ನಾಗ ಚೈತನ್ಯ ಪತ್ನಿ ಸಮಂತಾರ ಫುಟ್‌ಸ್ಟೆಪ್ಸ್ ಫಾಲೋ ಮಾಡುತ್ತಿದ್ದಾರಾ?
ಸೌತ್ ಸಿನಿಮಾದ ಫೇವರೇಟ್ ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಈ ದಿನಗಳಲ್ಲಿ ನ್ಯೂಸ್ ಆಗಿದ್ದಾರೆ. ಇವರು ಬೇರೆಯಾಗುತ್ತಿದ್ದಾರೆ ಎಂಬ ವಂದತಿಗಳು ಸದ್ದು ಮಾಡುತ್ತಿವೆ. ಇದರ ನಡುವೆಯೇ ನಾಗ ಚೈತನ್ಯ ಅವರ ಪತ್ನಿ ಸಮಂತಾ ಅವರ ಫುಟ್ ಸ್ಟೆಪ್ಸ್ ಫಾಲೋ ಮಾಡುತ್ತಿದ್ದಾರಾ ಎಂದು ಫ್ಯಾನ್ಸ್ ಆಶ್ಚರ್ಯ ಪಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಅಷ್ಟಕ್ಕೂ ನಾಗ ಚೈತನ್ಯ ಮಾಡಿದ್ದೇನು? ಇಲ್ಲಿದೆ ಪೂರ್ತಿ ವಿವರ.
ತೆಲುಗು ತಾರೆಗಳಾದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ದಕ್ಷಿಣ ಉದ್ಯಮದ ಫೇವರೇಟ್ ಹಾಗೂ ಲವ್ಲೀ ಕಪಲ್. ಆದರೆ ಕಳೆದ ಕೆಲವು ವಾರಗಳಲ್ಲಿ, ಇಬ್ಬರೂ ತಮ್ಮ ವೈವಾಹಿಕ ಜೀವನದ ಸಮಸ್ಯೆಗಳಿಂದಾಗಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಬೇರೆಯಾಗುತ್ತಿರುವ ಕುರಿತು ಹಲವು ವದಂತಿಗಳು ಹಬ್ಬಿವೆ.
ಸಮಂತಾ ಅಕ್ಕಿನೇನಿ ಅಲ್ಲ ಸಮಂತಾ ರುತ್ ಪ್ರಭು, ತನ್ನ ಸಾಮಾಜಿಕ ಮಾಧ್ಯಮ ಪೇಜ್‌ಗಳಿಂದ ತನ್ನ ಸರ್‌ನೇಮ್ ಅಕ್ಕಿನೇನಿ ಕೈಬಿಟ್ಟ ನಂತರದಿಂದ ಈ ಜೋಡಿಯ divorce ಸುದ್ದಿ ಪ್ರಾರಂಭವಾಯಿತು.
ಕಳೆದ ತಿಂಗಳು ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಎಂ) ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಗಾಗಿ ಅತ್ಯುತ್ತಮ ನಟಿ ಆವಾರ್ಡ್ ಪಡೆದರು ಸಮಂತಾ ರುತ್ ಪ್ರಭು .
ಸಮಂತಾ ಪ್ರಸ್ತುತ ತನ್ನ ಸಿನಿಮಾ ಮತ್ತು ಕೆಲವು ಎಕ್ಸೈಟಿಂಗ್ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದಾರೆ ಜೊತೆಗೆ ಫ್ಯಾಶನ್ ಬ್ಯ್ರಾಂಡ್ (Fashion Brand) ಸಾಕಿ ಮತ್ತು ಹೈದರಾಬಾದ್‌ನ (Hyderabad) ಏಕಮ್ ಹೆಸರಿನ ಪ್ರಿ-ಸ್ಕೂಲ್ (Pre-School) ನಂತಹ ಸ್ಟಾರ್ಟ್ ಅಪ್ (Start-up)ಗಳೊಂದಿಗೆ ಅವರು ಆಕ್ಟೀವ್ ಆಗಿದ್ದಾರೆ.
ಮತ್ತೊಂದೆಡೆ, ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್ ಜೊತೆಗೆ ನಾಗ ಚೈತನ್ಯ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ನಾಗ ಚೈತನ್ಯ ಚೊಚ್ಚಲ ವೆಬ್ ಸರಣಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಲವ್ ಸ್ಟೋರಿ (Love Story) ಹೀರೋ ನಾಗ ಚೈತನ್ಯ ತನ್ನ ಪತ್ನಿ ಸಮಂತಾ ರುತ್ ಪ್ರಭು ಅವರಂತೆಯೇ ವೆಬ್ ಸರಣಿ (Web Seires)ಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಈ ಮೂಲಕ ನಾಗ ಚೈತನ್ಯ ಅವರ ಪತ್ನಿ ಸಮಂತಾ ರುತ್ ಪ್ರಭು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರಾ?
ವೆಬ್ ಸರಣಿಯನ್ನು ವಿಕ್ರಮ್ ಕೆ ಕುಮಾರ್ ನಿರ್ದೇಶಿಸಲಿದ್ದು, ಅತುಲ್ ಕುಲಕರ್ಣಿ, ರಾಧಿಕಾ ಆಪ್ಟೆ (Radhika Apte) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 (The Family Man-2) ರಲ್ಲಿ ಅವರ ಪತ್ನಿ ಸಮಂತಾ ಅವರಂತೆ, ನಾಗ ಚೈತನ್ಯ ಈ ಆಕ್ಷನ್ ಥ್ರಿಲ್ಲರ್ (Action Thriller)ನಲ್ಲಿ ನೆಗೆಟಿವ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಸಮಂತಾ ಇತ್ತೀಚೆಗೆ ಸಾಶಾ ಎಂಬ ಗ್ರೇ ಪಿಟ್ ಬುಲ್ ನಾಯಿ ಮರಿಯನ್ನು ತಮ್ಮ ಕುಟುಂಬದ ಹೊಸ ಸದಸ್ಯನಾಗಿ ಸೇರಿಸಿಕೊಂಡಿದ್ದಾರೆ. ಸ್ಯಾಮ್ ಮತ್ತು ನಾಗಾ ಈಗಾಗಲೇ ಹ್ಯಾಶ್ ಎಂಬ ಮುದ್ದಿನ ಫ್ರೆಂಚ್ ಬುಲ್ಡಾಗ್ ಪೆಟ್ ಅನ್ನು ಹೊಂದಿದ್ದರು. ಹ್ಯಾಶ್ ಮತ್ತು ಸಾಶಾ ಇಬ್ಬರೂ ಇತ್ತೀಚಿನ ಫೋಟೋಗಳಲ್ಲಿ ಕ್ಯೂಟ್ ಆಗಿ ಕಾಣುತ್ತಿದ್ದರು.
ಎರಡು ವಾರಗಳ ಹಿಂದೆ, ಸಮಂತಾ ತನ್ನ ತಂಡದೊಂದಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆ ಸಮಯದಲ್ಲಿ ಕೆಲವು ಸ್ಥಳೀಯ ಮಾಧ್ಯಮದವರು ಆಕೆಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಕೇಳಲು ಪ್ರಯತ್ನಿಸಿದರು 'ನಾನು ದೇವಸ್ಥಾನಕ್ಕೆ ಬಂದಿದ್ದೇನೆ, ನಿಮಗೆ ಯಾವುದೇ ಕಾಮನ್ ಸೆನ್ಸ್ ಇಲ್ಲವಾ? ' ಎಂದು ಕೋಪದಿಂದ ತನ್ನ ತಲೆಯನ್ನು ತೋರಿಸಿ ಹೇಳಿದರು.