನು ಮುಂದುವರಿಸುತ್ತೇನೆ.' ಎಂದು ಸಮಂತಾ ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ ಸಮಂತಾ ಇನ್‌ಸ್ಟಾಗ್ರಾಮ್ (Instagram) ಮತ್ತು ಟ್ವಿಟರ್ (Twitter)ನಲ್ಲಿ ತನ್ನ ಹೆಸರನಿಂದ 'ಅಕ್ಕಿನೇನಿ' (Akkineni) ಸರ್‌ನೇಮ್ (Sir Name) ಕೈಬಿಟ್ಟರು. ಅಂದಿನಿಂದ, ನಾಗ ಚೈತನ್ಯ ಮತ್ತು ಸ್ಯಾಮ್ ಅಗಲಿಕೆಯ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಆರಂಭಿಸಿದವು.
ಇತ್ತೀಚೆಗೆ ಬಾಲಿವುಡ್ (Bollywood) ನಟ ಅಮೀರ್ ಖಾನ್ (Aamir Khan) ಲವ್ ಸ್ಟೋರಿ (Love Story) ಸಿನಿಮಾಕ್ಕಾಗಿ ನಾಗ ಅವರನ್ನು ಬೆಂಬಲಿಸಲು ಹೈದರಬಾದ್‌ಗೆ ಆಗಮಿಸಿದ ಸಮಯದ ಪಾರ್ಟಿಯಲ್ಲಿ ಸಮಂತಾ ಮಿಸ್ ಅಗಿದ್ದರು. ನಟಿಯ ಅನುಪಸ್ಥಿತಿಯು ಡಿವೋರ್ಸ್ ವದಂತಿಗಳಿಗೆ ಇನ್ನಷ್ಟು ತುಪ್ಪ ಸುರಿದ ಹಾಗೇ ಆಗಿದೆ.
ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತುದ್ದಾರೆ ಎಂಬ ವರದಿಗಳಿ ಬಂದ ಬೆನ್ನ ಹಿಂದಲ್ಲೆ ಹೈದರಾಬಾದಿನ ಗಚಿಬೌಲಿ ಪ್ರದೇಶದಲ್ಲಿ ಸ್ಯಾಮ್ ಜೊತೆ ವಾಸಿಸುತ್ತಿದ್ದ ನಾಗ, ಈಗ ತಮ್ಮ ತಂದೆ ನಾಗಾರ್ಜುನನ ಮನೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಈ ಎಲ್ಲ ವರದಿಗಳು ನಾಗ ಹಾಗೂ ಸಮಂತಾ ಬೇರೆಯಾಗಲಿದ್ದಾರೆ ಎಂಬ ರೂಮರ್ಸ್‌ಗೆ ಪುಷ್ಠಿ ನೀಡಿವೆ.
ಸಮಂತಾ ಇತ್ತೀಚೆಗೆ ಸಾಶಾ ಎಂಬ ಗ್ರೇ ಪಿಟ್ ಬುಲ್ ನಾಯಿ ಮರಿಯನ್ನು ತನ್ನ ಕುಟುಂಬದ ಹೊಸ ಸದಸ್ಯನಾಗಿ ಸೇರಿಸಿಕೊಂಡಿದ್ದಾರೆ. ಈಗಾಗಲೇ ಹ್ಯಾಶ್ ಎಂಬ ಮುದ್ದಿನ ಫ್ರೆಂಚ್ ಬುಲ್ಡಾಗ್ ಪೆಟ್ ಅನ್ನು ಹೊಂದಿದ್ದರು ಇದೆ. ಹ್ಯಾಶ್ ಮತ್ತು ಸಾಶಾ ಇಬ್ಬರೂ ಇತ್ತೀಚಿನ ಫೋಟೋಗಳಲ್ಲಿ ಕ್ಯೂಟ್ ಆಗಿ ಕಾಣುತ್ತಿವೆ.