- Home
- Entertainment
- Cine World
- South Indian Celebrity Couples: ಪ್ರೀತಿಗೋಸ್ಕರ ಅಂತರ್‌ಧರ್ಮೀಯ ಮದುವೆಯಾದ ಖ್ಯಾತ ದಕ್ಷಿಣ ಭಾರತದ ಸೆಲೆಬ್ರಿಟಿ ಜೋಡಿಗಳಿವು!
South Indian Celebrity Couples: ಪ್ರೀತಿಗೋಸ್ಕರ ಅಂತರ್‌ಧರ್ಮೀಯ ಮದುವೆಯಾದ ಖ್ಯಾತ ದಕ್ಷಿಣ ಭಾರತದ ಸೆಲೆಬ್ರಿಟಿ ಜೋಡಿಗಳಿವು!
ಧರ್ಮ ಬೇರೆ ಬೇರೆ ಇದ್ದರೂ ಕೂಡ, ಸಾಂಸ್ಕೃತಿಕ ವ್ಯತ್ಯಾಸವಿದ್ದರೂ ಕೂಡ ದಕ್ಷಿಣ ಭಾರತದ ಕೆಲ ನಟ, ನಟಿಯರು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ಯಾರು ಯಾರು ಲವ್ ಮ್ಯಾರೇಜ್ ಆಗಿದ್ದಾರೆ?
ದಕ್ಷಿಣ ಭಾರತದಲ್ಲಿ ಕೆಲ ಸ್ಟಾರ್ ಸೆಲೆಬ್ರಿಟಿಗಳೇ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಧರ್ಮ ಬೇರೆ ಬೇರೆಯಾದರೂ ಕೂಡ ಯಾವುದೇ ವ್ಯತ್ಯಾಸ ಕಂಡಿಲ್ಲ. ಮಕ್ಕಳ ಜೊತೆ ಈ ಸ್ಟಾರ್‌ಗಳು ಸುಂದರವಾದ ಜೀವನ ಮಾಡುತ್ತಿದ್ದಾರೆ.
ರಾಹುಲ್ ಶರ್ಮಾ ಹಾಗೂ ಆಸಿನ್
ರಾಹುಲ್ ಶರ್ಮಾ ಹಾಗೂ ಆಸಿನ್ ಅವರು 2016 ರಲ್ಲಿ ಮದುವೆಯಾಗಿದ್ದಾರೆ. ರಾಹುಲ್ ಶರ್ಮಾ ಹಿಂದುವಾಗಿದ್ದು, ಆಸಿನ್ ಅವರು ಕ್ರಿಶ್ಚಿಯನ್. ಖಾಸಗಿಯಾಗಿ ನಡೆದ ಈ ಮದುವೆಯಲ್ಲಿ ಆತ್ಮೀಯರು, ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು. ಈ ಜೋಡಿಗೆ ಓರ್ವ ಮಗಳಿದ್ದಾಳೆ.
ಪ್ರಿಯಾಮಣಿ, ಮುಸ್ತಫಾ ರಾಜ್
ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಮಣಿ ಅವರು ಹಿಂದು. 2017ರಲ್ಲಿ ಮುಸ್ತಾಫಾ ರಾಜ್ ಎನ್ನುವ ಉದ್ಯಮಿಯನ್ನು ಪ್ರಿಯಾಮಣಿ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು.
ನಟ ಸೂರ್ಯ, ಜ್ಯೋತಿಕಾ
ಭಾರತೀಯ ಚಿತ್ರರಂಗದಲ್ಲಿ ನಟ ಸೂರ್ಯ ಹಾಗೂ ಜ್ಯೋತಿಕಾ ಜೋಡಿಯನ್ನು ಅನೇಕರು ಇಷ್ಟಪಡ್ತಾರೆ. ಸೂರ್ಯ ಅವರು ಹಿಂದು ಆಗಿದ್ದು, ಜ್ಯೋತಿಕಾ ಅವರು ಪಂಜಾಬಿ ಮುಸ್ಲಿಂ. ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದ ಜ್ಯೋತಿಕಾ ಅವರು ಸೂರ್ಯರನ್ನು ಪ್ರೀತಿಸಿದರು, ತಮಿಳು ಕಲಿತರು. ಇಂದು ತಮಿಳಿನ ಸೊಸೆ ಎನ್ನುವಷ್ಟರಮಟ್ಟಿಗೆ ಜ್ಯೋತಿಕಾ ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ, ಹೊಂದಿಕೊಂಡಿದ್ದಾರೆ. 2006ರಲ್ಲಿ ಮದುವೆಯಾದ ಈ ಜೋಡಿಗೆ ದಿಯಾ, ದೇವ್ ಎಂಬ ಮಕ್ಕಳಿದ್ದಾರೆ.
ದಳಪತಿ ವಿಜಯ್, ಸಂಗೀತಾ
ಖ್ಯಾತ ನಟ ದಳಪತಿ ವಿಜಯ್ ಅವರು ಕ್ರಿಶ್ಚಿಯನ್. ಇವರ ಅಭಿಮಾನಿ ಸಂಗೀತಾ ವಿದೇಶದಲ್ಲಿದ್ದವರು. ಚೆನ್ನೈಗೆ ಬಂದ ಸಂಗೀತಾ ಫೇವರಿಟ್ ಹೀರೋನನ್ನು ಪ್ರೀತಿಸಿ ಮದುವೆ ಆಗ್ತಾರೆ. ಸಂಗೀತಾ ಹಿಂದು. 1999ರಲ್ಲಿ ಈ ಜೋಡಿ ಮದುವೆಯಾಗಿದ್ದು, ಜಾಸೋನ್ ಸಂಜಯ್ ವಿಜಯ್, ದಿವ್ಯಾ ಸಾಶಾ ಎಂಬ ಮಕ್ಕಳಿದ್ದಾರೆ. ಚೆನ್ನೈನಲ್ಲಿ ಹಿಂದು ಧರ್ಮದ ಮೂಲಕವೇ ಈ ಮದುವೆ ನಡೆದಿತ್ತು.
ಅಜಿತ್, ಶಾಲಿನಿ
ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಅವರು ಹಿಂದು ಬ್ರಾಹ್ಮಣ. ನಟಿ ಶಾಲಿನಿ ಅವರು ಕ್ರಿಶ್ಚಿಯನ್. ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಇವರಿಬ್ಬರು ಪರಸ್ಪರ ಪ್ರೀತಿಸಿ 2000 ಏಪ್ರಿಲ್ 24ರಂದು ಮದುವೆಯಾಗಿದ್ದಾರೆ. ಈ ಜೋಡಿಗೆ ಅನೌಷ್ಕಾ, ಆದ್ವಿಕ್ ಎಂಬ ಮಕ್ಕಳಿದ್ದಾರೆ. ಅಂದಹಾಗೆ ಮದುವೆಯಾದ ಬಳಿಕ ಶಾಲಿನಿ ಅವರು ನಟನೆಯಿಂದ ದೂರ ಉಳಿದಿದ್ದಾರೆ.