- Home
- Entertainment
- Cine World
- ಈ ಸಿನಿಮಾ ಟಿಕೆಟ್’ಗಾಗಿ ಊಟ-ತಿಂಡಿ ಬಿಟ್ಟು, ಎರಡು ದಿನ ರಾತ್ರಿ, ಹಗಲೆನ್ನದೇ ಲೈನಲ್ಲಿ ನಿಂತಿದ್ರಂತೆ ಜನ!
ಈ ಸಿನಿಮಾ ಟಿಕೆಟ್’ಗಾಗಿ ಊಟ-ತಿಂಡಿ ಬಿಟ್ಟು, ಎರಡು ದಿನ ರಾತ್ರಿ, ಹಗಲೆನ್ನದೇ ಲೈನಲ್ಲಿ ನಿಂತಿದ್ರಂತೆ ಜನ!
ಇದೊಂದು ಸೂಪರ್ ಹಿಟ್ ಸಿನಿಮಾ, ಈ ಸಿನಿಮಾ ನೋಡಲು, ಜನ ಹಗಲು ರಾತ್ರಿ ಲೈನಲ್ಲಿ ನಿಲ್ಲುತ್ತಿದ್ದರಂತೆ, 5 ಕಿಮೀ ಉದ್ದದ ಟಿಕೆಟ್ ಲೈನ್ ಕೂಡ ಇರುತ್ತಿತ್ತಂತೆ, ಆ ಸಿನಿಮಾ ಯಾವುದು ನೋಡೋಣ.

'ಮುಘಲ್-ಎ-ಆಜಮ್' 65 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು.
'ಮುಘಲ್-ಎ-ಆಜಮ್' (Mughal E Azam) ಬಾಲಿವುಡ್ ಚಿತ್ರವಾಗಿದ್ದು, ಈಗ 60 ವರ್ಷಗಳಿಗೂ ಹಳೆಯದಾಗಿದೆ, ಆದರೆ ಪ್ರೇಕ್ಷಕರು ಅಂದು ಸಿನಿಮಾ ನೋಡಲು ಏನೆಲ್ಲಾ ಮಾಡಿದ್ರು ಕೇಳಿದ್ರೆ ಅಚ್ಚರಿಯಾಗಬಹುದು. ಕೆ ಆಸಿಫ್ ಅವರ ಈ ಚಿತ್ರದಲ್ಲಿ ಮಧುಬಾಲ, ದಿಲೀಪ್ ಕುಮಾರ್ ಮತ್ತು ಪೃಥ್ವಿರಾಜ್ ಕಪೂರ್ ಮೊದಲಾದ ತಾರೆಯರು ನಟಿಸಿದ್ದರು.
ಆ ಕಾಲದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿತ್ತು.
65 ವರ್ಷಗಳ ಹಿಂದೆ ಬಿಡುಗಡೆಯಾದ 'ಮುಘಲ್-ಎ-ಆಜಮ್' ಚಿತ್ರದ ದಾಖಲೆ ಎಷ್ಟು ವಿಶೇಷವೆಂದರೆ, ಇಂದಿನ ಚಿತ್ರಗಳು ಸಹ 1000 ಕೋಟಿ ರೂ. ಗಳಿಸಿದ ದಾಖಲೆಗೆ ಹೋಲಿಸಿದರೆ ಅದು ಕಡಿಮೆಯೇ. ಕೆ ಆಸಿಫ್ ನಿರ್ದೇಶನದ (Director K Asif) ಈ ಸಿನಿಮಾ ಆ ಕಾಲದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿತ್ತು.
ಟಿಕೆಟ್ ಗಾಗಿ 5 ಕಿಲೋಮೀಟರ್ ಉದ್ದದ ಸರತಿ ಸಾಲು
ಈ ಚಿತ್ರದ ಟಿಕೆಟ್ (film ticket) ಖರೀದಿಸಲು ಎರಡು ದಿನಗಳ ಕಾಲ ಜನರು ಸರತಿ ಸಾಲಿನಲ್ಲಿ ನಿಂತಿದ್ದರಂತೆ ಮತ್ತು 5 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾದ ಲೈನ್ ಇದ್ದಿತ್ತಂತೆ. ಅಷ್ಟೊಂದು ಕ್ರೇಜ್ ಹಿಡಿಸಿತ್ತು ಈ ಸಿನಿಮಾ.
ಜನರು ಟಿಕೆಟ್‌ಗಾಗಿ ಬೀದಿಗಳಲ್ಲಿ ಮಲಗುತ್ತಿದ್ದರು
"ಸೋಮವಾರ ಪ್ರೀ ಬುಕಿಂಗ್‌ಗಾಗಿ (pre booking tickets) ಜನರು ಶನಿವಾರದಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು, ಜನರು ಬೀದಿಗಳಲ್ಲಿ ಮಲಗುತ್ತಿದ್ದರು ಮತ್ತು ಅವರ ಕುಟುಂಬದ ಜನರು ಟಿಕೇಟ್ ಗೆ ನಿಲ್ಲುವವರಿಗಾಗಿ ಆಹಾರವನ್ನು ತರುತ್ತಿದ್ದರಂತೆ.
ಈ ಲೈನ್ ಬಾಂಬೆ ಸೆಂಟ್ರಲ್‌ನಿಂದ ಮಹಾಲಕ್ಷ್ಮಿಯವರೆಗೆ ವಿಸ್ತರಿಸಿತ್ತು
ಸೋಮವಾರದ ಪ್ರದರ್ಶನಕ್ಕೆ ಟಿಕೆಟ್ ಪಡೆಯಲು ನಿಲ್ಲುತ್ತಿದ್ದ ಜನರ ಸಾಲು ಬಾಂಬೆ ಸೆಂಟ್ರಲ್‌ನಿಂದ ಆರಂಭವಾಗಿ ಮಹಾಲಕ್ಷ್ಮಿಯವರೆಗೆ ಇರುತ್ತಿತ್ತಂತೆ, ಅದು ಆ ಕಾಲಕ್ಕೆ ಬಹಳ ಆಶ್ಚರ್ಯಕರ ಸಂಗತಿಯಾಗಿತ್ತು.
ಆ ಕಾಲದ ಅತ್ಯಂತ ಅದ್ಭುತ ಚಿತ್ರ
'ಮುಘಲ್-ಎ-ಆಜಮ್' ಆ ಕಾಲದವರೆಗೆ ಭಾರತದಲ್ಲಿ ತಯಾರಾದ ಅತ್ಯಂತ ಭವ್ಯ ಚಿತ್ರವಾಗಿತ್ತು ಮತ್ತು ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದಿಲೀಪ್ ಮತ್ತು ಮಧುಬಾಲಾ (Dileep Kumar and Madhubala) ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದರು.