ಫೋಟೋ ಹಂಚಿಕೊಂಡ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್‌ಗೆ ಮಾಜಿ ಪತ್ನಿ ಸುಸೇನ್ ಖಾನ್ ಹೇಳಿದ್ದೇನು?
ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ಮಸ್ತ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಾಜಿ ಪತಿಯ ಗರ್ಲ್‌ಫ್ರೆಂಡ್ ಫೋಟೋಗೆ ಸುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಅವರಿಂದ ದೂರ ಆದ ಬಳಿಕ ಹೊಸ ಪ್ರೀತಿ ಹುಡುಕಿಕೊಂಡಿದ್ದಾರೆ. ಹೃತಿಕ್ ಗಾಯಕಿ, ನಟಿ ಸಬಾ ಅಜಾದ್ ಪ್ರೀತಿಯಲ್ಲಿದ್ದಾರೆ. ಇಬ್ಬರ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಪ್ರೇಮಿಗಳು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಅಂದಹಾಗೆ ಹೃತಿಕ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ಮಾಜಿ ಪತ್ನಿ ಸುಸೇನ್ ಖಾನ್ ಅವರಿಗೂ ಉತ್ತಮ ಸ್ನೇಹಿತೆ. ಇವರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಆಗಾಗ ಎಲ್ಲರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸಬಾ ಮಸ್ತ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಗೊಳಿಸಿರುವ ಸೀರೆಯಲ್ಲಿ ಸಬಾ ಮಿಂಚಿದ್ದಾರೆ. ಸೀರೆ ಧರಿಸಿ ಒಂದಿಷ್ಟು ಫೋಟೋಗಳನ್ನು ಸಬಾ ಹಂಚಿಕೊಂಡಿದ್ದಾರೆ. ಸಬಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಜಿ ಪತಿಯ ಗರ್ಲ್ ಫ್ರೆಂಡ್ ಫೋಟೋಗಳು ಸುಸೇನ್ ಖಾನ್ ಗಮನಸೆಳೆದಿದೆ. ಸುಸೇನ್ ಖಾನ್ ಕೂಡ ಕಾಮೆಂಟ್ ಮಾಡಿದ್ದಾರೆ.
ಸಬಾ ಫೋಟೋಗಳನ್ನು ಶೇರ್ ಮಾಡಿ ಶೈನಿಂಗ್ ಡಿಸ್ಕೋ ಡಿಸ್ಕೋ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದ್ಭುತವಾಗಿದೆ. ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ. ಸುಸೇನ್ ಖಾನ್ ಕಾಮೆಂಟ್‌ಗೆ ಸಬಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದಗಳು ಸೂಜ್ ಎಂದು ಹೇಳಿದ್ದಾರೆ.
ಹೃತಿಕ್ ರೋಷನ್ ಮಾತ್ರವಲ್ಲದೇ ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಪ್ರೀತಿ ಕಂಡುಕೊಂಡಿದ್ದಾರೆ. ಅರ್ಸ್ಲಾನ್ ಗೋನಿ ಜೊತೆ ಪ್ರೀತಿಯಲ್ಲಿದ್ದಾರೆ. ಹೃತಿಕ್ ಮತ್ತು ಸುಸೇನ್ ಇಬ್ಬರೂ ಬೇರೆ ಆದ ಬಳಿಕವೂ ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರೂ ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್ ಜೊತೆ ಉತ್ತಮ ಸಮಯ ಹೊಂದಿದ್ದಾರೆ.
ಹೃತಿಕ್ ಮತ್ತ ಸಬಾ ಇಬ್ಬರೂ ಇದೇ ವರ್ಷ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಈ ವರ್ಷ ನವೆಂಬರ್ ನಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಈ ಜೋಡಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ.