- Home
- Entertainment
- Cine World
- Pooja Batra: ಸಿನಿಮಾದಿಂದ ಮಿಸ್ಸಿಂಗ್,ನಾನೇನು ಆಲೂಗಡ್ಡೆ ತಿಂತಾ ಕೂತಿರ್ಲಿಲ್ಲ ಎಂದ ನಟಿ
Pooja Batra: ಸಿನಿಮಾದಿಂದ ಮಿಸ್ಸಿಂಗ್,ನಾನೇನು ಆಲೂಗಡ್ಡೆ ತಿಂತಾ ಕೂತಿರ್ಲಿಲ್ಲ ಎಂದ ನಟಿ
Pooja Batra : ಸಿನಿಮಾ ಮಾಡ್ತಾ ಇಲ್ವಾ ? ಸಿನಿಮಾಗಳಿಂದ ಮಿಸ್ ಆಗಿದ್ದೀರಿ ಎಂದ ನೆಟ್ಟಿಗರು ನಾನೇನು ಸುಮ್ನೆ ಕೂತು ಆಲೂಗಡ್ಡೆ ತಿನ್ನುತ್ತಿರಲಿಲ್ಲ ಎಂದ ನಟಿ

=
ನಟಿ ಪೂಜಾ ಬಾತ್ರಾ(Pooja Batra) OTT ಬಿಡುಗಡೆ ಸ್ಕ್ವಾಡ್‌ನೊಂದಿಗೆ ಕಂ ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. 1997 ರ ಸಿನಿಮಾ ವಿರಾಸತ್‌ನೊಂದಿಗೆ ಖ್ಯಾತಿ ಗಳಿಸಿದ ನಟಿ, ಈ ಚಿತ್ರದಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ನಟಿಸಿದ್ದಾರೆ. ಇದು ನಟ ಡ್ಯಾನಿ ಡೆನ್‌ಜಾಂಗ್‌ಪಾ ಅವರ ಮಗ ರಿನ್‌ಸಿಂಗ್ ಡೆನ್‌ಜಾಂಗ್‌ಪಾ ಅವರ ಡಿಬಟ್ ಶೋ ಕೂಡಾ ಹೌದು.
ಪೂಜಾ ಅವರು ನಟ ನವಾಬ್ ಷಾ ಅವರನ್ನು ಮದುವೆಯಾಗಿದ್ದಾರೆ. ಭಾರತ(India) ಮತ್ತು ಲಾಸ್ ಏಂಜಲೀಸ್ ನಡುವೆ ಆಗಾಗ್ಗೆ ಹೋಗಿ ಬರುತ್ತಿರುತ್ತಾರೆ. ಭಾರತದಲ್ಲಿ ಬೆಳ್ಳಿತೆರೆಯಿಂದ ನಟನೆಯಿಂದ ಮಿಸ್ ಆಗಿರುವ ಬಗ್ಗೆ ನಟಿ ಮಾತನಾಡಿದ್ದಾರೆ.
ಮಾಜಿ ಮಿಸ್ ಇಂಡಿಯಾ(Miss India) ಅವರು ಅಮೇರಿಕನ್ ಶೋಗಳು ಮತ್ತು ಚಲನಚಿತ್ರಗಳಲ್ಲಿ ತನ್ನ ಕೆಲಸದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ ನಟಿ ತಾವು ಬ್ಯುಸಿಯಾಗಿರುವ ಬಗ್ಗೆ ರಿವೀಲ್ ಮಾಡಿದ್ದಾರೆ.
ನನ್ನ ಪಾತ್ರದ ಹೆಸರು ಸ್ಕ್ವಾಡ್ರನ್ ಲೀಡರ್ ನಂದಿನಿ ರಜಪೂತ್. ಇದು ಸಂಪೂರ್ಣ ಆಕ್ಷನ್ ಚಲನಚಿತ್ರವಾಗಿದ್ದು, ನಾನು ಭಾರತದಿಂದ ಅತ್ಯಂತ ಗಣ್ಯ ಏಜೆಂಟರನ್ನು ಆಯ್ಕೆ ಮಾಡುವ ಮಿಷನ್ ಅನ್ನು ನಿಯೋಜಿಸುವ ಪಾತ್ರ ಮಾಡಿದ್ದೇನೆ ಎಂದಿದ್ದಾರೆ.
ನಾನು ಅಮೆರಿಕದಲ್ಲಿ(America) ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ನಾನು ಸಾಕಷ್ಟು ಅಮೇರಿಕನ್ ಶೋಗಳನ್ನು ಮಾಡಿದ್ದೇನೆ, ನಾನು ಕೆಲಸ ಮಾಡುತ್ತಲೇ ಇದ್ದೆ ಎಂದಿದ್ದಾರೆ.
ನಾನು ಲೆಥಾಲ್ ವೆಪನ್, ಟೈಮ್‌ಲೆಸ್, ರೂಕಿ ಮತ್ತು ನಾನು ಗಗನಯಾತ್ರಿಯಾಗಿ ನಟಿಸಿದ ಚಲನಚಿತ್ರವನ್ನು ಮಾಡಿದ್ದೇನೆ ಎಂದಿದ್ದಾರೆ.
ಸದ್ಯ ನಾನು ಹೆಕ್ಸಾನ್ ಗ್ಯಾಲಟನ್ ಎಂಬ ಸಿನಿಮಾ ಮಾಡುತ್ತಿದ್ದೇನೆ. ನಾನು ಕೆಲಸ ಮಾಡುತ್ತಿದ್ದೇನೆ. ಕುಳಿತು ಆಲೂಗಡ್ಡೆಯನ್ನು ಮಾತ್ರ ತಿನ್ನುತ್ತಿಲ್ಲ. ಸ್ಕ್ವಾಡ್‌ನಲ್ಲಿ ನನ್ನ ಪಾತ್ರವನ್ನು ಪ್ರಶಂಸಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪೂಜಾ
ಖಂಡಿತ ಭಾರತದ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದೃಷ್ಟವಶಾತ್, ಭಾರತದಲ್ಲಿ ಅಭಿಮಾನಿಗಳ ಗಮನಕ್ಕೆ ಕೊರತೆಯಿಲ್ಲ. ನಾನು ಭಾರತದಲ್ಲಿದ್ದಾಗಲೆಲ್ಲ ನನಗೆ ತುಂಬಾ ಪ್ರೀತಿ ಸಿಗುತ್ತದೆ. ಅದು ಶಾಶ್ವತ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ