ಬಾಕ್ಸ್ ಆಫೀಸ್‌ನ ರಾಣಿ ಆಲಿಯಾ ಭಟ್‌ಗೆ ಈ ನಟರು ತುಂಬಾ ಲಕ್ಕಿ
ಮಾರ್ಚ್ 15 ರಂದು ಆಲಿಯಾ ಭಟ್ (Alia Bhatt) 30 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1993 ರಲ್ಲಿ ಮುಂಬೈನಲ್ಲಿ ಜನಿಸಿದ ಆಲಿಯಾ ತನ್ನ 11 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ,ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು ಮತ್ತು ಅದಕ್ಕಾಗಿಯೇ ಅವರನ್ನು ಬಾಕ್ಸ್ ಆಫೀಸ್ ರಾಣಿ ಎಂದು ಕರೆಯಲಾಗುತ್ತದೆ.
ಆಲಿಯಾ ಭಟ್ 1990 ರ ಸಂಘರ್ಷ್ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 2012ರಲ್ಲಿ ಬಂದ ಸ್ಟೂಡೆಂಟ್ ಆಫ್ ದಿ ಇಯರ್ ಆಕೆಯ ಮೊದಲ ಚಿತ್ರ. ಅವರ ಚೊಚ್ಚಲ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎಂದು ಸಾಬೀತಾಗಿ 110 ಕೋಟಿ ಗಳಿಸಿತ್ತು.
ವರುಣ್ ಧವನ್, ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಆಲಿಯಾಗೆ ಅದೃಷ್ಟ ಸಾಬೀತುಪಡಿಸಿದ್ದಾರೆ ಅವರ ಜೊತೆ ಬಂದ ಸಿನಿಮಾಗಳು ಹಿಟ್ ಆಗಿದ್ದವು
2014 ರಲ್ಲಿ, ಆಲಿಯಾ ಭಟ್ 3 ಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಮೂರೂ ಬಾಕ್ಸ್ ಆಫೀಸ್ ಹಿಟ್ ಆಗಿದ್ದವು. ಅವರು ಹೈವೇ, 2 ಸ್ಟೇಟ್ಸ್ ಮತ್ತು ಹಂಪ್ಟಿ ಶರ್ಮಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡರು.
Alia Bhatt
ಹೈವೇ 47 ಕೋಟಿ, 2 ಸ್ಟೇಟ್ಸ್ 175 ಕೋಟಿ ಮತ್ತು ಹಮ್ಟಿ ಶರ್ಮಾ ಕಿ ದುಲ್ಹನಿಯಾ 119.58 ಕೋಟಿ ಕಲೆಕ್ಷನ್ ಮಾಡಿದೆ. ಅದೇ ಸಮಯದಲ್ಲಿ, ಅವರ 2015 ರ ಚಲನಚಿತ್ರವು ಅದ್ಭುತವಾದ ಫ್ಲಾಪ್ ಎಂದು ಸಾಬೀತಾಯಿತು.
ಆಲಿಯಾ ಭಟ್ ಅವರ ಕಪೂರ್ ಅಂಡ್ ಸನ್ಸ್, ಉಡ್ತಾ ಪಂಜಾಬ್ ಮತ್ತು ಡಿಯರ್ ಜಿಂದಗಿ ಚಿತ್ರಗಳು 2016 ರಲ್ಲಿ ಬಿಡುಗಡೆಯಾದವು. ಈ ಮೂರೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಕಪೂರ್ ಅಂಡ್ ಸನ್ಸ್ 148 ಕೋಟಿ, ಉಡ್ತಾ ಪಂಜಾಬ್ 100 ಕೋಟಿ ಮತ್ತು ಡಿಯರ್ ಜಿಂದಗಿ 136 ಕೋಟಿ ವ್ಯವಹಾರ ಮಾಡಿದೆ.
ಆಲಿಯಾ ಭಟ್ ಅವರ 2017 ರ ಚಿತ್ರ ಬದ್ರಿನಾಥ್ ಕಿ ದುಲ್ಹನಿಯಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು. ಚಿತ್ರ 200.45 ಕೋಟಿ ವ್ಯವಹಾರ ಮಾಡಿದೆ. ಅದೇ, 2018 ರ ಚಿತ್ರ ರಾಝಿ ಕೂಡ ಹಿಟ್ ಆಯಿತು ಮತ್ತು ಚಿತ್ರ 197 ಕೋಟಿ ಗಳಿಸಿತ್ತು.
2019 ರಲ್ಲಿ ಆಲಿಯಾ ಭಟ್ ಗಲ್ಲಿ ಬಾಯ್ ಮತ್ತು ಕಲಾಂಕ್ ಎಂಬ 2 ಚಿತ್ರಗಳಲ್ಲಿ ಕಾಣಿಸಿಕೊಂಡರು. ಗಲ್ಲಿ ಬಾಯ್ ಬಾಕ್ಸ್ ಆಫೀಸಿನಲ್ಲಿ 238 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಆದರೆ, ಕಲಾಂಕ್ ಫ್ಲಾಪ್ ಎಂದು ಸಾಬೀತಾಗಿ ಕೇವಲ 146.31 ಕೋಟಿ ರೂ. ವ್ಯವಹಾರ ಮಾಡಿದೆ. 2020 ರಲ್ಲಿ, ಅವರ ಚಿತ್ರ ಸಡಕ್ 2 OTT ನಲ್ಲಿ ಬಿಡುಗಡೆಯಾಯಿತು, ಅದು ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ
2022 ರಲ್ಲಿ, ಆಲಿಯಾ ಭಟ್ ಒಂದರ ನಂತರ ಒಂದರಂತೆ ಮೂರು ಹಿಟ್ ನಿನಿಮಾ ಮಾಡಿದರು. ಅವರ ಚಿತ್ರಗಳಾದ ಗಂಗೂಬಾಯಿ ಕಥಿಯಾವಾಡಿ (209.77 ಕೋಟಿ), ಆರ್‌ಆರ್‌ಆರ್ (ರೂ. 1200 ಕೋಟಿ) ಮತ್ತು ಬ್ರಹ್ಮಾಸ್ತ್ರ (ರೂ. 431 ಕೋಟಿ) ಬಿಡುಗಡೆಯಾದವು. ಈ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹವಾ ಸೃಷ್ಟಿಸಿವೆ. ಈ ವರ್ಷ ಅವರ ಚಿತ್ರ ಡಾರ್ಲಿಂಗ್ಸ್ ಕೂಡ OTT ನಲ್ಲಿ ಬಿಡುಗಡೆಯಾಯಿತು.
2023 ರಲ್ಲಿ, ಅವರ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಅವರ ಹಾಲಿವುಡ್ ಚೊಚ್ಚಲ ಚಿತ್ರ ಹಾರ್ಟ್ ಆಫ್ ಸ್ಟೋನ್ ಕೂಡ ಈ ವರ್ಷ ಬಿಡುಗಡೆಯಾಗಲಿದೆ.