ಹೊಸ ಸಂಗಾತಿಗೆ ಹೊಸ ಮನೆ ಖರೀದಿಸಿದ ಗ್ರೀಕ್ ಗಾಡ್, ಹೃತಿಕ್ ಮನೆ ನೋಡಿದ್ರಾ?
ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ತಮ್ಮ ಗರ್ಲ್‌ಫ್ರೆಂಡ್ ಸಬಾ ಆಜಾದ್ (Saba Azad) ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರಲು ತಯಾರಿ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮ ವರದಿಯೊಂದು ಈ ಹೇಳಿಕೆ ನೀಡಿದೆ. ಅಷ್ಟೇ ಅಲ್ಲ, ಅವರು ಶಿಫ್ಟ್ ಆಗಲಿರುವ ಫ್ಲಾಟ್‌ಗಳು ಮುಂಬೈನ ಮನ್ನತ್ ಹೆಸರಿನ ಬಂಗಲೆಯಲ್ಲಿವೆ ಎಂದು ಹೇಳಲಾಗುತ್ತಿದೆ. ವರದಿಯಲ್ಲಿ ಈ ಕಟ್ಟಡದ ಮೇಲಿನ ಎರಡು ಮಹಡಿಗಳನ್ನು ನವೀಕರಿಸಲಾಗುತ್ತಿದೆ ಮತ್ತು ದಂಪತಿಗಳು ಶೀಘ್ರದಲ್ಲೇ ಈ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಬಹುದು.
37 ವರ್ಷದ ಸಬಾ ಆಜಾದ್ ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಸಂಬಂಧ ಹೊಂದಿದ್ದಾರೆ. ಸಬಾ ಬಾಲಿವುಡ್ ನಟಿ ಮತ್ತು 'ದಿಲ್ ಕಬಡ್ಡಿ', 'ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ' ಮತ್ತು 'ಹೋಮ್ ಸ್ಟೋರೀಸ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಹೃತಿಕ್ ರೋಷನ್ ಸಬಾ ಆಜಾದ್ ಅವರೊಂದಿಗೆ ವಾಸ ಮಾಡಲು ಎರಡು ಅಪಾರ್ಟ್‌ಮೆಂಟ್‌ಗಳಿಗೆ ಸುಮಾರು 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದ್ದಾ. ಈ ಎರಡೂ ಅಪಾರ್ಟ್‌ಮೆಂಟ್‌ಗಳು ಮೂರು ಮಹಡಿಗಳಲ್ಲಿ ಹರಡಿಕೊಂಡಿದ್ದು, ಇದರ ವಿಸ್ತೀರ್ಣ ಸುಮಾರು 38 ಸಾವಿರ ಚದರ ಅಡಿ ಎಂದು ಹೇಳಲಾಗಿದೆ. ಈ ಅಪಾರ್ಟ್‌ಮೆಂಟ್‌ಗಳಿಂದ ಅರಬ್ಬಿ ಸಮುದ್ರದ ಸುಂದರ ನೋಟವನ್ನು ಕಾಣಬಹುದು.
ಹೃತಿಕ್ 15 ಮತ್ತು 16 ನೇ ಮಹಡಿಯಲ್ಲಿರುವ ಡ್ಯೂಪ್ಲೆಕ್ಸ್ (ಎರಡು ಮಹಡಿಗಳ ಅಪಾರ್ಟ್ಮೆಂಟ್) ಗೆ ಸುಮಾರು 67.50 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ಅವರು ಮತ್ತೊಂದು ಅಪಾರ್ಟ್‌ಮೆಂಟ್‌ಗೆ ಸುಮಾರು 30 ಕೋಟಿ ರೂ ಖರ್ಚು ಮಾಡಿದ್ದಾರೆ.
ಸಬಾ ಆಜಾದ್ ಒಬ್ಬ ನಟಿ ಮತ್ತು 48 ವರ್ಷ ವಯಸ್ಸಿನ ಹೃತಿಕ್ ರೋಷನ್‌ಗಿಂತ ಸುಮಾರು 11 ವರ್ಷ ಚಿಕ್ಕವರು. ಕಳೆದ ಕೆಲವು ತಿಂಗಳುಗಳಿಂದ ಹೃತಿಕ್ ಮತ್ತು ಸಬಾ ಅವರ ನಿಕಟತೆ ನಿರಂತರ ಚರ್ಚೆಯ ವಿಷಯವಾಗಿದೆ.
ಕೆಲವು ಸಮಯದ ಹಿಂದೆ, ಕೆಲವು ವರದಿಗಳಲ್ಲಿ, ಹೃತಿಕ್ ಮತ್ತು ಸಬಾ ಅವರ ಸಂಬಂಧವು ತುಂಬಾ ಚೆನ್ನಾಗಿದೆ ಎಂದು ಹೇಳಲಾಗಿದೆ. ಹೃತಿಕ್ ಮತ್ತು ಅವರ ಮೊದಲ ಪತ್ನಿ ಸುಸ್ಸಾನೆ ಖಾನ್ ಮಕ್ಕಳೊಂದಿಗೆ ಸಬಾ ಬೆರೆಯುತ್ತಿದ್ದರಂತೆ. ಪ್ರಸ್ತುತ ಈ ಜೋಡಿ ಒಬ್ಬರಿಗೊಬ್ಬರು ಅರಿಯಲು ಯತ್ನಿಸುತ್ತಿದ್ದು, ಸದ್ಯಕ್ಕಂತೂ ಮದುವೆಯಾಗೋಲ್ಲ ಎನ್ನಲಾಗುತ್ತಿದೆ.
ನವೆಂಬರ್ ಆರಂಭದಲ್ಲಿ, ಹೃತಿಕ್ ಸಬಾ ಅವರ ಜನ್ಮದಿನದಂದು (ನವೆಂಬರ್ 1) ಸುಂದರವಾದ ಪೋಸ್ಟ್ ಅನ್ನು ಬರೆದಿದ್ದರು. ಸಬಾ ಅವರ ಫೋಟೋವನ್ನು ಹಂಚಿಕೊಂಡು, ಇದರೊಂದಿಗೆ ಅವರ ಅಸ್ತಿತ್ವಕ್ಕೆ ಧನ್ಯವಾದ ಅರ್ಪಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.