ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಾಲಿವುಡ್ ತಾರೆಯರು
ಅಯೋಧ್ಯೆ ರಾಮ ಮಂದಿರದಲ್ಲಿ ಹಿಂದೂಗಳ ಅರಾಧ್ಯ ದೈವ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದ ಮೂಲೆ ಮೂಲೆಯಿಂದ ಬಂದ ಸಾವಿರಾರು ಸಾಧುಗಳ ಜೊತೆ ಬಾಲಿವುಡ್ ಹಾಗೂ ಭಾರತೀಯ ವಿವಿಧ ಚಿತ್ರರಂಗದ ನಟ ನಟಿಯರು ಕೂಡ ಈ ಮಂದಿರ ಉದ್ಘಾಟನೆಗೆ ಸಾಕ್ಷಿಯಾದರು.

ಬಾಲಿವುಡ್ ನಟರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ಸಮೇತರಾಗಿ ಆಯೋಧ್ಯೆಗೆ ಆಗಮಿಸಿ ಶ್ರೀರಾಮನ ಈ ವೈಭವದ ಕ್ಷಣಕ್ಕೆ ಸಾಕ್ಷಿಯಾದರು.
ಬಹುತೇಕ ಎಲ್ಲಾ ನಟ ನಟಿಯರು ಈ ಐತಿಹಾಸಿಕ ಕ್ಷಣಕ್ಕೆ ಸಂಪ್ರದಾಯಿಕ ಧಿರಿಸಿನಲ್ಲಿ ಆಗಮಿಸಿದ್ದು, ಆಲಿಯಾ ಭಟ್ ನೀಲಿ ಬಣ್ಣದ ಸೀರೆ ಧರಿಸಿ ಸೆರಗನ್ನು ಹೊದ್ದು ಕಾಣಿಸಿಕೊಂಡರೆ ಪತಿ ರಣ್‌ಬೀರ್ ಕ್ರೀಮ್ ಕಲರ್ ಬಣ್ಣದ ಕುರ್ತಾ ಧರಿಸಿದ್ದರು.
ಹಾಗೆಯೇ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಮಗ ನಟ ಅಭಿಷೇಕ್ ಬಚ್ಚನ್ ಜೊತೆ ಆಗಮಿಸಿದ ಅಮಿತಾಭ್ ವಿಐಪಿಗಳಿಗೆ ಮೀಸಲಿರಿಸಿದ ಸ್ಥಳದಲ್ಲಿ ಕುಳಿತು ಕುತೂಹಲದಿಂದ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ವೀಕ್ಷಿಸಿದರು.
ಹಾಗೆಯೇ ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ತಮ್ಮ ಪತ್ನಿ ಜೊತೆ ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಮ ಮಂದಿರದ ಜೊತೆಗಿನ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ.
ಹಾಗೆಯೇ ಬಾಲಿವುಡ್‌ನ ಮತ್ತೊಂದು ಖ್ಯಾತ ಜೋಡಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕೂಡ ಈ ಶುಭ ಸಮಾರಂಭಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದರು.
90 ರ ದಶಕದ ಬಾಲಿವುಡ್ ನಟಿ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಕೂಡ ಪತಿ ಶ್ರೀರಾಮ್ ನೇನೆ ಜೊತೆ ಈ ಶುಭ ಸಮಾರಂಭಕ್ಕೆ ಆಗಮಿಸಿ ಶ್ರೀರಾಮನ ವೈಭವವನ್ನು ಕಣ್ತುಂಬಿಕೊಂಡರು.
ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ, ತಮ್ಮ ಪತ್ನಿ ಸುರೇಖಾ ಕೊನ್ನಿಡೆಲ್ಲಾ ಹಾಗೂ ಪುತ್ರ ಟಾಲಿವುಡ್ ನಟ ರಾಮ್‌ಚರಣ್ ಜೊತೆ ಆಗಮಿಸಿ ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಹಾಗೆಯೇ ಕನ್ನಡದ ನಟ ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಜೊತೆ ರಾಮ ಮಂದಿರದ ಈ ವೈಭವಕ್ಕೆ ಸಾಕ್ಷಿಯಾದರು. ರಾಮಲಲ್ಲಾನ ಮೂರ್ತಿ ಕೆತ್ತಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ ಜೊತೆ ಸೆಲ್ಫಿ ತೆಗೆದುಕೊಂಡು ದಂಪತಿ ಸಂಭ್ರಮಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.