ಸಾರಾ ನಂತರ ಜಾನ್ವಿ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಕಾರ್ತಿಕ್ ಆರ್ಯನ್ ?
ಈ ದಿನಗಳಲ್ಲಿ ಬಾಲಿವುಡ್‌ನ ಯುವ ಸ್ಟಾರ್ಸ್ ಕಾರ್ತಿಕ್ ಆರ್ಯನ್ ಹಾಗೂ ಜಾನ್ವಿ ಕಪೂರ್ ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಸಾರಾ ಆಲಿ ಖಾನ್ ನಂತರ ಕಾರ್ತಿಕ್ ಜಾನ್ವಿ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿದೆ.
ಕಾರ್ತಿಕ್ ಆರ್ಯನ್ ಹಾಗೂ ಜಾನ್ವಿ ಕಪೂರ್ ರಿಲೆಷನ್‌ಶಿಪ್‌ನಲ್ಲಿರುವ ವಿಷಯ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಇಬ್ಬರು ಒಟ್ಟಿಗೆ ಗೋವಾಕ್ಕೆ ಹಾಲಿಡೇಗೆ ಹೋಗಿದ್ದರು ಎಂಬದು ಕನ್ಫರ್ಮ್ ಆಗಿದೆ.
ಇವರ ಡೇಟಿಂಗ್ ರೂಮರ್‌ಗಳು ಹರಿದಾಡುತ್ತಿವೆ. ವರ್ಷದ ಮೊದಲ ದಿನ ಇವರಿಬ್ಬರೀ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಕಾರ್ತಿಕ್ ಒಂಟಿಯಾಗಿದ್ದರೆ, ಜಾನ್ವಿ ಸಹೋದರಿ ಖುಷಿ ಕಪೂರ್ ಜೊತೆ ಇದ್ದರು. ಇಬ್ಬರೂ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಫ್ಯಾನ್ಸ್ ಇವರ ನಡುವೆ ಏನಾದರೂ ಇದೆಯೇ ಎಂದು ಆಶ್ಚರ್ಯಪಟ್ಟಿದ್ದಾರೆ.
ನಂತರ ಇವರಿಬ್ಬರೂ ಗೋವಾದಲ್ಲಿದ್ದಾರೆ ಎಂದು ಖಚಿತವಾಯಿತು. ಅವರಿಬ್ಬರು ಗೋವಾದಲ್ಲಿ ಔಟಿಂಗ್‌ಗಾಗಿ ಮ್ಯಾಚಿಂಗ್ ಔಟ್‌ಫಿಟ್ ಧರಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹೊಸ ವರ್ಷದ ಹಾಲಿಡೇ ಕಳೆದ ನಂತರ ನಂತರ ವಿಮಾನ ನಿಲ್ದಾಣದಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಈ ಎಲ್ಲಾ ಸಂಗತಿಗಳು ಕಾರ್ತಿಕ್ ಹಾಗೂ ಜಾನ್ವಿ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ರೂಮರ್‌ಗೆ ತುಪ್ಪ ಸುರಿದಂತೆ ಆಗಿವೆ.
ಅವರು ಗೋವಾದಲ್ಲಿ ಕೇವಲ ಫ್ರೆಂಡ್ಸ್ ಆಗಿ ಸಮಯ ಕಳೆಯುತ್ತಿದ್ದಾರೆಯೇ ಅಥವಾ ಡೇಟಿಂಗ್ ಮಾಡುತ್ತಿದ್ದಾರೆರಾ ಎಂದು ತಿಳಿಯಲು ಸ್ವಲ್ಪ ಸಮಯ ಕಾಯಬೇಕಾಗಿದೆ.