ಡಿವೋರ್ಸ್ ನಂತರ ಸಮಂತಾಗೆ ಜೀವನಾಂಶ ಕೋಟಿಗಟ್ಟಲೆ ಸಿಗುತ್ತಂತೆ!
ಸೌತ್ ಸಿನಿಮಾದ ಫೇವರೇಟ್ ಕಪಲ್ ಸಮಂತಾ ಮತ್ತು ನಾಗ ಚೈತನ್ಯ ಈ ದಿನಗಳಲ್ಲಿ ಸಕತ್ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಬ್ರೇಕಪ್ ರೂಮರ್‌ಗಳು ಫ್ಯಾನ್ಸ್‌ಗೆ ಶಾಕ್ ನೀಡಿದೆ. ಈ ಸುದ್ದಿಯ ಬೆನ್ನಲ್ಲೇ ಡಿವೋರ್ಸ್ ನಂತರ ಸಮಂತಾ ಪಡೆಯಲಿರುವ ದೊಡ್ಡ ಮೊತ್ತದ ಜೀವನಾಂಶದ ಬಗ್ಗೆ ವರದಿಗಳು ಹರಿದಾಡುತ್ತಿವೆ. ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸಮಂತಾರಿಗೆ ಸಿಗಲಿರುವ ಅಲಿಮನಿ ಎಷ್ಷು ನೋಡಿ?
ಬಹಳ ದಿನಗಳಿಂದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ನಡುವಿನ 'ಎಲ್ಲವೂ ಸರಿಯಿಲ್ಲ' ಎಂಬ ವರದಿಗಳು ಸದ್ದು ಮಾಡುತ್ತಿವೆ. ಸಮಂತಾ ಅಕ್ಕಿನೇನಿ ತಮ್ಮ ಹೆಸರಿನಿಂದ 'ಅಕ್ಕಿನೇನಿ' ಸರ್‌ನೇಮ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಿಂದ ಕೈಬಿಟ್ಟ ನಂತರ ವದಂತಿಗಳು ಪ್ರಾರಂಭವಾಯಿತು.
ನಂತರ ಸಮಂತಾ ಮುಂಬೈಗೆ (Mumbai) ಶಿಫ್ಟ್ ಆಗಿ ಬಾಲಿವುಡ್ (Bollywood)ನಲ್ಲಿ ಮುಂದುವರಿಯುವ ಪ್ಲಾನ್ ಬೆಳಕಿಗೆ ಬಂದಿದೆ. ನಂತರ ನಾಗ ಚೈತನ್ಯ ತನ್ನ ಗಚಿಬೌಲಿಯ ನಿವಾಸವನ್ನು ಬಿಟ್ಟು ಪೋಷಕರ ಜೊತೆ ಒಟ್ಟಿಗೆ ವಾಸಿಸಲು ತೆರಳಿದರು.
ಇದರ ಜೊತೆಗೆ ಕಳೆದ ತಿಂಗಳು ಸಮಂತಾ ಅವರ ಮಾವ ನಾಗಾರ್ಜುನ (Nagarjuna) ಅವರ ಹುಟ್ಟುಹಬ್ಬದ ಪಾರ್ಟಿಯನ್ನು (Birthday Party) ತಪ್ಪಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋದಲ್ಲಿ ಇಡೀ ಕುಟುಂಬವನ್ನುಗುರುತಿಸಲಾಯಿತು ಮತ್ತು ಆದರೆ ಸಮಂತಾ ಮಾತ್ರ ಕಾಣೆಯಾಗಿದ್ದರು. ಮತ್ತು ಸಮಂತಾ ನಾಗ ಚೈತನ್ಯ ಇಲ್ಲದೆ ಒಬ್ಬರೇ ಗೋವಾ (Goa) ಪ್ರವಾಸ ಕೈಗೊಂಡರು.
ಏನೋ ಒಟ್ಟಿನಲ್ಲಿ ಇಬ್ಬರೂ ಈ ವಿಷಯವಾಗಿ ಬಾಯಿ ಬಿಡುತ್ತಿಲ್ಲ. ಆದರೆ, ನಾಗ ಚೈತನ್ಯ ಮಾಡೋ ಪಾರ್ಟಿಗಳಲ್ಲಿ ಸಮಂತಾ ಕಾಣದೇ ಇರುವುದು ಹೈಲೈಟ್ ಆಗುತ್ತಿದೆ. ಮೊದ ಮೊದಲು ಶೂಟಿಂಗ್, ಬ್ಯುಸಿ ಎಂಬ ಕಾರಣ ಹೇಳಲಾಗುತ್ತಿತ್ತು. ಈಗ ಬೇರೆ ಕಡೆ ಫ್ರೆಂಡ್ಸ್ ಜೊತೆ ಹೋಗುತ್ತಾರೆ, ಆದರೆ, ನಾಗ ಚೈತನ್ಯ ಕುಟುಂಬದೊಂದಿಗೆ ಏಕೆ ಕಾಣಿಸಿ ಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಕೇಳುತ್ತಿದ್ದಾರೆ fans.
ವಿವಿಧ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಸಮಂತಾ ಮತ್ತು ನಾಗಾ ಅವರ ಕುಟುಂಬಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಪ್ರವೇಶಿಸಿದವು. ಆದರೆ ವಿಫಲವಾದವು. ಇಬ್ಬರೂ ಮದುವೆ ಕೌನ್ಸಿಲಿಂಗ್ (Marriage Counselling) ಸೆಷನ್‌ಗಳನ್ನು ಅಟೆಂಡ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಆದರೆ ಯಾವುದೂ ಸರಿಯಾಗಿಲ್ಲ. ಈಗ ನಾಗ ಮತ್ತು ಸ್ಯಾಮ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ದಂಪತಿಯ (Couple) ಹತ್ತಿರದ ಮೂಲಗಳ ಪ್ರಕಾರ ಇಡೀ ಪ್ರಕ್ರಿಯೆಯು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಮುಂದಿನ ಎರಡು ಮೂರು ತಿಂಗಳಲ್ಲಿ ಯಾರೂ ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ.
ನಾಗಾ ಜೊತೆ ವಿಚ್ಛೇದನದಿಂದ ಜೀವನಾಂಶವಾಗಿ (alimony) ಸಮಂತಾ ಒಟ್ಟು 50 ಕೋಟಿ ರೂಪಾಯಿಗಳನ್ನು ಸ್ವೀಕರಿಸಬಹುದೆಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಪ್ರಸ್ತುತ, ನಾಗ ಮತ್ತು ಸ್ಯಾಮ್ ಇಬ್ಬರೂ ಕ್ರಮವಾಗಿ ಲಾಲ್ ಸಿಂಗ್ ಚಡ್ಡಾ ಮತ್ತು ದಿ ಫ್ಯಾಮಿಲಿ ಮ್ಯಾನ್ 2 ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ.