MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ರಶ್ಮಿಕಾ ದಕ್ಷಿಣದ ಶ್ರೀಮಂತ ನಟಿ? ಟಾಪ್ ಸಿಟಿಗಳಲ್ಲಿ ಆಸ್ತಿ ಖರೀದಿ

ರಶ್ಮಿಕಾ ದಕ್ಷಿಣದ ಶ್ರೀಮಂತ ನಟಿ? ಟಾಪ್ ಸಿಟಿಗಳಲ್ಲಿ ಆಸ್ತಿ ಖರೀದಿ

ಮೂಲತಃ ಸ್ಯಾಂಡಲ್‌ವುಡ್‌ (Sandalwood) ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಂತರ  ತೆಲಗು ಚಿತ್ರರಂಗಕ್ಕೆ ಕಾಲಿಟ್ಟರು. ಈಗ  ಶೀಘ್ರದಲ್ಲೇ ಅವರ ಬಾಲಿವುಡ್ ಸಿನಿಮಾ ಹೊರ ಬರಲಿದೆ. ಪ್ರಸ್ತುತ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದ ಅತ್ಯಂತ ಶ್ರೀಮಂತ (Richest)ನಟಿನಾ? ಅವರು ಎಲ್ಲೆಲ್ಲಿ ಆಸ್ತಿಗಳಲ್ಲಿ ಹೂಡಿಕೆ (Investment) ಮಾಡುತ್ತಿದ್ದಾರೆ ಗೊತ್ತಾ? ಮಾಹಿತಿಗಾಗಿ ಕೆಳಗೆ ಓದಿ.

2 Min read
Author : Suvarna News
Published : Oct 11 2021, 04:29 PM IST
Share this Photo Gallery
  • FB
  • TW
  • Linkdin
  • Whatsapp
19

ರಶ್ಮಿಕಾ ಮಂದಣ್ಣ ಅವರನ್ನು ಅವರ ಅಭಿಮಾನಿಗಳು ಭಾರತದ ನ್ಯಾಷನಲ್‌ ಕ್ರಶ್‌ ಎಂದು ಕರೆಯುತ್ತಾರೆ. ಈ ನಟಿ ಪ್ರಸ್ತುತ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಶನ್ ಮಜ್ನು ಮತ್ತು ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಜೊತೆ ಗುಡ್‌ಬೈನತಹ ಎರಡು ದೊಡ್ಡ  ಬಾಲಿವುಡ್‌ನಲ್ಲಿ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ

29

ರಶ್ಮಿಕಾ  ತನ್ನ ಆಕೌಂಟ್‌ನಲ್ಲಿ ಹಲವಾರು ದೊಡ್ಡ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಆರು ವಿಭಿನ್ನ ಭಾಷೆಗಳಲ್ಲಿ ಅವರ ಕೆಲವು ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ರಶ್ಮಿಕಾ ಅಲ್ಲು ಅರ್ಜುನ್ ಜೊತೆ ಪ್ಯಾನ್-ಇಂಡಿಯಾ ಚಿತ್ರ 'ಪುಷ್ಪಾ' ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

39

ಈ ಯುವ ನಟಿ ಇತ್ತೀಚೆಗೆ SIIMA ದಲ್ಲಿ ಎರಡು ಟಾಪ್‌ ಆರ್ವಾಡ್‌ಗಳನ್ನು ಪಡೆದರು. ತೆಲುಗು ಚಿತ್ರ ಡಿಯರ್ ಕಾಮ್ರೇಡ್ ಮತ್ತು ಕನ್ನಡ ಚಿತ್ರ ಯಜಮಾನಕ್ಕಾಗಿ Best Actress in a Leading Role ಆವಾರ್ಡ್‌ ಪಡೆದಿದ್ದಾರೆ. ತೆಲುಗು ಮತ್ತು ಕನ್ನಡದ ಜೊತೆಗೆ ರಶ್ಮಿಕಾ ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಿಗೆ ಶೀಘ್ರದಲ್ಲಿ ಪ್ರಶಸ್ತಿಗಳನ್ನು ಗೆಲ್ಲಲು ಬಯಸಿದ್ದಾಗಿ ತಿಳಿಸಿದ್ದಾರೆ. 

49

 ರಶ್ಮಿಕಾ ಅವರು  ಕಠಿಣ ಪರಿಶ್ರಮವನ್ನು ನಂಬುತ್ತಾರೆ. ಆಸ್ತಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅವಳು ಹೈದರಾಬಾದ್, ಗೋವಾ ಮತ್ತು ಕೊಡಗಿನಲ್ಲಿ ಮನೆಗಳನ್ನು ಖರೀದಿಸಿದ್ದಾರೆ. 

59

ಹೈದರಾಬಾದ್, ಗೋವಾ ಮತ್ತು ಕೊಡಗಿನಲ್ಲಿ ಮನೆಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲ, ರಶ್ಮಿಕಾ ಮುಂಬೈನಲ್ಲಿ ಮನೆಯೊಂದನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಆಗಾಗ್ಗೆ ತನ್ನ ಮುಂಬೈ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

69

'ಮಿಷನ್ ಮಜ್ನು ಇತರ ಬಾಲಿವುಡ್ ಪ್ರಾಜೆಕ್ಟ್‌ಗಳಿಗೆ ರೆಡಿಯಾಗಲು ರಶ್ಮಿಕಾ ಮುಂಬೈ ಮತ್ತು ಹೈದರಾಬಾದ್ ನಡುವೆ ಸಾಕಷ್ಟು ಓಡಾಡುತ್ತಿದ್ದರು. ಈಗ ಆಕೆ ನಗರದಲ್ಲಿ ತನ್ನದೇ ಆದ ಜಾಗವನ್ನು ಪಡೆದುಕೊಂಡಿದ್ದಾರೆ' ಇದರಿಂದ ಅವರ ಓಡಾಟ ಈಗ ತ್ವರಿತ ಗತಿಯಲ್ಲಿಯಾಗುತ್ತದೆ' ಎಂದು ಮೂಲವೊಂದು ವೆಬ್‌ಸೈಟ್‌ಗೆ ತಿಳಿಸಿದೆ.

79

ಅವರು ತಮ್ಮ ಮುಂಬೈ ಫ್ಲ್ಯಾಟ್‌ನಲ್ಲಿ ಮನೆಯ ಫೀಲ್‌ ಬರಲು, ತನ್ನ ಹೈದರಾಬಾದ್ ಮನೆಯಿಂದ ಕೆಲವು ಆತ್ಮೀಯ ಮತ್ತು ಪ್ರಿಯವಾದ ವಸ್ತುಗಳನ್ನು ತಂದಿದ್ದಾರೆ. ಮೊದಲು ಆಕೆ ತನ್ನ ಬಾಲಿವುಡ್ ಚಿತ್ರಗಳ ಚಿತ್ರೀಕರಣದಲ್ಲಿದ್ದಾಗ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು. ಆದರರೆ  ನಗರದಲ್ಲಿ ಮನೆ ಪಡೆದ ನಂತರ, ಮುಂಬೈಗೆ ಹೆಚ್ಚು ಆಟ್ಯಾಚ್‌ ಆಗಿದ್ದಾರೆ ಎಂದು ಮೂಲವು ಹೇಳಿದೆ.

89

ಕೆಲವು ತಿಂಗಳ ಹಿಂದೆ, ರಶ್ಮಿಕಾ 50 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್‌-ಸಿ ಕ್ಲಾಸ್‌ ಅನ್ನು ಪರ್ಚೆಸ್‌ ಮಾಡಿದ್ದಾರೆ. ಅದಕ್ಕೂ ಮುನ್ನ ಅವರು  ಆಡಿ ಕ್ಯೂ 3 ಅನ್ನು ಸಹ ಖರೀದಿಸಿದರು, ಅದರ ಬೆಲೆ 40 ಲಕ್ಷ ರೂ. ಅಷ್ಟೇ ಅಲ್ಲ, ನಟಿ ಟೊಯೋಟಾ ಇನ್ನೋವಾ ಮತ್ತು ಹ್ಯುಂಡೈ ಕ್ರೆಟಾ ಕೂಡ ಹೊಂದಿದ್ದಾರೆ.

99

ವರದಿಗಳ ಪ್ರಕಾರ, ರಶ್ಮಿಕಾ ಅವರ ನೆಟ್‌ವರ್ತ್‌  400 ಮಿಲಿಯನ್ ಡಾಲರ್. ರಶ್ಮಿಕಾ  ಮಂದಣ್ಣ ಅವರು ಪ್ರತಿ ಸಿನಿಮಾಕ್ಕೆ 3-4 ಕೋಟಿ  ರೂಪಾಯಿ ಶುಲ್ಕ ವಿಧಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ ವಿಜಯ್ ಅದ್ಧೂರಿ ರೆಸೆಪ್ಶನ್, ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ
Recommended image2
ಸೂಪರ್ ಹಿಟ್ 'ಜನುಮದ ಜೋಡಿ' ಸಿನಿಮಾದಲ್ಲಿ ಶಿಲ್ಪಾ ಬದಲು ಸೌಂದರ್ಯ ನಟಿಸಬೇಕಿತ್ತು.. ಆದರೆ, ಅದಕ್ಕೆ ಅಡ್ಡಗಾಲಾಗಿದ್ದು ಏನು?
Recommended image3
27 ವರ್ಷಗಳ ದಾಂಪತ್ಯಕ್ಕೆ 250 ಕೋಟಿ ರೂ? ದಳಪತಿ-ಸಂಗೀತಾ ಡಿವೋರ್ಸ್​ಗೆ ಇದೇನಿದು ಟ್ವಿಸ್ಟ್​?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved