- Home
- Entertainment
- Cine World
- Indian Celebrities: ಕನ್ನಡ ನಟಿಯೂ ಸೇರಿ ವಿಮಾನ ದುರಂತದಲ್ಲಿ ಮೃತಪಟ್ಟ ಸೆಲೆಬ್ರಿಟಿಗಳು
Indian Celebrities: ಕನ್ನಡ ನಟಿಯೂ ಸೇರಿ ವಿಮಾನ ದುರಂತದಲ್ಲಿ ಮೃತಪಟ್ಟ ಸೆಲೆಬ್ರಿಟಿಗಳು
ಇಂದು ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ. ಈ ಹಿಂದೆ ಕೂಡ ವಿಮಾನ ಅಪಘಾತ ಆಗಿ ಭಾರತೀಯ ನಟ-ನಟಿಯರು ಸಾವನ್ನಪ್ಪಿದ್ದಾರೆ. ಹಾಗಾದರೆ ಅವರು ಯಾರು ಯಾರು?
- FB
- TW
- Linkdin
Follow Us
)
ಯಾರು? ಯಾರು?
ಏರ್‌ಕ್ರ್ಯಾಶ್‌ನಲ್ಲಿ ಸಾವನ್ನಪ್ಪಿದ ಸೆಲೆಬ್ರಿಟಿಗಳಲ್ಲಿ ಕನ್ನಡ ನಟಿ ಕೂಡ ಸೇರಿದ್ದಾರೆ ಎನ್ನೋದನ್ನು ನೆನಪಿಡಬೇಕು.
ವೈ.ಎಸ್. ರಾಜಶೇಖರ ರೆಡ್ಡಿ
2009ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರು ಬೆಲ್ 430 ಟ್ವಿನ್-ಎಂಜಿನ್ ಹೆಲಿಕಾಪ್ಟರ್ ಅಪಘಾತದಲ್ಲಿ. ತನಿಖೆಯಲ್ಲಿ ಹೆಲಿಕಾಪ್ಟರ್ ವಾಯು ಯೋಗ್ಯವಾಗಿರಲಿಲ್ಲ ಎಂದು ಹೇಳಲಾಯ್ತು. ಪೈಲಟ್‌ಗಳ ಕಳಪೆ ನಿರ್ಧಾರದಿಂದ ಹೆಲಿಕಾಪ್ಟರ್ ಅಪಘಾತ ಆಯ್ತು.
ಇಂದರ್ ಠಾಕೂರ್
1985ರಲ್ಲಿ ಏರ್ ಇಂಡಿಯಾ ವಿಮಾನ ಕನಿಷ್ಕ-182ರ ಅಪಘಾತದಲ್ಲಿ ನಾದಿಯಾ ಕೆ ಪಾರ್ ಸಿನಿಮಾದಲ್ಲಿ ತಮ್ಮ ಪಾತ್ರದಿಂದಲೇ ಗುರುತಿಸಿಕೊಂಡ ನಟ ಇಂದರ್ ಠಾಕೂರ್ ನಿಧನರಾದರು. ಆಗ ಇವರ ಜೊತೆಗೆ ಇಡೀ ಕುಟುಂಬವಿತ್ತು. ಈ ದುರಂತದಲ್ಲಿ 329 ಜನರು ಸಾವನ್ನಪ್ಪಿದ್ದಾರೆ.
ತರುಣಿ ಸಚದೇವ್
ರಸನಾ ಗರ್ಲ್ ಎಂದು ಹೆಸರು ಪಡೆದಿದ್ದ ನಟಿ ತರುಣಿ ಸಚದೇವ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ 14ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತರುಣಿಯ ಜನ್ಮದಿನ , ಮರಣದಿನ ಒಂದೇ ಆಗಿತ್ತು ಎನ್ನೋದು ವಿಶೇಷ. ಅವರು ಮೇ 14, 1998ರಂದು ಜನಿಸಿದ್ದು, ಮೇ 14, 2012ರಂದು ನಿಧನರಾಗಿದ್ದಾರೆ.
ಸೌಂದರ್ಯ
ಏಪ್ರಿಲ್ 17, 2004ರಂದು ನಟಿ ಸೌಂದರ್ಯ ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ಕರೀಂನಗರಕ್ಕೆ ಪ್ರಚಾರಕ್ಕೆ ಹೋಗುತ್ತಿದ್ದರು. ಬೆಂಗಳೂರಿನ ಜಕ್ಕೂರ್ ಏರ್‌ಫೀಲ್ಡ್‌ನಿಂದ ಟೇಕ್ ಆಫ್ ಆದ ಬಳಿಕ, 100 ಅಡಿ ಎತ್ತರದಲ್ಲಿ ಹೆಲಿಕಾಪ್ಟರ್ ಅಪಘಾತ ಆಯ್ತು.
ಸಂಜಯ್ ಗಾಂಧಿ
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಆಕ್ಟಿವ್ ಆಗಿದ್ದರು. ಜೂನ್ 23, 1980 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ವೈಮಾನಿಕ ಸಾಹಸ ಮಾಡುತ್ತಿದ್ದಾಗ, ವಿಮಾನ ಕಂಟ್ರೋಲ್ ತಪ್ಪಿತು.
ಮಾಧವರಾವ್ ಸಿಂಧಿಯಾ
ದೇಶದ ಮಾಜಿ ರೈಲ್ವೆ ಸಚಿವ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30, 2001 ರಂದು ಕಾನ್ಪುರದಲ್ಲಿ ರಾಜಕೀಯ ರ್ಯಾಲಿಗೆ ಹೋಗುತ್ತಿದ್ದಾಗ ವಿಮಾನ ಅಪಘಾತ ಆಗಿತ್ತು.
ಒ.ಪಿ. ಜಿಂದಾಲ್, ಸುರೇಂದರ್ ಸಿಂಗ್
ಹರಿಯಾಣದ ವಿದ್ಯುತ್ ಸಚಿವ, ಕೈಗಾರಿಕೋದ್ಯಮಿ ಒ.ಪಿ. ಜಿಂದಾಲ್, ಕೃಷಿ ಸಚಿವ ಸುರೇಂದರ್ ಸಿಂಗ್ ಇಬ್ಬರೂ ಕೂಡ 2005ರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ದೆಹಲಿಯಿಂದ ಚಂಡೀಗಢಕ್ಕೆ ಕಿಂಗ್ ಕೋಬ್ರಾ ಹೆಲಿಕಾಪ್ಟರ್ ಹೋಗುತ್ತಿದ್ದಾಗ, ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈ ಅಪಘಾತ ನಡೆದಿದೆ.
ದೋರ್ಜಿ ಖಂಡು
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. 2007ರಿಂದ ಸಾಯುವವರೆಗೆ ಅವರು ಸಿಎಂ ಆಗಿದ್ದರು. ಪವನ್ ಹನ್ಸ್ ಹೆಲಿಕಾಪ್ಟರ್ ಕಂಟ್ರೋಲ್ ತಪ್ಪಿ ಅಪಘಾತಕ್ಕೀಡಾಯಿತು. ಇದಾಗಿ ಐದು ದಿನಗಳ ನಂತರ ತವಾಂಗ್‌ನಲ್ಲಿ ವಿಮಾನದ ಅವಶೇಷಗಳು ಪತ್ತೆಯಾದವು. ಭಾರತೀಯ ಆರ್ಮಿಯಲ್ಲಿಯೂ ಇವರು ಕೆಲಸ ಮಾಡಿದ್ದರು.
ಹೋಮಿ ಬಾಬಾ
ಭಾರತೀಯ ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಏರ್‌ಇಂಡಿಯಾ ಫ್ಲೈಟ್101 ಕ್ರ್ಯಾಶ್‌ನಲ್ಲಿ ನಿಧನರಾದರು. ಜೆನಿವಾ ಏರ್‌ಟ್ರಾಫಿಕ್‌ಕಂಟ್ರೋಲರ್‌ಜೊತೆಗೆ ಮಿಸ್‌ಕಮ್ಯುನಿಕೇಶನ್‌ಆಗಿ ಈ ಘಟನೆ ನಡೆದಿದೆ.
ಸಿಡಿಎಸ್ ಬಿಪಿನ್ ರಾವತ್
ಡಿಸೆಂಬರ್ 8, 2021 ರಂದು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಸುಲೂರಿನಿಂದ ವೆಲ್ಲಿಂಗ್ಟನ್‌ಗೆ ಹೆಲಿಕಾಪ್ಟರ್ ಮೂಲಕ ಹೋಗುತ್ತಿದ್ದಾಗ, ತಮಿಳುನಾಡಿನ ಕೂನೂರಿನಲ್ಲಿ ಅವರ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಅವರ ಪತ್ನಿ, ಇತರ 11 ಜನರು ಸಹ ವಿಮಾನದಲ್ಲಿದ್ದರು.