ಕೋಳಿ ಕಾಲು ಕೆಟ್ಟ ಧ್ವನಿ, ನೋಡೋಕೆ ಹುಡುಗ: ಅಸಹ್ಯವಾಗಿ ನಟಿ ಅನನ್ಯಾ ಪಾಂಡೆ ಕಾಲೆಳೆದ ಟ್ರೋಲಿಗರು
ವೈರಲ್ ಆಯ್ತು ಅನನ್ಯಾ ಪಾಂಡೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿರುವ ವಿಡಿಯೋ. ಬಾಲ್ಯದಿಂದಲೂ ಬಾಡಿ ಶೇಮಿಂಗ್ ಎದುರಿಸಿರುವ ನಟಿ....
ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಸದ್ಯ ಬಿ-ಟೌನ್ ರೂಲ್ ಮಾಡುತ್ತಿರುವ ನಟಿ. ಅನನ್ಯಾ ಬಣ್ಣದ ಜರ್ನಿ ಆರಂಭದಿಂದ ಸಾಕಷ್ಟು ಟ್ರೋಲ್‌ಗಳನ್ನು ಎದುರಿಸಿದ್ದಾರೆ.
ಬಾಲ್ಯದಿಂದಲೂ ಕಾಲೆಳೆಯುವುದು ಅವಮಾನಗಳನ್ನು ನೋಡಿಕೊಂಡು ಬೆಳೆದಿರುವ ಕಾರಣ ಅನನ್ಯಾ ಪಾಂಡೆ ಬಾಡಿ ಶೇಮಿಂಗ್ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ.
'ಶಾಲೆಯಲ್ಲಿ ನನ್ನ ಜೊತಗಿದ್ದ ಸ್ನೇಹಿತರು ಸದಾ ನನ್ನ ಪರ ನಿಲ್ಲುತ್ತಿದ್ದರು. ಸ್ಕೂಲ್‌ನಲ್ಲಿ ನನ್ನ ಟೀಚರ್‌ಗಳು ತುಂಬಾ ಒಳ್ಳೆಯವರು ಯಾವ ಕಾರಣಕ್ಕೂ ಬಾಡಿ ಶೇಮಿಂಗ್‌ಗೆ ಜಾಗ ಮಾಡಿ ಕೊಡುತ್ತಿರಲಿಲ್ಲ' ಎಂದು brut india ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಅಲ್ಲದೆ ಯಾವ ಕಾರಣಕ್ಕೂ ಯಾರೂ ನಮ್ಮನ್ನು ರೇಗಿಸುವುದಾಗಿ ಅಥವಾ ನನ್ನ ಹೆಸರು ಬಳಸಿ ಹಾಸ್ಯ ಮಾಡುವುದಾಗಲಿ ಮಾಡಲಿಲ್ಲ. ಒಬ್ಬ ಹುಡುಗ ಚೆನ್ನಾಗಿದ್ದಾನೆ ಅಂದ್ರೆ ಅವನ ಜೊತೆ ಹೆಸರು ಕರೆದು ರೇಗಿಸುತ್ತಿದ್ದರು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಕಾಲೆಳೆಯುತ್ತಿರಲಿಲ್ಲ.'
'ನಾನು ತುಂಬಾ ಸಣ್ಣಗಿರುವ ಕಾರಣ ಎಲ್ಲರೂ ನನಗೆ toothpick ಲೆಗ್ ಅಥವಾ ಚಿಕನ್ ಲೆಗ್ ಎಂದು ಹಾಸ್ಯ ಮಾಡುತ್ತಾರೆ. ನಾನು ತುಂಬಾ ಹೇರಿ...ತುಂಬಾ ಬೇಗ ನನ್ನ ಮೈ ಮೇಲೆ ಕೂದಲುಗಳು ಬೆಳೆಯುತ್ತಿತ್ತು'
'ಕೆಲವರು ನನ್ನನ್ನು ಗೂನು ಬೆನ್ನು hunchback ಎಂದು ಕಾಮೆಂಟ್ ಮಾಡುತ್ತಾರೆ. ನನ್ನ ಸ್ನೇಹಿತರ ಸಪೋರ್ಟ್‌ನಿಂದ ಪಾಸಿಟಿವಿಟಿ ಮತ್ತು ಸೆಲ್ಫ್ ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡೆ ಹೀಗಾಗಿ ನೆಗೆಟಿವ್ ಕಾಮೆಂಟ್ ನೋವು ಮಾಡುತ್ತಿರಲಿಲ್ಲ.'
'ನಾನು ಚಿತ್ರರಂಗಕ್ಕೆ ಕಾಲಿಡುವ ಮುನ್ನ ಪೋಷಕರ ಜೊತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿತ್ತುಆದ ನಾನು ಹುಡುಗ ರೀತಿ ಇರುವೆ, ಫ್ಲಾಟ್ ಸ್ಕ್ರೀನ್ ರೀತಿ ಇರುವೆ ಎಂದು ಕಾಮೆಂಟ್ ಮಾಡುತ್ತಿದ್ದರು.'
'ಆಗ ನಿಜಕ್ಕೂ ಬೇಸರ ಅಗುತ್ತಿತ್ತು ಏಕೆಂದರೆ ಸೆಲ್ಫ್ ಲವ್ ಅಂದ್ರೆ ಏನು ಜೀವನ ಅಂದ್ರೆ ಏನು ಆಗಷ್ಟೇ ತಿಳಿದುಕೊಳ್ಳಲು ಶುರು ಮಾಡಿದೆ. ತುಂಬಾ ವರ್ಷಗಳಿಂದ ನಾನು ಬಾಡಿ ಶೇಮಿಂಗ್ ಎದುರಿಸುತ್ತಿರುವ ಕಾರಣ ಬೇಸರ ಆದರೆ ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಕಲಿತಿರುವೆ ಆದರೆ ಒಂದು ದಿನ ತಲೆ ಕೆಟ್ಟರೆ ಖಂಡಿತಾ ರಿಯಾಕ್ಟ್ ಮಾಡುವೆ.'
'ನನ್ನ ಧ್ವನಿ ಅಂದ್ರೆ ಕೆಲವರಿಗೆ ಇಷ್ಟ ಆಗುವುದಿಲ್ಲ ದಿನಕ್ಕೆ ನೂರಾರು ಮಂದಿ ನನ್ನನ್ನು ಮಿಮಿಕ್ರಿ ಮಾಡುತ್ತಾರೆ. ಅದನ್ನು ನಿಲ್ಲಿಸುವುದಕ್ಕೆ ಆಗಲ್ಲ ಬದಲಿಗೆ ನಾನೇ ಬದಲಾಗಬೇಕು' ಎಂದು ಅನನ್ಯಾ ಮಾತನಾಡಿದ್ದಾರೆ.