ಹೀರೋಯಿನ್ಗಿಂತ್ಲೂ ಹೆಚ್ಚು ಸಂಭಾವನೆ ಪಡೆಯೋ ಐಟಂ ಡ್ಯಾನ್ಸರ್, ಜಸ್ಟ್ ಒಂದು ಸಾಂಗ್ಗೆ ಭರ್ತಿ 5 ಕೋಟಿ ರೂ.!
ಸಿನಿಮಾಗಳಲ್ಲಿ ಹೀರೋ, ಹೀರೋಯಿನ್ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ?
ಸಿನಿಮಾ ರಂಗ ಅನ್ನೋದು ವರ್ಷಗಳು ಕಳೆಯುತ್ತಾ ಹೋದಂತೆ ಹಲವು ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತದೆ. ಸಿನಿಮಾಗಳಲ್ಲಿ ಹೀರೋ, ಹೀರೋಯಿನ್ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ.
ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ? ಸದ್ಯ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಡ್ಯಾನ್ಸರ್ಗಳಲ್ಲಿ ಒಬ್ಬರು ನಟಿ ಸಮಂತಾ ರುತು ಪ್ರಭು.
ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸಮಂತಾ ಕೇವಲ ಒಂದು ಹಾಡಿಗೆ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.
'ಪುಷ್ಪಾ ದಿ ರೈಸ್' ಸಿನಿಮಾದ 'ಓ ಅಂಟಾವಾ' ಹಾಡು ಹೆಚ್ಚು ಫೇಮಸ್ ಆಗಿತ್ತು. ಸಮಂತಾ ಸೊಂಟ ಬಳುಕಿಸಿ ಸ್ಟೆಪ್ ಹಾಕಿದ ರೀತಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು.
ಈ ಹಾಡಿಗೆ ಸಮಂತಾ ಹೈಯೆಸ್ಟ್ ಚಾರ್ಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದು ಬಾಲಿವುಡ್ನ ನೋರಾ ಫತೇಹಿ, ಸನ್ನಿ ಲಿಯೋನ್ಗಿಂತಲೂ ಹೆಚ್ಚು.
ಬಾಲಿವುಡ್ನಲ್ಲಿ ನೋರಾ ಫತೇಹಿ, ಸನ್ನಿ ಲಿಯೋನ್ನಂತಹ ಪ್ರಮುಖ ಡ್ಯಾನ್ಸರ್ಗಳು ಪ್ರತಿ ಹಾಡಿಗೆ ಕೇವಲ 2 ಕೋಟಿ ರೂ.ಗಳನ್ನಷ್ಟೇ ವಿಧಿಸುತ್ತಾರೆ. ಚಯ್ಯಾ ಚಯ್ಯಾ ಹಾಡಿನ ಖ್ಯಾತಿಯ ಮಲೈಕಾ ಅರೋರಾ ಮತ್ತೆ ಪ್ರತಿ ಹಾಡಿಗೆ 50 ಲಕ್ಷ-1 ಕೋಟಿ ರೂ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
ಪ್ರಮುಖ ನಟಿಯರು ತಮ್ಮ ನೃತ್ಯದ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ತಮ್ಮ ಸ್ಟಾರ್ ಪವರ್ನ್ನು ಬಂಡವಾಳವಾಗಿಟ್ಟುಕೊಂಡು ಡ್ಯಾನ್ಸ್ಗಳಿಗೆ ಹೆಚ್ಚಿನ ಮೊತ್ತವನ್ನು ವಿಧಿಸುತ್ತಾರೆ.
ಕರೀನಾ ಕಪೂರ್ ವರ್ಷಗಳ ಹಿಂದೆ ಐಟಂ ಸಾಂಗ್ ಮಾಡುವಾಗ 1.5 ಕೋಟಿ ರೂ, ತಮನ್ನಾ ಭಾಟಿಯಾ ಪ್ರತಿ ಹಾಡಿಗೆ 1 ಕೋಟಿ ರೂ ಚಾರ್ಜ್ ಮಾಡಿದ್ದರು. ಕತ್ರಿನಾ ಕೈಫ್ ಪ್ರತಿ ಹಾಡಿಗೆ 2 ಕೋಟಿ ರೂ., ಜಾಕ್ವೆಲಿನ್ ಫರ್ನಾಂಡೀಸ್ 3 ಕೋಟಿ ರೂ. ಪಡೆಯುತ್ತಾರೆ.
ಇಂದಿನ ಅನೇಕ ಟಾಪ್ ನಟಿಯರು 5 ಕೋಟಿ ರೂ.ಗಿಂತ ಹೆಚ್ಚಿನ ಶುಲ್ಕವನ್ನು ಪಡೆಯುವುದಿಲ್ಲ. ವರದಿಗಳ ಪ್ರಕಾರ ಜಾನ್ವಿ ಕಪೂರ್, ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಮತ್ತು ತಾಪ್ಸಿ ಪನ್ನು ಮುಂತಾದ ಹೆಸರುಗಳು ಇಡೀ ಚಿತ್ರಗಳಿಗೆ ಈ ಮೊತ್ತಕ್ಕಿಂತ ಕಡಿಮೆ ಶುಲ್ಕ ವಿಧಿಸುತ್ತಾರೆ.