800 ಕೋಟಿ ರೂ. ಗಳಿಸಿರುವ ಬಾಲನಟಿ ಸಾರಾ ಅರ್ಜುನ್; ಈ ವಯಸ್ಸಿಗೆ ಆಸ್ತಿ ಎಷ್ಟಿದೆ ನೋಡಿ
10 ಕೋಟಿ ಆಸ್ತಿ ಒಡತಿ ಬಾಲನಟಿ ಸಾರಾ ಅರ್ಜುನ್. ಸಾಮಾಜಿಕ ಜಾಲತಾಣದಲ್ಲಿದೆ ನೂರಾರು ಪ್ಯಾನ್ ಪೇಜ್‌ಗಳು...

ಸಾರಾ ಅರ್ಜುನ್ ತುಂಬಾ ಚಿಕ್ಕ ವಯಸ್ಸಿನಲ್ಲೇ ನಟನೆ ಕ್ಷೇತ್ರಕ್ಕೆ ಕಾಲಿಟ್ಟರು. ಈಗ ಆಕೆಗೆ 17 ವರ್ಷ ಆಗಿದ್ದು ಸುಮಾರು 10 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ.
2006ರಲ್ಲಿ ಜನಿಸಿದ ಸಾರಾ 5ನೇ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಬಾಲಿವುಡ್ ಜನಪ್ರಿಯ ಸಿನಿಮಾ 404 ಹಾಗೂ ತಮಿಳು ದೈವ ತಿರುಮಗಲ್ ಸಿನಿಮಾದಲ್ಲಿ ಮೊದಲು ನಟಿಸಿದ್ದು.
ಈ ಎರಡು ಸಿನಿಮಾ ಸೂಪರ್ ಹಿಟ್ ಆದ ಮೇಲೆ ನಟ ವಿಕ್ರಮ್ ಮಗಳಾಗಿ ನಟಿಸಿದ ಸಿನಿಮಾ ಡಬಲ್ ಹಿಟ್ ಕಂದುಕೊಟ್ಟಿದಲ್ಲದೆ ಸಾಕಷ್ಟು ಆಫರ್ ಬರುವಂತೆ ಮಾಡಿತ್ತು.
ಅತಿ ಹೆಚ್ಚು ಸೂಪರ್ ಸ್ಟಾರ್‌ಗಳ ಜೊತೆ ನಟಿಸಿರುವ ಸಾರಾ ಅರ್ಜುನ್ ವಿದ್ಯಾಭ್ಯಾಸದ ಜೊತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಹಿರಿಯ ನಟ ರಾಜ್ ಅರ್ಜುನ್ (Raj Arjun) ಮುದ್ದಿನ ಮಗಳು ಸಾರಾ ಈಗ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಬ್ಲ್ಯಾಕ್ ಫ್ರೈಡೇ, ರೌಡ ರಾಥೋಡ್, ರಯೀಸ್, ಸೀಕ್ರೆಟ್ ಸೂಪರ್ ಸ್ಟಾರ್, ಡಿಯರ್ ಕಾಮ್ರೇಡ್ ಮತ್ತು ತಲೈವಿ ಸಿನಿಮಾದಲ್ಲಿ ಸಾರಾ ನಟಿಸಿದ್ದಾರೆ.
ಮಣಿರತ್ನಂ ನಿರ್ದೇಶನ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿರುವ ಸಾರಾ ಅರ್ಜುನ್. 800 ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ಸಾರಾ ಸುಂದರಿ.
ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಾರಾ ಈಗಾಗಲೆ 10 ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರಂತೆ. ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.