ಕೆಲವು ದೇಶಗಳಿಗಿಲ್ಲ ಈ ನಟರಿಗೆ ಎಂಟ್ರಿ! ರೀಸನ್ಸ್ ಏನು, ಯಾಕೆ ಹೀಗೆ?
ಸೆಲೆಬ್ರೆಟಿಗಳು ಪ್ರಪಂಚದ ವಿವಿಧ ಭಾಗಗಳಿಗೆ ಭೇಟಿ ನೀಡುವುದು ಮತ್ತು ಅಲ್ಲಿ ಶೋಗಳನ್ನು ನೀಡುವುದು ಸಾಮಾನ್ಯ. ಆದರೆ ಕೆಲವು ದೇಶಗಳಿಗೆ ಕೆಲವು ಸೆಲೆಬ್ರೆಟಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಸಹ ಇದ್ದಾರೆ.

ಸನ್ನಿ ಡಿಯೋಲ್:
ಗದರ್ ಚಿತ್ರದಲ್ಲಿ ಸನ್ನಿ ಡಿಯೋಲ್ ಅವರ ಕಠೋರ ಸಂಭಾಷಣೆಗಳಿಂದಾಗಿ ಪಾಕಿಸ್ತಾನದಲ್ಲಿ ಅವರನ್ನು ನಿಷೇಧಿಸಲಾಗಿದೆ.
ಲೇಡಿ ಗಾಗಾ:
ಲೇಡಿ ಗಾಗಾ ಅವರ ಶೋಗಳು ಇಂಡೋನೇಷಿಯನ್ ಸಂಸ್ಕೃತಿಗೆ ತುಂಬಾ ಅಸಭ್ಯವೆಂದು ಆ ದೇಶದ ಅಧಿಕಾರಿಗಳು ಪರಿಗಣಿಸಿದ್ದರಿಂದ ಲೇಡಿ ಗಾಗಾ ಇಂಡೋನೇಷ್ಯಾದಲ್ಲಿ ಪ್ರದರ್ಶನ ನೀಡುವುದನ್ನು ನಿಷೇಧಿಸಲಾಗಿದೆ.
ಜಸ್ಟಿನ್ ಬೈಬರ್:
ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೈಬರ್ ಅವರ ಕೆಟ್ಟ ನಡವಳಿಕೆಯ ಕಾರಣದಿಂದ ಚೀನಾದಲ್ಲಿ ಇವರನ್ನು ನಿಷೇಧಿಸಲಾಗಿದೆ.
ಸೆಲೆನಾ ಗೊಮೆಜ್:
ಸೆಲೆನಾ ಗೊಮೆಜ್ ಅವರಿಗೆ ಮಲೇಷ್ಯಾಕ್ಕಿಲ್ಲ ಎಂಟ್ರಿ ಪರ್ಮಿಷನ್. ಏಕೆಂದರೆ ಅವರು LGBT+ ಸಮುದಾಯವನ್ನು ಬೆಂಬಲಿಸುತ್ತಾರೆ. ಚೀನಾದಲ್ಲಿ ಅವರು ದಲೈ ಲಾಮಾ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದೂ ಸುದ್ದಿಯಾಗಿತ್ತು.
ಬೆಯೋನ್ಸ್:
ಬೆಯಾನ್ಸ್ ಅನ್ನು ಮಲೇಷ್ಯಾದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅವರ ಪ್ರದರ್ಶನಗಳು ಪಾಶ್ಚಿಮಾತ್ಯ ಮಾದಕ ಸಂಸ್ಕೃತಿಯ ಪ್ರಚಾರವೆಂದು ಪರಿಗಣಿಸಲಾಗಿದೆ.
.
ಬ್ರಾಡ್ ಪಿಟ್:
ಬ್ರಾಡ್ ಪಿಟ್ ಅವರು ತಮ್ಮ ಚಲನಚಿತ್ರ '7 ಇಯರ್ಸ್ ಇನ್ ಟಿಬೆಟ್' ನಲ್ಲಿ ಚೀನಾ ರಾಷ್ಟ್ರವನ್ನು ಚಿತ್ರಿಸಿದ ರೀತಿಯಿಂದ ಚೀನಾದಲ್ಲಿ ಇವರನ್ನು ನಿಷೇಧಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.