400 ಕೋಟಿ ಗಳಿಸಿದರೂ ಅತಿ ಹೆಚ್ಚು ಗಳಿಕೆ ಮಾಡಿದ ಪಟ್ಟಿಯಲ್ಲಿ ಬ್ರಹ್ಮಾಸ್ತ್ರ ಇಲ್ಲ !
ಕರಣ್ ಜೋಹರ್(Karan Johar) ಅವರ ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಚಿತ್ರವು ವಿಶ್ವಾದ್ಯಂತ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರೊಂದಿಗೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor And Alia Bhatt) ಅಭಿನಯದ ಈ ಚಿತ್ರವು ತನ್ನ ಬಜೆಟ್ ಸುಮಾರು 410 ಕೋಟಿ ರೂ ಅನ್ನು ಗಳಿಸಿದೆ. ಇಷ್ಟು ದೊಡ್ಡ ಮೊತ್ತವನ್ನು ಗಳಿಸಿದ್ದರೂ, ಈ ಚಿತ್ರವು ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 15 ಚಿತ್ರಗಳಲ್ಲಿ ಸೇರ್ಪಡೆಗೊಂಡಿಲ್ಲ. ವಿಶೇಷವೆಂದರೆ 6 ಚಿತ್ರಗಳ ಅರ್ಧದಷ್ಟು ಕಲೆಕ್ಷನ್ ಕೂಡ ಮಾಡಲು ಸಾಧ್ಯವಾಗಿಲ್ಲ.
ನಿತೀಶ್ ತಿವಾರಿ ನಿರ್ದೇಶನದ ದಂಗಲ್ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ. ಆಮೀರ್ ಖಾನ್ ಅಭಿನಯದ ಈ ಚಿತ್ರ ವಿಶ್ವಾದ್ಯಂತ ಸುಮಾರು 1968 ಕೋಟಿ ಗಳಿಸಿತು.
ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ಬಾಹುಬಲಿ 2: ದಿ ಕನ್‌ಕ್ಲೂಷನ್' ವಿಶ್ವಾದ್ಯಂತ 1800 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರವು ವಿಶ್ವದಾದ್ಯಂತ ಭಾರತದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ.
ರಾಕ್‌ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಮೂರನೇ ಸ್ಥಾನದಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ 1200 ಕೋಟಿ ರೂ.ಗೂ ಹೆಚ್ಚು ಗಳಿಸಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಈ ಚಿತ್ರವು ವಿಶ್ವಾದ್ಯಂತ 1100 ಕೋಟಿಗೂ ಹೆಚ್ಚು ಗಳಿಸಿತು.
ಸಲ್ಮಾನ್ ಖಾನ್ ಅಭಿನಯದ 'ಬಜರಂಗಿ ಭಾಯಿಜಾನ್' ಐದನೇ ಸ್ಥಾನದಲ್ಲಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ವಿಶ್ವಾದ್ಯಂತ ಸುಮಾರು 918 ಕೋಟಿ ರೂ ಕಲೆಕಷ್ನ್ ಮಾಡಿದೆ
ಆಮೀರ್ ಖಾನ್ ಮತ್ತು ಝೈರಾ ವಾಸಿಂ ಅಭಿನಯದ 'ಸೀಕ್ರೆಟ್ ಸೂಪರ್ ಸ್ಟಾರ್' ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ, ವಿಶ್ವದಾದ್ಯಂತ ಸುಮಾರು 875 ಕೋಟಿ ರೂ ಗಳಿಸಿದ ಚಿತ್ರದ ನಿರ್ದೇಶಕರು ಅದ್ವೈತ್ ಚಂದನ್.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ವಿಶ್ವಾದ್ಯಂತ ಸುಮಾರು 769 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರದ ನಾಯಕ ನಟ ಆಮೀರ್ ಖಾನ್.
ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ 'ಸುಲ್ತಾನ್' ಈ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರವು ವಿಶ್ವಾದ್ಯಂತ ಸುಮಾರು 614 ಕೋಟಿ ರೂ. ಸಂಪಾದಿಸಿದೆ.
ರಣಬೀರ್ ಕಪೂರ್ ಅಭಿನಯದ 'ಸಂಜು' ವಿಶ್ವಾದ್ಯಂತ ಸುಮಾರು 587 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮತ್ತು ರಣವೀರ್ ಸಿಂಗ್ ಅಭಿನಯದ 'ಪದ್ಮಾವತ್' ವಿಶ್ವದಾದ್ಯಂತ ಸುಮಾರು 572 ಕೋಟಿ ರೂ ಗಳಿಸಿದೆ. ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ಚಿತ್ರ ವಿಶ್ವದಾದ್ಯಂತ ಸುಮಾರು 564 ಕೋಟಿ ಗಳಿಸಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಚಿತ್ರ ನಿರ್ಮಾಣವಾಗಿದೆ.
ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ಧೂಮ್ 3' ವಿಶ್ವಾದ್ಯಂತ 557 ಕೋಟಿ ರೂ.ಗೂ ಹೆಚ್ಚು ಗಳಿಸಿತ್ತು. ಚಿತ್ರದಲ್ಲಿ ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವದಾದ್ಯಂತ ಸುಮಾರು 475 ಕೋಟಿ ರೂ ಗಳಿಸಿದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್.
ಶ್ರೀರಾಮ್ ರಾಘವನ್ ನಿರ್ದೇಶನದ 'ಅಂಧಧುನ್' ಚಿತ್ರ ವಿಶ್ವಾದ್ಯಂತ ಸುಮಾರು 457 ಕೋಟಿ ರೂ. ಗಳಿಸಿದೆ. ಆಯುಷ್ಮಾನ್ ಖುರಾನಾ, ಟಬು ಮತ್ತು ರಾಧಿಕಾ ಆಪ್ಟೆ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿರುವ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್‌ಪ್ರೆಸ್' ವಿಶ್ವದಾದ್ಯಂತ ಸುಮಾರು 425 ಕೋಟಿ ರೂ ಗಳಿಸಿದೆ. ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ.