- Home
- Entertainment
- Cine World
- ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ದಂಪತಿ ಮಧ್ಯೆ ಹತ್ತು ವರ್ಷಗಳ ಗ್ಯಾಪ್ ಇದೆ; ಅದ್ರಿಂದ ಆಗಿದ್ದೇನು?
ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ದಂಪತಿ ಮಧ್ಯೆ ಹತ್ತು ವರ್ಷಗಳ ಗ್ಯಾಪ್ ಇದೆ; ಅದ್ರಿಂದ ಆಗಿದ್ದೇನು?
ಹಲವರು ಮದುವೆಯಾದ ದಿನದಿಂದಲೂ ಈ ಮದುವೆ ಬಹಳಷ್ಟು ದಿನ ನಿಲ್ಲಲ್ಲ ಎಂದು ಹೇಳುತ್ತಲೇ ಬಂದಿದ್ದರು. ಅವರಿಬ್ಬರೂ ಬಹುಬೇಗನೇ ದೂರವಾಗುತ್ತಾರೆ ಎಂದು ಕಾಯುತ್ತಲೇ ಇದ್ದರು. ಆದರೆ ಆ ದಿನ..

ಸದ್ಯ ಹಾಲಿವುಡ್‌ನಲ್ಲಿ ನಟನೆ ಮುಂದುವರೆಸುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka chopra) ಈಗಲೂ ಖುಡ ಬಿಗ್ ಸೆಲೆಬ್ರಿಟಿಯೇ ಆಗಿದ್ದಾರೆ. ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ನೆಲೆಸಿದ್ದಾರೆ.
ಆರು ವರ್ಷಗಳ ಹಿಂದೆ (2018) ಪ್ರಿಯಾಂಕಾ ಚೋಪ್ರಾ ಹಾಗು ಹಾಲಿವುಡ್ ಪಾಪ್ ಸಿಂಗರ್ ನಿಕ್ ಜೊನಾಸ್ (Nick Jonas) ಜೋಡಿ ಮದುವೆಯಾಗಿದ್ದಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದ ಜೋಡಿ, ಅಂದು ತಮ್ಮ ಮದುವೆಗೆ ಅತಿರಥ ಮಹಾರಥರನ್ನೂ ಕರೆಸಿಕೊಂಡಿದ್ದರು.
ಅದು ಅತಿಂಥ ಮದುವೆಯಲ್ಲ. ಪ್ರಿಯಾಂಕಾ-ನಿಕ್ ಮದುವೆ ತುಂಬಾ ಅದ್ದೂರಿಯಾಗಿತ್ತು ಎಂದರೆ ಅ ಮದುವೆಗೆ ಬಹಳಷ್ಟು ಜನರನ್ನು ಆಹ್ವಾನಿಸಲಾಗಿತ್ತು. ಜೊತೆಗೆ, ವೆಡ್ಡಿಂಗ್‌ಗೆ ಬರೋಬ್ಬರಿ ಎಂಬಂತೆ ಬಹಳಷ್ಟು ಕೋಟಿ ಖರ್ಚು ಮಾಡಲಾಗಿತ್ತು.
ಒಮ್ಮೆ ಪ್ರಿಯಾಂಕಾ ಚೋಪ್ರಾ ಮಾತನಾಡುತ್ತ ತಮ್ಮ ಜೀವನದಲ್ಲಿ ನಡೆದ ಒಂದೇ ಒಂದು ತಪ್ಪಿನ ಬಗ್ಗೆ ಹೇಳಿಕೊಂಡಿದ್ದರು. ಅದು ಏನೆಂದರೆ, ಬೇರೆಯವರ ಮಾತು ಕೇಳಿ ಅದನ್ನು ಮನಸ್ಸಿಗೆ ಹಚ್ಚಿಕೊಂಡು ನನ್ನ ನಾನು ಪೋಷಕರಿಗೇ ಬೈದುಬಿಟ್ಟಿದ್ದೆ' ಎಂದಿದ್ದರು.
ಅದಕ್ಕೆ ಕಾರಣವನ್ನೂ ಕೊಟ್ಟಿದ್ದರು ನಟಿ ಪ್ರಿಯಾಂಕಾ ಚೋಪ್ರಾ. 'ನಾನು ಕಪ್ಪಗಿದ್ದೇನೆ, ದಪ್ಪಗಿದ್ದೇನೆ ಎಂದೆಲ್ಲಾ ಹಲವರು ಟೀಕೆ ಮಾಡಿದ್ದರು. ನನ್ನ ಮನಸ್ಸಿಗೆ ಬೇಸರವಾಗಿ ನನಗೆ ಕೋಪ ಬಂದುಬಿಟ್ಟಿತ್ತು.
ನನ್ನ ಎಲ್ಲಾ ಕೆಟ್ಟ ಪರಿಸ್ಥಿತಿಗೆ ಹುಟ್ಟಿಸಿದ ಪೋಷಕರೇ ಕಾರಣ ಅಂದುಕೊಂಡಿದ್ದೆ. ಅದಕ್ಕಾಗಿ ಅವರೊಂದಿಗೆ ವಿಷಯ ಹೇಳದೇ ಜಗಳ ಆಡುತ್ತಿದ್ದೆ, ಕಫೊ ಮಾಡಿಕೊಳ್ಳುತ್ತಿದ್ದೆ. ಆ ಬಗ್ಗೆ ನನಗೆ ಬಹಳಷ್ಟು ರೀಗ್ರೆಟ್ ಇದೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಬಹಳಷ್ಟು ಜನರಿಗೆ ತಿಳಿದಿರುವಂತೆ, ನಿಕ್ ಜೊನಾಸ್ ಹಾಗು ಪ್ರಿಯಾಂಕಾ ಚೋಫ್ರಾ ಮಧ್ಯೆ ಬರೋಬ್ಬರಿ ಹತ್ತು ವರ್ಷಗಳ ಗ್ಯಾಪ್ ಇದೆ. ಸಾಮಾನ್ಯವಾಗಿ ದಂಪತಿಗಳಲ್ಲಿ ಒಂದೆರಡು ವರ್ಷಗಳ ಅಂತರ ಇದ್ದೆ ಇರುತ್ತದೆ. ಆದರೆ, ಈ ಹತ್ತು ವರ್ಷಗಳ ಗ್ಯಾಪ್ ಎನ್ನುವುದು ಅತಿಯಾಯಿತು ಎಂಬುದು ಬಲ್ಲವರ ಅಭಿಪ್ರಾಯ.
ಹಲವರು ಮದುವೆಯಾದ ದಿನದಿಂದಲೂ ಈ ಮದುವೆ ಬಹಳಷ್ಟು ದಿನ ನಿಲ್ಲಲ್ಲ ಎಂದು ಹೇಳುತ್ತಲೇ ಬಂದಿದ್ದರು. ಅವರಿಬ್ಬರೂ ಬಹುಬೇಗನೇ ದೂರವಾಗುತ್ತಾರೆ ಎಂದು ಕಾಯುತ್ತಲೇ ಇದ್ದರು. ಆದರೆ ಆ ದಿನ ಇನ್ನೂ ಬಂದಿಲ್ಲ.
ಅಂತಹ ಕೆಲವರ ನಿರೀಕ್ಷೆ ಸುಳ್ಳು ಮಾಡುವಂತೆ ಅವರಿಬ್ಬರೂ ಅನ್ಯೋನ್ಯವಾಗಿದ್ದು ಆರು ವರ್ಷಗಳನ್ನು ಒಟ್ಟಿಗೇ ಕಳೆದಿದ್ದಾರೆ. ಆದರೆ, ಪ್ರಿಯಾಂಕಾ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ತಮ್ಮ ಹಾಗು ಪ್ರಿಯಾಂಕಾ ಚೋಪ್ರಾ ಬಗ್ಗೆ ವೇದಿಕೆಯೊಂದರಲ್ಲಿ ಮಾತನಾಡುತ್ತ ಅಚ್ಚರಿ ಸ್ಟೇಟ್‌ಮೆಂಟ್ ನೀಡಿದ್ದಾರೆ.
ನಿಕ್ ಜೊನಾಸ್ ಅವರು 'ನನಗೆ ನಮ್ಮಿಬ್ಬರ ಮದುವೆ ಬಗ್ಗೆ ರೀಗ್ರೇಟ್ ಇದೆ' ಎಂದಿದ್ದಾರೆ. ಅವರ ಮಾತನ್ನು ಕೇಳಿ ಸ್ಟೇಜ್ ಮೇಲಿದ್ದ ಹಲವರು ಶಾಕ್‌ಗೆ ಒಳಗಾಗಿದ್ದಾರೆ. ಇದ್ಯಾಕೆ ನಿಕ್ ಅವರು ಹೀಗೆ ಹೇಳುತ್ತಿದ್ದಾರೆ ಎಂದು ಬೆರಗಾಗಿದ್ದಾರೆ.
ಅದಕ್ಕೆ ಕಾರಣ ಕೊಡುತ್ತ ನಿಕ್ ಜೊನಾಸ್ ಅವರು 'ನಾನು ಹಾಗು ಪ್ರಿಯಾಂಕಾ ಇಬ್ಬರೂ ನಮ್ಮ ವೆಡ್ಡಿಂಗ್ ಸಲುವಾಗಿ ಬಹಳಷ್ಟನ್ನು ಖರ್ಚು ಮಾಡಿದ್ದೇವೆ. ಆ ಬಗ್ಗೆ ನನಗೆ ರೀಗ್ರೆಟ್ ಇದೆ ಎಂದಿದ್ದಾರೆ. ಅತಿಯಾಗಿ ಮಾಡಿರುವ ಖರ್ಚು ಈಗ ಇದ್ದಿದ್ದರೆ ಸಾಕಷ್ಟು ಸಹಾಯ ಮಾಡುತ್ತಿತ್ತು ಎಂದಿದ್ದಾರೆ.
ನಿಕ್ ಹೇಳಿದ್ದೇನೆಂದರೆ, ನಾವಿಬ್ಬರೂ ನಮ್ಮ ಮದುವೆಯನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದರೆ ಸಾಕಿತ್ತು. ಯಾಕೆ ಅಷ್ಟೊಂದು ಗ್ರಾಂಡ್ ಆಗಿ, ಅಷ್ಟೊಂದು ಡಾಲರ್, ಅಷ್ಟೊಂದು ಯೂರೋ, ಅಷ್ಟೊಂದು ರೂಪಾಯಿ ವ್ಯಯಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಅಂದು ಅನಾವಶ್ಯಕ ಖರ್ಚು ಮಾಡಿದ್ದೇವೆ ಎನಿಸುತ್ತಿದೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.