MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಗಳು ಬಂದಿದ್ದಾಳೆ, ಆದ್ರೂ ಆಲಿಯಾ ರಣಬೀರ್ ಹೋಳಿ ಆಡೋಲ್ವಂತೆ? ಯಾಕೋ?

ಮಗಳು ಬಂದಿದ್ದಾಳೆ, ಆದ್ರೂ ಆಲಿಯಾ ರಣಬೀರ್ ಹೋಳಿ ಆಡೋಲ್ವಂತೆ? ಯಾಕೋ?

ಪ್ರಪಂಚದಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಬಣ್ಣಗಳ ಹಬ್ಬವೆಂದರೆ ಪ್ರತಿಯೊಬ್ಬ ಸಾಮಾನ್ಯ ಮತ್ತು ಸೆಲೆಬ್ರೆಟಿಗಳು ತಮ್ಮದೇ ಆದ ಶೈಲಿಯಲ್ಲಿ ಆಚರಿಸುತ್ತಾರೆ. ಆದರೆ ಈ ಹಬ್ಬದಿಂದ ಕೆಲವು ಬಾಲಿವುಡ್ ತಾರೆಯರು ಅಂತರ ಕಾಯ್ದುಕೊಂಡಿದ್ದಾರೆ.    

2 Min read
Author : Suvarna News
Published : Mar 08 2023, 05:13 PM IST
Share this Photo Gallery
  • FB
  • TW
  • Linkdin
  • Whatsapp
17
Kareena Kpaoor

Kareena Kpaoor

ಬೆಬೋ ಎಂದೇ ಖ್ಯಾತರಾಗಿರುವ ಕರೀನಾ ಕಪೂರ್ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಅವರ ಪ್ರಕಾರ ಅವರೊಬ್ಬರೇ ಅಲ್ಲ, ಅವರ ಕುಟುಂಬದಲ್ಲಿ ಯಾರೂ ಹೋಳಿ ಆಚರಿಸುವುದಿಲ್ಲ. ಇದಕ್ಕೆ ಕಾರಣವನ್ನು ವಿವರಿಸಿದ ಕರೀನಾ,'ನಾವು ಎಂದಿಗೂ ಹೋಳಿ ಆಚರಿಸುವುದಿಲ್ಲ. ನಮ್ಮ ಅಜ್ಜ ತೀರಿಕೊಂಡಾಗಿನಿಂದ ನಮ್ಮ ಜೀವನದಲ್ಲಿ ಬಣ್ಣಗಳು ಮಾಯವಾಗಿವೆ. ಅಂದಿನಿಂದ ನಾವು ಯಾರೂ ಹೋಳಿ ಆಚರಿಸುವುದಿಲ್ಲ' ಎಂದು ಕರೀನಾ ಹೇಳಿದ್ದರು. ಕರೀನಾ ಕಪೂರ್ ಅವರ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಅವರ ಅಜ್ಜ ರಾಜ್‌ಕಪೂರ್‌ ತೀರಿಕೊಂಡ ನಂತರ ಕಪೂರ್‌ ಫ್ಯಾಮಿಲಿಯಲ್ಲಿ ಹೋಳಿ ಆಚರಿಸುವುದಿಲ್ಲ.  ಆದರೆ ಈ ವರ್ಷ ಕರೀನಾ ಕಪೂರ್‌ ತಮ್ಮ ಮಕ್ಕಳ ಜೊತೆ ಹೋಳಿ ಆಚರಿಸಿ ಪೋಟೋ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Alia Bhatt

Alia Bhatt

ಆಲಿಯಾ ಭಟ್ ಹೋಳಿ ಆಚರಿಸುವುದಿಲ್ಲ. ಅವರ ಪ್ರಕಾರ, ಆಕೆಯ ಚರ್ಮವು ತುಂಬಾ ಸೂಕ್ಷ್ಮ. ರಾಸಾಯನಿಕ ಬಣ್ಣಗಳು ಅದನ್ನು ಮತ್ತಷ್ಟು ಹಾನಿಗೊಳಿಸಬಹುದು. ಸಂದರ್ಶನವೊಂದರಲ್ಲಿ, 'ನಾನು ಬಾಲ್ಯದಲ್ಲಿ ಹೋಳಿ ಆಡುತ್ತಿದ್ದೆ, ಆದರೆ ಈಗ ನನಗೆ ಸ್ವಲ್ಪ ಭಯ. ಬಣ್ಣಗಳು ಚರ್ಮಕ್ಕೆ ಅಲರ್ಜಿ ಉಂಟುಮಾಡುತ್ತವೆ, ಆದ್ದರಿಂದ ನಾನು ಹೋಳಿ ಆಚರಿಸುವುದಿಲ್ಲ' ಎಂದು ಹೇಳಿದ್ದರು.

37
Image: Google

Image: Google

ಹೋಳಿಯ  ಅತ್ಯಂತ ಜನಪ್ರಿಯವಾದ 'ಬಲಂ ಪಿಚ್ಕರಿ' ಹಾಡನ್ನು ನೀಡಿದ ರಣಬೀರ್ ಕಪೂರ್ ಹೋಳಿ ಆಚರಣೆಯಿಂದ ದೂರ ಉಳಿದಿದ್ದಾರೆ. ಅವರು ನೀರನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಈ ಕಾರಣದಿಂದಲೇ ಅವರು ಈ ಬಣ್ಣದ ಹಬ್ಬವನ್ನು ಆಚರಿಸುವುದಿಲ್ಲವಂತೆ.


 

47

ರಣವೀರ್ ಸಿಂಗ್ ಹೋಳಿ ಆಚರಿಸಲು ಇಷ್ಟಪಡುವುದಿಲ್ಲ. ಇದಕ್ಕೆ ಕಾರಣ ಸ್ವಚ್ಛತೆ . 'ನಾನು ಹೋಳಿ ಆಚರಿಸುವುದಿಲ್ಲ. ನಾನು ಸ್ವಚ್ಛತೆಯ  ಒಸಿಡಿ ಹೊಂದಿದ್ದೇನೆ. ಇದೇ ಕಾರಣಕ್ಕೆ ನಾನು ಹೋಳಿ ಆಚರಿಸುವುದಿಲ್ಲ' ಎಂದಿದ್ದಾರೆ.
 

57
John Abraham

John Abraham

ಜಾನ್ ಅಬ್ರಹಾಂ ಹೋಳಿ ಆಚರಣೆಯಿಂದ ದೂರವಂತೆ. 'ನಾನು ಹೋಳಿ ಆಚರಿಸುವುದಿಲ್ಲ, ಜನರು ಹೋಳಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ತುಂಬಾ ವಿಕೃತರಾಗಿದ್ದಾರೆ, ಆದ್ದರಿಂದ ನಾನು ಅದನ್ನು ಆಚರಿಸುವ ವಿಧಾನವನ್ನು ನಿಜವಾಗಿಯೂ ಗೌರವಿಸುವುದಿಲ್ಲ'  ಎಂದು ಹೇಳಿದರು. 'ನೀವು ಮರಗಳನ್ನು ಕಡಿಯುತ್ತೀರಿ, ನೀವು ಪ್ರಕೃತಿ ನಾಶ ಮಾಡುತ್ತಿದ್ದೀರಿ, ನೀವು ಧರ್ಮದ ಹೆಸರಿನಲ್ಲಿ ಎಲ್ಲವನ್ನೂ ನಾಶಪಡಿಸುತ್ತಿದ್ದೀರಿ. ಆದ್ದರಿಂದ ನಾನು ಹೋಳಿ ಆಡುವುದನ್ನು ಆನಂದಿಸುವುದಿಲ್ಲ' ಎಂದು  ಜಾನ್ ಮತ್ತಷ್ಟು ಹೇಳಿದರು.
 

67
তাপসী -পান্নু

তাপসী -পান্নু

ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್ ಗೆ ಬಂದ ತಾಪ್ಸಿ ಪನ್ನು ಮನೆಯಲ್ಲಿ ಹೋಳಿ ಹಬ್ಬದ ಸಂಭ್ರಮವಿಲ್ಲ.'ಮನೆಯಲ್ಲಿ ಹೋಳಿ ಆಚರಣೆ ಅಷ್ಟೇನೂ ಇಲ್ಲ. ನನ್ನ ತಂದೆ-ತಾಯಿ ಬಣ್ಣಗಳನ್ನು ಆಚರಿಸುವುದಿಲ್ಲ. ಹಾಗಾಗಿ ಯೂನಿಟ್ ಇರುವ ಹೋಟೆಲ್‌ನಲ್ಲಿ ಉಳಿದುಕೊಂಡು ಹೋಳಿ ಆಚರಿಸುತ್ತೇನೆ' ಎಂದು ಸಂಭಾಷಣೆಯಲ್ಲಿ ಹೇಳಿದ್ದರು.

77

ಕರಣ್ ಜೋಹರ್ ಹೋಳಿ ಆಚರಿಸಲು ಇಷ್ಟಪಡುವುದಿಲ್ಲ. ಇದರ ಹಿಂದೆ ಅವರ ಬಾಲ್ಯದ ಕಹಿ ಘಟನೆ ಇದೆ .'ನಾನು 10 ವರ್ಷದವನಿದ್ದಾಗ, ಯಾರೋ ನನ್ನ ಮೇಲೆ ಕೊಳೆತ ಮೊಟ್ಟೆಯನ್ನು ಎಸೆದರು. ಇದು ನನ್ನ ಕೊನೆಯ ಹ್ಯಾಪಿ ಹೋಳಿ. ಹಾಗಾಗಿ ನಾನು ನಿಮಗೆ ವರ್ಣರಂಜಿತ ಮತ್ತು ಮೊಟ್ಟೆಯಿಲ್ಲದ ಹೋಳಿಯನ್ನು ಬಯಸುತ್ತೇನೆ' ಎಂದು  ಅವರು ಸಂಭಾಷಣೆಯಲ್ಲಿ ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಆಲಿಯಾ ಭಟ್
ರಣಬೀರ್ ಕಪೂರ್
ರಣವೀರ್ ಸಿಂಗ್
ಕರಣ್ ಜೋಹರ್
ಬಾಲಿವುಡ್
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
Latest Videos
Recommended Stories
Recommended image1
ಬಾಯ್‌ಫ್ರೆಂಡ್ ಕೊಟ್ಟ ನೋವು ಅಷ್ಟಿಷ್ಟಲ್ಲ: ಬ್ರೇಕಪ್ ಕಥೆ ಬಿಚ್ಚಿಟ್ಟ ‘ಸೂರ್ಯಕಾಂತಿ’ ನಟಿ ರೆಜಿನಾ
Recommended image2
ಹೊಸ ಅವತಾರದಲ್ಲಿ ‘ಜಿಂಕೆಮರಿ ನಾ...’ ಖ್ಯಾತಿಯ ಚೆಲುವೆ: ನೀಲಿ ಸೀರೆಯಲ್ಲಿ ಮಿಂಚಿದ ನಂದಿತಾ ಫೋಟೋಸ್ ಇಲ್ಲಿವೆ!
Recommended image3
Suriya: 'ಸೀನ್' ಟ್ರೇಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಸೂರ್ಯ ಅಬ್ಬರ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved