ನಿಮ್ಮ ಮನೆ ಸೋರುತ್ತಿದೆ ಎಂದವನಿಗೆ ಹೃತಿಕ್ ರೋಷನ್ ಕೊಟ್ಟ ಉತ್ತರ ಇದು
- ಹೃತಿಕ್ ರೋಷನ್ ಮನೆಯ ಒಳಗೆ ನೀರು ಸೋರಿಕೆ
- ಬಾಲಿವುಡ್ ನಟನಿಗೆ ಚಂದದ್ದೊಂದು ಮನೆ ಇಲ್ವಾ ?
- ಫೋಟೋ ನೋಡಿದ ನೆಟ್ಟಿಗರು ಶಾಕ್
ಬಾಲಿವುಡ್ ಟಾಪ್ ನಟ ಹೃತಿಕ್ ರೋಷನ್ ಅವರ ಮನೆಯ ಗೋಡೆಯಲ್ಲಿ ಸೋರಿಕೆ ನೋಡಿರೋ ನೆಟ್ಟಿಗರು ಶಾಕ್ ಆಗಿದ್ದಾರೆ. ನಟ ಶೇರ್ ಮಾಡಿದ ಲೇಟೆಸ್ಟ್ ಫೋಟೋದಲ್ಲಿ ಅವರ ಮನೆಯ ಗೋಡೆಯಲ್ಲಿ ನೀರಿನ ಅಂಶ ಮೂಡಿಕೊಂಡು ಸೋರಿಕೆಯಾಗುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ನಟ ತನ್ನ ಹಾಗೂ ತಾಯಿ ಪಿಂಕಿ ರೋಷನ್ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು. ನನ್ನಮ್ಮನ ಜೊತೆ ಒಂದು ಲೇಝಿ ಬ್ರೇಕ್‌ಫಾಸ್ಟ್ ಡೇಟ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟ. ಈಗ ನಿಮ್ಮಮ್ಮನನ್ನು ಒಂದು ಸಲ ಅಪ್ಪಿಕೊಳ್ಳಿ ಎಂದು ನಟ ಬರೆದಿದ್ದಾರೆ.
ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು ಸರಿಯಾಗಿ ನೋಡಿ. ಹೃತಿಕ್ ರೋಷನ್ ಮನೆ ಸೋರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ವಾರ್ ನಟ ಅತ್ಯಂತ ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ: ಪ್ರಸ್ತುತ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೇನೆ. ಶೀಘ್ರದಲ್ಲೇ ನನ್ನ ಸ್ವಂತ ಮನೆಯನ್ನು ಖರೀದಿಸುತ್ತಿದ್ದೇನೆ ಎಂದಿದ್ದಾರೆ. ನಂತರದ ಕಮೆಂಟ್‌ನಲ್ಲಿ ಹೃತಿಕ್ ಕಾಮೆಡಿಯಾಗಿ ಸೋರಿಕೆ ಇಲ್ಲದಿದ್ದರೆ ಅದನ್ನು ಸರಿ ಮಾಡೋ ಖುಷಿ ಎಲ್ಲಿದೆ ತಮ್ಮಾ ಎಂದಿದ್ದಾರೆ.
ಸಿಂಪಲ್ ಸೀರೆಯುಟ್ಟ ವಿದ್ಯಾ ಬಾಲನ್: ಈ ಬಾರಿ ಪೋಸ್ ಚೇಂಜ್
ಅಷ್ಟೇ ಅಲ್ಲ. ಅನೇಕ ಬಳಕೆದಾರರು ಟ್ವಿಟರ್‌ನಲ್ಲಿ ಸೆಲೆಬ್ರಿಟಿ ಮನೆಯಲ್ಲಿ ತೇವದ ಸ್ಥಳವನ್ನು ಕಂಡುಕೊಂಡು ತಮ್ಮ ಮನೋರಂಜನೆಯನ್ನು ಹಂಚಿಕೊಂಡಿದ್ದಾರೆ. ಇಂತಹ ಸೋರಿಕೆಯಿಂದಲೇ ನಾನು ಮನೆಯಲ್ಲಿ ಸೆಲ್ಫೀ ತೆಗೆಯಲ್ಲ ಎಂದಿದ್ದಾರೆ. ಹೃತಿಕ್ ಮನೆಯಲ್ಲೂ ಸೋರಿಕೆ ಕಂಡು ಸಮಾಧಾನವಾಯ್ತು ಎಂದಿದ್ದಾರೆ ಇನ್ನೊಬ್ಬರು.
ಬ್ರೋಲರ್ ಸೋರಿಕೆ ಇರೋದನ್ನು ಅಡಗಿಸಿದಾಗ ಹೀಗಾಗುತ್ತೆ ಎಂದಿದ್ದಾರೆ. ಇನ್ನೊಬ್ಬರು ನಿಮ್ಮ ಗೋಡೆಯನ್ನು ನೋಡಿದ ನಂತರ ನನಗೆ ಸಮಾಧಾನವಾಯಿತು. ಧನ್ಯವಾದಗಳು ದೇವರೇ ನನ್ನ ಬಳಿಯೂ ಇದು ಇದೆ. ಈಗ ನಾನು ನಿಮ್ಮೊಂದಿಗೆ ಹೋಲಿಕೆ ಮಾಡಬಹುದು ಎಂದಿದ್ದಾರೆ. ಕೆಲಸದ ವಿಚಾರವಾಗಿ ಹೃತಿಕ್ ರೋಷನ್ ಅವರ ಮುಂದಿನ ಚಿತ್ರ ದೀಪಿಕಾ ಪಡುಕೋಣೆ ಜೊತೆ ಇದೆ. ಇದಕ್ಕೆ ಫೈಟರ್ ಎಂದು ಹೆಸರಿಡಲಾಗಿದೆ.