MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಹುಡುಗನೋ? ಹುಡುಗಿಯೋ? ಟ್ರೋಲ್‌ ಆಗಿದ್ದ Tiger Shroff ಈಗ ಆ್ಯಕ್ಷನ್ ಹೀರೋ!

ಹುಡುಗನೋ? ಹುಡುಗಿಯೋ? ಟ್ರೋಲ್‌ ಆಗಿದ್ದ Tiger Shroff ಈಗ ಆ್ಯಕ್ಷನ್ ಹೀರೋ!

ಜಾಕಿ ಶ್ರಾಫ್ (Jackie Shroff) ಪುತ್ರ ಟೈಗರ್ ಶ್ರಾಫ್  (Tiger Shroff)  32 ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 2, 1990 ರಂದು ಮುಂಬೈನಲ್ಲಿ ಜನಿಸಿದ  ಟೈಗರ್ ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಸೂಪರ್ ಹಿಟ್ ಆಗಿತ್ತು. ಆದರೆ ಅವರ ಆರಂಭಿಕ ದಿನಗಳಲ್ಲಿ ಸಾಕಷ್ಟು ಟ್ರೋಲ್‌ಗಳನ್ನು ಫೇಸ್‌ ಮಾಡಬೇಕಾಯಿತು. ಅವರ ಲುಕ್‌ ಬಗ್ಗೆ ಜನರು ಸಾಕಷ್ಟು ಕಾಮೆಂಟ್‌ಗಳನ್ನು ಸಹ ಮಾಡಿದ್ದರು. ಹಿಂದೊಮ್ಮೆ ಹುಡುಗಿಯ ಹಾಗೇ ಕಾಣುತ್ತಾರೆ ಎಂದು ಟ್ರೋಲ್‌ ಆಗಿದ್ದ ಟೈಗರ್‌ ಇಂದು ಬಾಲಿವುಡ್‌ನ ಆಕ್ಷನ್‌ ಹೀರೋ ಆಗಿ ತಮ್ಮನ್ನು ಸ್ಥಾಪಿಸಿಕೊಂಡಿದ್ದಾರೆ.

2 Min read
Suvarna News | Asianet News
Published : Mar 02 2022, 05:40 PM IST| Updated : Mar 02 2022, 05:56 PM IST
Share this Photo Gallery
  • FB
  • TW
  • Linkdin
  • Whatsapp
18

ಟೈಗರ್‌ ಶ್ರಾಫ್ ಆಕ್ಷನ್ ಮತ್ತು ನೃತ್ಯದಲ್ಲಿ ಮಾಸ್ಟರ್ (Dance Master) ಆಗಿದ್ದಾರೆ. ಬಾಲಿವುಡ್‌ನಲ್ಲಿ ತನ್ನ ಛಾಪು ಮೂಡಿಸಲು ಬಹಳ ಶ್ರಮಿಸುತ್ತಿದ್ದಾರೆ. ಟೈಗರ್ ತನ್ನ ಆರಂಭಿಕ ವರ್ಷಗಳಲ್ಲಿ ಸಾಕಷ್ಟು ಟ್ರೋಲ್‌ಗಳನ್ನು (Trolls) ಎದುರಿಸಿದರು ಮತ್ತು ಅನೇಕರು ಅವರ ಲುಕ್‌ ಅನ್ನು ಟೀಕಿಸಿದರು. ಏಕೆಂದರೆ ಅವರು ಆಕ್ಷನ್ ಹೀರೋ ಆಗಲು ಸಾಕಷ್ಟು ಮ್ಯಾಚೋ ಆಗಿಲ್ಲ ಎಂದು ಪರಿಗಣಿಸಲಾಗುತ್ತಿತ್ತು. 

28

1980ರ ದಶಕದಲ್ಲಿ ಆ್ಯಕ್ಷನ್ ಸ್ಟಾರ್ ಆಗಿದ್ದ ಅವರ ತಂದೆ ಜಾಕಿ ಶ್ರಾಫ್ (Jockie Shroff), ಟೈಗರ್ ಜನರು ನಿರೀಕ್ಷಿಸಿದ ರೀತಿಯಲ್ಲಿ ಕಾಣುತ್ತಿಲ್ಲ ಎಂದು ಸಂತೋಷಪಟ್ಟರು. 'ಟೈಗರ್‌ ನನ್ನ ಮಗ ಎಂಬ ಕಾರಣಕ್ಕಾಗಿ ಗಡ್ಡದೊಂದಿಗೆ ಜನಿಸಬೇಕೆಂದು ಜನರು ನಿರೀಕ್ಷಿಸಿದ್ದಾರೆಯೇ?' ಎಂದು ಅವರು E-Ttimesನೀಡಿದ ಇಂಟರ್‌ವ್ಯೂವ್‌ನಲ್ಲಿ  ಹೇಳಿದರು .


 

38

ಒಂದು ಹಂತದಲ್ಲಿ, ಟೈಗರ್‌ಗೆ ಅವರು ಹುಡುಗಿಯಂತೆ ಕಾಣಿಸುತ್ತಾನೆ ಎಂದು ಹೇಳಲಾಯಿತು. 'ನನ್ನ ಮೊದಲ ಚಿತ್ರ ಬಿಡುಗಡೆಯಾದ ಸಮಯದಿಂದ ಜನರು 'ಯೇ ಲಡ್ಕಾ ಹೈ ಯಾ ಲಡ್ಕಿ'  (ಇದು ಹುಡುಗನೋ ಅಥವಾ ಹುಡುಗಿಯೋ?) ಎಂದು ಕೇಳುತ್ತಿದ್ದರು' ಎಂದು ಅರ್ಬಾಜ್ ಖಾನ್ ಅವರ ಯೂಟ್ಯೂಬ್ ಶೋ (YouTube Show) ಪಿಂಚ್‌ನಲ್ಲಿ ಟೈಗರ್ ಹೇಳಿದರು. 

48

'ಜನರು ನನ್ನ ಮುಖದ ಮೇಲೆ ಕಾಮೆಂಟ್ ಮಾಡಿದ್ದಾರೆ ಮತ್ತು ನಾನು ಹುಡುಗಿಯಂತೆ ಕಾಣುತ್ತೇನೆ' ಎಂದು ಹೇಳಿದರು. ಆದರೆ ಇಂದು ಅವರ ಆ್ಯಕ್ಷನ್ ಮತ್ತು ಡ್ಯಾನ್ಸ್‌ಗಾಗಿ ಲಕ್ಷಾಂತರ ಜನರ ಪ್ರೀತಿಗೆ ಒಳಗಾಗಿದ್ದಾರೆ ಮತ್ತು ಟೈಗರ್ ತನ್ನನ್ನು ಬಾಲಿವುಡ್‌ನ ಆಕ್ಷನ್ ಹೀರೋ ಎಂದು ಸ್ಥಾಪಿಸಿಕೊಂಡಿದ್ದಾರೆ.

58

'ನಾನು ಬಾಲಿವುಡ್‌ನಲ್ಲಿ ನನ್ನದೇ ಆದ ಜಾಗವನ್ನು ಮಾಡಲು ನಿರ್ಧರಿಸಿದ್ದೇನೆ, ನಾನು ನನಗಾಗಿ ಪ್ರತ್ಯೇಕ ಮಾರ್ಗವನ್ನು ಆರಿಸಿಕೊಂಡಿದ್ದೇನೆ. ಅಡಚಣೆಗಳಿವೆ ಆದರೆ ನಾನು ಅದನ್ನು ಎದುರಿಸುತ್ತೇನೆ' ಎಂದು  ಅರ್ಬಾಜ್ ಜೊತೆಗಿನ  ಚಾಟ್‌ನಲ್ಲಿ ಟೈಗರ್‌ ಹೇಳಿದ್ದರು. 

68

ಟೈಗರ್‌ನ ಇನ್‌ಸ್ಟಾಗ್ರಾಮ್ (Instagram) ಫೀಡ್ ವೀಡಿಯೊಗಳಿಂದ ತುಂಬಿದೆ. ಅದರಲ್ಲಿ ಅವರು ಶ್ರದ್ಧೆಯಿಂದ ತರಬೇತಿ ಪಡೆಯುವುದನ್ನು ನೋಡಬಹುದು. ಟ್ವಿಂಕಲ್ ಖನ್ನಾ (Twinkle Khanna) ಅವರೊಂದಿಗಿನ ಇತ್ತೀಚಿನ ಚಾಟ್‌ನಲ್ಲಿ, ಜಾಕಿ ಅವರ ಮಗ ಟೈಗರ್‌ ಬೀಚ್‌ನಲ್ಲಿ ತರಬೇತಿ (Training) ಪಡೆಯುವ ಸಲಿವಾಗಿ  ಮುಂಜಾನೆಯ ಸಮಯದಲ್ಲಿ ಎದ್ದೇಳುತ್ತಾರೆ ಎಂದು ಬಹಿರಂಗಪಡಿಸಿದರು. 

78

ಟೈಗರ್‌ನ ಇನ್ನೊಂದು ಆಸ್ತಿ (Asset) ಎಂದರೆ ಅವರ ನೃತ್ಯ ಪ್ರತಿಭೆ (Dancin Talent). ತನ್ನ ವೃತ್ತಿಜೀವನದ (Career) ಆರಂಭದಲ್ಲಿ, ವಾಸ್ತವವಾಗಿ ತನ್ನ ಮೊದಲ ಚಿತ್ರದೊಂದಿಗೆ, ಟೈಗರ್ ತನ್ನನ್ನು ತಾನು ನಿಪುಣ ನೃತ್ಯಗಾರನಾಗಿ ಸ್ಥಾಪಿಸಿಕೊಂಡರು ಮತ್ತು ಅಂದಿನಿಂದ ತಮ್ಮ ಡ್ಯಾನ್ಸ್‌ನಿಂದ ಬೆರಗುಗೊಳಿಸುತ್ತಿದ್ದಾರೆ.

88

ಟೈಗರ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಹೊಂದಿದ್ದಾರೆ ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಅವರ ಆಕೌಂಟ್‌ನಲ್ಲಿ  ಸಾಲು ಸಾಲು ಚಿತ್ರಗಳಿವೆ,  ಗಣಪತ್, ಬಡೇ ಮಾಯನ್ ಛೋಟೆ ಮಿಯಾನ್, ಹೀರೋಪಂತಿ 2 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

About the Author

SN
Suvarna News
ಬಾಲಿವುಡ್
ನೃತ್ಯ
ಹುಟ್ಟುಹಬ್ಬ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved