ನಾಲ್ಕು ತಿಂಗಳ ಮಗುವಿಗೆ 30 ಶೂಸ್​ಗಳು: ಮಗಳ ಗುಟ್ಟೊಂದು ಹೇಳಿದ ನಟ ರಣಬೀರ್​ ಕಪೂರ್

ನಾಲ್ಕು ತಿಂಗಳ ಮಗುವಿನ ಅಪ್ಪನಾಗಿರುವ ನಟ ರಣಬೀರ್​ ಕಪೂರ್​ ಮಗಳ ಕುರಿತು ಕೆಲವೊಂದು ಕುತೂಹಲದ ಮಾಹಿತಿ ಶೇರ್​ ಮಾಡಿದ್ದಾರೆ. ಅವರು ಹೇಳಿದ್ದೇನು?

30 shoes for a four month old baby Actor Ranbir Kapoor revealed a secret about his daughter

ಬಾಲಿವುಡ್​ನ ಕ್ಯೂಟ್​ ದಂಪತಿಯಲ್ಲಿ ಒಬ್ಬರು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt). ಈಗ ಅಪ್ಪ-ಅಮ್ಮ ಆಗಿದ್ದಾರೆ. 2022ರಲ್ಲಿ ಏಪ್ರಿಲ್​ 14ರಂದು ನಟ ರಣಬೀರ್​ ಕಪೂರ್​ (Ranbeer Kapoor) ಅವರ ಜೊತೆ ಮದುವೆಯಾಗಿರುವ ಆಲಿಯಾ, ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್​ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್​ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು.  ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಸದ್ಯ ಚಿತ್ರರಂಗದಿಂದ ದೂರವಿರೋ ಆಲಿಯಾ ಭಟ್​ ತಮ್ಮ ಮಗಳು ರಾಹಾ ಕಪೂರ್​ ಆರೈಕೆಯಲ್ಲಿ ತೊಡಗಿದ್ದಾರೆ. ಆಗಾಗ್ಗೆ ಈ ದಂಪತಿ ತಮ್ಮ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪ್​ಡೇಟ್ಸ್​  ನೀಡುತ್ತಲೇ ಇರುತ್ತಾರೆ. ಇದುವರೆಗೆ ಈ ಬಾಲಿವುಡ್​ ದಂಪತಿ ತಮ್ಮ ಮಗುವಿನ ಮುಖವನ್ನು ಮಾತ್ರ ರೀವೀಲ್​ ಮಾಡಲಿಲ್ಲ. 

ಕೆಲ ದಿನಗಳ ಹಿಂದಷ್ಟೇ ಪತ್ನಿ ಆಲಿಯಾ  ಮತ್ತು ಮಗಳು ರಾಹಾ ಬಗ್ಗೆ ಮಾಹಿತಿ ನೀಡಿದ್ದ ರಣಬೀರ್​ ಕಪೂರ್​,  ಆಲಿಯಾ ನಟಿಯಾಗಿ, ತಾಯಿಯಾಗಿ  ಅದ್ಭುತ ಪಾತ್ರ ನಿರ್ವಹಿಸುತ್ತಿದ್ದಾಳೆ ಎಂದಿದ್ದರು. 'ಆಲಿಯಾ ಎಲ್ಲ  ಪಾತ್ರಗಳನ್ನೂ   ಅದ್ಭುತವಾಗಿ ನಿರ್ವಹಿಸುತ್ತಿದ್ದಾಳೆ. ಆಕೆ  ಉತ್ತಮ ತಾಯಿಯಂತೆ ತೋರುತ್ತಿದ್ದಾಳೆ.  ತಾಯಿಯಾಗಿ,  ನಟಿಯಾಗಿ ಆಕೆ  ಅದ್ಭುತವಾಗಿದ್ದಾಳೆ, ಆದರೆ ಆಕೆ ಪತ್ನಿಗಿಂತಲೂ ತಾಯಿಯಾಗಿಯೇ ಉತ್ತಮ ಆಗಿದ್ದಾಳೆ' ಎಂದು ರಣಬೀರ್​ ಕಪೂರ್​ ಹೇಳಿದ್ದರು.  ಅಂದರೆ ಮಗುವಾದ ಮೇಲೆ ಪತ್ನಿಗಿಂತಲೂ ಹೆಚ್ಚಾಗಿ ತಾಯಿಯಾಗಿಯೇ  ಇದ್ದಾರೆ ಎನ್ನುವ ಮಾತಿಗೆ ನೆಟ್ಟಿಗರು ರಣಬೀರ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಮದುವೆಯಾದ ಮೇಲೆ ನಿಮ್ಮ ವರಸೆ ಬದಲಾಗಿ ಹೋಯ್ತಾ ಎಂದು ಕೆಲವರು ಕೇಳುತ್ತಿದ್ದರೆ, ಮಗು ಮಾಡಿಕೊಳ್ಳಲು ಅಷ್ಟು ಅರ್ಜೆಂಟ್​ ಏನಿತ್ತು ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಆಲಿಯಾ ಅಭಿಮಾನಿಗಳಿಗೆ ರಣಬೀರ್​ ಕಪೂರ್​ ಮಾತು ಸ್ವಲ್ಪ ಕಿರಿಕಿರಿ ಎನ್ನಿಸುತ್ತಿದೆ. 

Alia Bhatt ಉತ್ತಮ ಪತ್ನಿ ಹೌದೋ, ಅಲ್ವೊ? ಶಾಕಿಂಗ್​ ಹೇಳಿಕೆ ಕೊಟ್ಟ ಪತಿ ರಣಬೀರ್

ಈಗ ರಣಬೀರ್​ ಕಪೂರ್​ ಮಗಳು ರಾಹಾ (Raha Kapoor) ಕುರಿತು ಅಪ್​ಡೇಟ್​ ನೀಡಿದ್ದಾರೆ. ಸ್ಟಾರ್ ಕಿಡ್​ಗಳು ಅಂದ್ರೆ ಅವರಿಗೆ ಏನೂ ಕೊರತೆ ಇರುವುದಿಲ್ಲ ಎನ್ನುವುದು ನಿಜವೇ.  ಲಕ್ಷುರಿ ಲೈಫ್​ ಅವರದ್ದು. ಎಷ್ಟೇ ಲಕ್ಷುರಿ ಲೈಫ್​ ಜೀವನ ಶೈಲಿ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸ್ವತಃ ಸ್ಟಾರ್ ಕಿಡ್ಸ್. ಅವರ ಮಗಳ ಬಗ್ಗೆ ಇನ್ನು ವಿಶೇವಾಗಿ ಹೇಳಬೇಕೆ?ಸ್ಟಾರ್ ಕಿಡ್​ಗಳು ಅಂದ್ರೆ ಹೇಳಬೇಕೆ? ಲಕ್ಷುರಿ ಜೀವನ ಶೈಲಿ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸ್ವತಃ ಸ್ಟಾರ್ ಕಿಡ್ಸ್. ಅವರ ಮಗಳ ಬಗ್ಗೆ ಇನ್ನು ವಿಶೇವಾಗಿ ಹೇಳಬೇಕೆ? ಹಲವಾರು ಸಂದರ್ಭಗಳಲ್ಲಿ ಅವರು ಮಗಳ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಮಗು ಹಾಲು ಕುಡಿದ ನಂತರ ತೇಗುವುದು ತುಂಬಾ ಇಂಪಾರ್ಟೆಂಟ್. ಈಗ ನಾನು ಮಗುವನ್ನು ತೇಗಿಸುವಲ್ಲಿ ಎಕ್ಸ್​ಪರ್ಟ್ ಆಗಿದ್ದೇನೆ ಎಂದಿದ್ದಾರೆ ರಣಬೀರ್​ ಕಪೂರ್.

ಅದೇ ಇನ್ನೂ ನಾಲ್ಕು ತಿಂಗಳು ತುಂಬದ ತಮ್ಮ ಮಗಳ ಬಳಿ 30 ಶೂಸ್​ಗಳಿವೆ (sneekers) ಎಂದಿದ್ದಾರೆ.  ನನ್ನ ಮಗಳನ್ನು ಸ್ನೀಕರ್ ​ಹೆಡ್ ಮಾಡುತ್ತೇನೆ. ಸದ್ಯ ಈ ಶೂಸ್ ರಾಹಾ ಕಾಲಿಗೆ ಆಗುವುದಿಲ್ಲ. ಆಕೆ ಅದನ್ನು ಧರಿಸುವುದನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ರಾಹಾ ನೋಡಬೇಕಾದ ಸಿನಿಮಾ ಯಾವುದು ಎಂದು ರಣಬೀರ್​ ಅವರನ್ನು ಕೇಳೀದರೆ ಅದಕ್ಕೆ ಅವರು  ಜಗ್ಗ ಜಾಸೂಸ್ ಎಂದಿದ್ದಾರೆ. ಇದು ಕಿಡ್ಸ್ ಫ್ರೆಂಡ್ಲೀ ಸಿನಿಮಾ ಆಗಿದ್ದು ರಾಹಾ ಪ್ರಾಣಿಗಳನ್ನು ನೋಡಿ ಇಷ್ಟಪಡಬಹುದು ಎಂದಿದ್ದಾರೆ. ಮಗಳು ನೋಡೋಕೆ ಸದ್ಯ  ಆಲಿಯಾ ಥರ ಇದ್ದಾಳೆ. ಮಗಳು ದೊಡ್ಡವಳಾದ ಮೇಲೂ ನೋಟದಲ್ಲಿ ಅವಳ ಥರನೇ ಆಗಲಿ ಎಂದಿರುವ ರಣಬೀರ್​,  ಸ್ವಭಾವ ಮಾತ್ರ ನನ್ನದಾಗಲಿ ಎಂದಿದ್ದಾರೆ!  

ಡೆಲಿವರಿ ಆದ್ಮೇಲೆ ಹೆಚ್ಚಾಗಿತ್ತು ಮೊಡವೆ ಕಾಟ: ಗುಟ್ಟು ಬಿಚ್ಚಿಟ್ಟ ನಟಿ Alia Bhatt

ರಣಬೀರ್ ಕಪೂರ್ ತೂ ಜೂಟಿ ಮೇ ಮಕ್ಕರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಗಿದೆ. ಆಲಿಯಾ ಭಟ್ ತಾಯಿಯಾದ ನಂತರ ಮೊದಲ ಬಾರಿಗೆ ಶೂಟಿಂಗ್​ಗಾಗಿ  ಕಾಶ್ಮೀರದಲ್ಲಿದ್ದಾರೆ.

Latest Videos
Follow Us:
Download App:
  • android
  • ios