Happy Christmas: ಫ್ಯಾಮಿಲಿ ಜೊತೆ ಮಾಲ್ಡೀವ್ಸ್‌ನಲ್ಲಿ ಹೃತಿಕ್ ಹಾಲಿಡೇ !
ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ತಮ್ಮ ಫ್ಯಾಮಿಲಿ ಜೊತೆ ಕ್ರಿಸ್‌ಮಸ್ (Christmas) ಹಾಗೂ ಹೊಸ ವರ್ಷವನ್ನು ಆಚರಿಸಲು ವೇಕೆಷನ್‌ಗೆ ತೆರಳುತ್ತಿದ್ದಾರೆ. ಇದೇ ಸಮಯದಲ್ಲಿ ಬಾಲಿವುಡ್‌ನಟ ಹೃತಿಕ್ ರೋಷನ್ (Hrithik Roshan) ಸಹ ತಮ್ಮ ಫ್ಯಾಮಿಲಿ ಜೊತೆ ಹಾಲಿಡೆ ಎಂಜಾಯ್ ಮಾಡುತ್ತಿದ್ದಾರೆ. ಕ್ರಿಸ್‌ಮಸ್‌ಗೆ ಮುನ್ನ ಮಾಲ್ಡೀವ್ಸ್‌ನಲ್ಲಿ ತಾಯಿ ಪಿಂಕಿ ಮತ್ತು ಕಸಿನ್ಸ್ ಜೊತೆ ಹೃತಿಕ್ ಮಾಲ್ಡೀವ್ಸ್‌ಗೆ (Maldives) ತೆರಳಿದ್ದಾರೆ.
ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಕ್ರಿಸ್ ಮಸ್ ಹಾಗೂ ನ್ಯೂ ಇಯರ್ ಸೆಲೆಬ್ರೆಷನ್ ಮೂಡ್‌ನಲ್ಲಿದ್ದಾರೆ. ಇತ್ತಿಚೀಗೆ ಅವರ ಫ್ಯಾಮಿಲಿ ಜೊತೆಯ ಹಾಲಿಡೇ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹೃತಿಕ್ ರೋಷನ್ ಮತ್ತು ಅವರ ಕುಟುಂಬ, ಅವರ ತಾಯಿ ಪಿಂಕಿ ರೋಷನ್, ಮಕ್ಕಳಾದ ಹ್ರೇಹಾನ್ ಮತ್ತು ಹೃದಾನ್ ಹಾಗೂ ಕಸಿನ್ಸ್ ಪಶ್ಮಿನಾ, ಸುರಾನಿಕಾ ಮತ್ತು ಇಶಾನ್ ಅವರು ಇತ್ತೀಚೆಗೆ ಕ್ರಿಸ್‌ಮಸ್‌ಗೆ ಮುಂಚಿತವಾಗಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ.
ಕ್ರಿಸ್‌ಮಸ್‌ಗೆ ಮುನ್ನ ಹೃತಿಕ್ ರೋಷನ್ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ನಟನ ತನ್ನ ತಾಯಿ ಪಿಂಕಿ ಮತ್ತು ಕಸಿನ್ಸ್ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಹೃತಿಕ್ ಅವರ ತಾಯಿ ಪಿಂಕಿ ರೋಶನ್ ಅವರು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನಟನ ತಾಯಿ ಪಿಂಕಿ ಅವರು ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಆಕೌಂಟ್‌ನಲ್ಲಿ ತಮ್ಮ ಹಾಲಿಡೇ ಜೀವನದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಪಿಂಕಿ ರೋಷನ್ ಅವರು ಎರಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಒಂದು ಫೋಟೋದಲ್ಲಿ ಹುಣ್ಣಿಮೆಯ ರಾತ್ರಿಯಲ್ಲಿ, ಹೃತಿಕ್ ಟೀ-ಶರ್ಟ್ ಮತ್ತು ಡೆನಿಮ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಇನ್ನೊಂದು ಫೋಟೋದಲ್ಲಿ ಇಡೀ ಪ್ಯಾಮಿಲಿ ಜೊತೆಗೆ ಇದೆ. 'ಚಂದ್ರ, ಮಗ ಮತ್ತು ನನ್ನ ಎಲ್ಲಾ ನಕ್ಷತ್ರಗಳೊಂದಿಗೆ' ಎಂದು ಪಿಂಕಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಕೆಲಸದ ಮುಂಭಾಗದಲ್ಲಿ, ಹೃತಿಕ್ ರೋಷನ್ ವಿಕ್ರಮ್ ವೇದ ಅವರ ರಿಮೇಕ್‌ನ ಅಬುಧಾಬಿ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಹೃತಿಕ್ ದೀಪಿಕಾ ಪಡುಕೋಣೆ ಜೊತೆ ಫೈಟರ್ ಎಂಬ ಸಿನಿಮಾದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ, ಇಬ್ಬರೂ ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ, ಇದು 2023 ರಲ್ಲಿ ಬಿಡುಗಡೆಯಾಗಲಿದೆ.