ದಿಯಾ ಮಿರ್ಜಾ-ವೈಭವ್ ರೇಖಿ ಮದುವೆಗೂ ಶಾರುಖ್ ಖಾನ್‌ಗೂ ಇದೆ ನಂಟು!
ಬಾಲಿವುಡ್ ನಟಿ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ದಿಯಾ ಮಿರ್ಜಾ ಮರು ಮದುವೆಯಾಗಿದ್ದಾರೆ. ದಿಯಾ ಫೆಬ್ರವರಿ 15 ರಂದು ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾಗಲಿದ್ದಾರೆ. ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿರುವ ರೇಖಿ ಮುಂಬೈ ಮೂಲದ ಉದ್ಯಮಿ. ದಿಯಾರ ಮದುವೆ ಮುಂಚಿನ ಫನ್ ಪಾರ್ಟಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಇದರ ನಡುವೆ ಶಾರುಖ್‌ಖಾನ್‌ಗೂ ಮತ್ತು ದಿಯಾ ಮಿರ್ಜಾ-ವೈಭವ್ ರೇಖಿ ಅವರ ವಿವಾಹಕ್ಕೆ ಏನು ಕನೆಕ್ಷನ್ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.
ದಿಯಾ ಮಿರ್ಜಾ ಅವರ ಪ್ರೀ ವೆಡ್ಡಿಂಗ್ ಫೋಟೋಗಳನ್ನು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಪೋಸ್ಟ್ ಮಾಡಿದ್ದಾರೆ.
ದಿಯಾ ಮಿರ್ಜಾ-ವೈಭವ್ ರೇಖಿಯ ಪ್ರೀ ವೆಡ್ಡಿಂಗ್ ಫನ್ ಪಾರ್ಟಿಯ ಫೋಟೋವನ್ನು ಪೂಜಾ ದಾದ್ಲಾನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
'ನಮ್ಮ ಕ್ರೇಜಿ ಫ್ಯಾಮಿಲಿಗೆ ದಿಯಾ ಮಿರ್ಜಾಗೆ ಸುಸ್ವಾಗತ. ನಾವೆಲ್ಲರೂ ನಿನ್ನನ್ನು ಪ್ರೀತಿಸುತ್ತೇವೆ,' ಎಂದು ಫೋಟೋ ಜೊತೆ ಬರೆದಿದ್ದಾರೆ ಪೂಜಾ ದಾದ್ಲಾನಿ .
ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ವೈಭವ್ ರೇಖಿಗೆ ಸಂಬಂಧಿ.
ನಟಿ ದಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೆಹಂದಿ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡಿದ್ದಾರೆ.
ದಿಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಫೋಟೋಗೆ 'ಪ್ಯಾರ್' (ಪ್ರೀತಿ) ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.
ಫಿಲ್ಮಂ ಮೇಕರ್ ಸಾಹಿಲ್ ಸಿಂಘರನ್ನು ಮದುವೆಯಾಗಿದ್ದ ದಿಯಾ 2019ರಲ್ಲಿ ಬೇರೆಯಾದರು.
ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ತಪ್ಪಡ್ ಚಿತ್ರದಲ್ಲಿ ದಿಯಾ ಪಾತ್ರದ ಮೂಲಕವೇ ಮದುವೆಯ ಬಾಂಧವ್ಯಯವನ್ನು ವಿವರಿಸಲಾಗಿದೆ.
ಫೈನ್ಯಾಶಿಯಲ್ ಇನ್ವೆಸ್ಟರ್ ಆಗಿರುವ ವೈಭವ್ ರೇಖಿ ಪಿರಮಲ್ ಫಂಡ್ ಮ್ಯಾನೇಜ್ಮೆಂಟ್‌ನ ಸ್ಥಾಪಕ.
ಈ ಮೊದಲು ವೈಭವ್ ಯೋಗ ಥೇರಪಿಸ್ಟ್ ಸುನೈನಾ ಅವರನ್ನು ಮುವೆಯಾಗಿ ಒಂದು ಮಗಳನ್ನು ಹೊಂದಿದ್ದಾರೆ.