- Home
- Entertainment
- Cine World
- ನೋಡಲು ಚೆನ್ನಾಗಿಲ್ಲ ಅಂತ 17 ವರ್ಷ ಕಣ್ಣೀರಿಟ್ಟಿದ್ದೀನಿ, ಅಮ್ಮನಿಂದ ಬದಲಾದೆ: ನಟಿ ಶಿಲ್ಪಾ ಶೆಟ್ಟಿ
ನೋಡಲು ಚೆನ್ನಾಗಿಲ್ಲ ಅಂತ 17 ವರ್ಷ ಕಣ್ಣೀರಿಟ್ಟಿದ್ದೀನಿ, ಅಮ್ಮನಿಂದ ಬದಲಾದೆ: ನಟಿ ಶಿಲ್ಪಾ ಶೆಟ್ಟಿ
ತಮ್ಮ ಬ್ಯೂಟಿ ಬಗ್ಗೆ ನಂಬಿಕೆ ಇರಲಿಲ್ಲ ದಿನ ಅಳುತ್ತಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಕಣ್ಣೀರಿಟ್ಟರಂತೆ. ಈ ಘಟನೆ ಹಂಚಿಕೊಂಡಿದ್ದಾರೆ.

ಮಂಗಳೂರು ಸುಂದರಿ, ಬಾಲಿವುಡ್‌ನ ಬೇಡಿಕೆಯ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಕಟೀಲು ದುರ್ಗಾಪರಮೇಶ್ವರಿ ಮೊರೆ ಹೋಗುತ್ತಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಎರಡು ಸಲ ತಾಯಿ ದರ್ಶನ ಪಡೆದಿದ್ದಾರೆ.
ಚಿತ್ರರಂಗಕ್ಕೆ ಬರುವ ಮುನ್ನ ಶಿಲ್ಪಾ ಶೆಟ್ಟಿ ಎಷ್ಟು ಕಷ್ಟ ಮತ್ತು ಅವಮಾನಗಳನ್ನು ಎದುರಿಸಿದ್ದರು ಗೊತ್ತಾ? ತಮ್ಮ ಬ್ಯೂಟಿ ಬಗ್ಗೆ ತಮಗೇ ಧೈರ್ಯ ಇರಲಿಲ್ಲ ನಂಬಿಕೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
'ಚಿಕ್ಕವಳು ಇದ್ದಾಗ ನನ್ನ ತಾಯಿ ಹೇಳಿಕೊಳ್ಳುತ್ತಿದ್ದೆ ನಾನು ನೋಡಲು ಚೆನ್ನಾಗಿಲ್ಲ ಎಂದು. 17ನೇ ವಯಸ್ಸಿನವರೆಗೂ ನಾನು ತುಂಬಾ ಅಳುತ್ತಿದ್ದೆ. ಆದರೆ ನನ್ನ ತಾಯಿಗೆ ನನಗೆ ugly ducking ಕಥೆ ಹೇಳುತ್ತಿದ್ದರು.
ಚಿಕ್ಕ ಬಾತುಕೋಳಿ ಅದ್ಭುತ ಹಂಸಗಳಾಗಿ ಬದಲಾದ ಕಥೆ ಇದು. ನನ್ನ ಪರಿಸ್ಥಿತಿ ಕೂಡ ಹಾಗೆ ಇತ್ತು ನಾನು ಕೂಡ ಅಷ್ಟೇ ಬದಲಾಗಿದ್ದೀನಿ. ನಮ್ಮೊಟ್ಟಿಗೆ ಗಟ್ಟಿ ಮಹಿಳೆ ಇದ್ದಾಗ ಮಾತ್ರ ನಾವು ಇಷ್ಟು ಬದಲಾಗಲು ಸಾಧ್ಯವಾಗುವುದು.
ನನ್ನ ತಾಯಿ ನನ್ನ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರ ವಹಿಸಿದ್ದಾರೆ. ನನ್ನಂಥೆ ಆ ವಯಸ್ಸಿನಲ್ಲಿ ಕಷ್ಟ ಪಟ್ಟ ಹಾಗೂ ಪಡುತ್ತಿರುವ ಹುಡುಗಿಯರಿಗೆ ಒಂದು ಸಲಹೆ ಕೊಡುತ್ತೀನಿ ದಯವಿಟ್ಟು ನಿಮ್ಮನ್ನು ನೀವು ನಂಬಲು ಶುರು ಮಾಡಿ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಿಲ್ಟರ್‌ಗಳು ಬಂದಿದೆ ಅದನ್ನು ಬಳಸಿ ಆದರೆ ಅದರಿಂದ ಮತ್ತೊಬ್ಬರ ಪ್ರೀತಿ ಗಳಿಸುವ ಯೋಚನೆ ಮಾಡಬೇಡಿ. ನಾವು ಏನು ಅನ್ನೋದು ನಮಗೆ ಮಾತ್ರ ಗೊತ್ತಿರುವುದು.
Shilpa Shetty
ನಮ್ಮತನವನ್ನು ಬಿಟ್ಟು ಕೊಡಬಾರದು. ಮನಸ್ಸಿನಿಂದ ನೀವು ಖುಷಿಯಾಗಿ ಇಲ್ಲ ಅಂದ್ರೆ ಖಂಡಿತಾ ಹೊರಗಿನದಲೂ ನೀವು ಖುಷಿಯಾಗಿ ಕಾಣುವುದಿಲ್ಲ. ನಾವು ಸದಾ ಟ್ರೆಂಡ್ ಕ್ರಿಯೇಟ್ ಮಾಡಬೇಕು.