- Home
- Entertainment
- Cine World
- ಹನುಮಾನ್ ಹೀರೋ ತೇಜ ಸಜ್ಜಾ ಮದುವೆ ಫಿಕ್ಸ್! ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ, ಕೈಹಿಡಿಯಲಿರುವ ಆ ಸುಂದರಿ ಯಾರು ಗೊತ್ತಾ?
ಹನುಮಾನ್ ಹೀರೋ ತೇಜ ಸಜ್ಜಾ ಮದುವೆ ಫಿಕ್ಸ್! ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ, ಕೈಹಿಡಿಯಲಿರುವ ಆ ಸುಂದರಿ ಯಾರು ಗೊತ್ತಾ?
TejaSajja Engagement ಟಾಲಿವುಡ್ ಯುವನಟ, ಹನುಮಾನ್ ಚಿತ್ರದ ಮೂಲಕ ಸಕತ್ ಸದ್ದು ಮಾಡಿದ್ದ ನಟ ತೇಜ ಸಜ್ಜಾ ನಿಶ್ಚಿತಾರ್ಥ(TejaSajja Engagement) ಸಮಾರಂಭ ಸೋಮವಾರ ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಡೆದಿದೆ. ಫೋಟೋಗಳು ಇಲ್ಲಿವೆ

ತೇಜ್ ಸಜ್ಜಾ ನಿಶ್ಚಿತಾರ್ಥ
ಟಾಲಿವುಡ್ ಯುವನಟ, ಹನುಮಾನ್ ಚಿತ್ರದ ಮೂಲಕ ಸಕತ್ ಸದ್ದು ಮಾಡಿದ್ದ ನಟ ತೇಜ ಸಜ್ಜಾ ನಿಶ್ಚಿತಾರ್ಥ(TejaSajja Engagement) ಸಮಾರಂಭ ಸೋಮವಾರ ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಡೆದಿದೆ. ಕಳೆದ ಹಲವು ತಿಂಗಳಿಂದ ಈ ಬಗ್ಗೆ ಹರಡಿದ್ದ ವದಂತಿ ಗಾಸಿಪ್ ಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ತೇಜ್ ಸಜ್ಜಾ ಎಂಗೇಜ್‌ಮೆಂಟ್ ಸಮಾರಂಭದಲ್ಲಿ ಕುಟುಂಬಸ್ಥರು, ಸ್ನೇಹಿತರು, ಆಪ್ತ ಸಂಬಂಧಿಕರು ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ನಟರು, ನಟಿಯರು ಭಾಗಿದ್ದರು. ವಿಶೇಷವೆಂದರೆ ತೇಜ್ ಸಜ್ಜಾ ನಿಶ್ಚಿತಾರ್ಥ ಸಮಾರಂಭಕ್ಕೆ ತೆಲಂಗಾಣ ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ವಿಶೇಷ ಅತಿಥಿಯಾಗಿ ಭಾಗವಹಿಸಿ ದಂಪತಿಗೆ ಆಶೀರ್ವದಿಸಿದರು.
ತೇಜ ಸಜ್ಜಾ ನಿಶ್ಚಿತಾರ್ಥ ಸಮಾರಂಭದಲ್ಲಿ ಗಣ್ಯರ ದಂಡು
ರಾಜ್ಯಪಾಲ ಶಿವಪ್ರತಾಪ್ ಶುಕ್ಲಾರ ಜೊತೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಕೂಡ ಆಗಮಿಸಿದ್ದರು. ವಧು-ವರರಿಗೆ ಶುಭ ಹಾರೈಸಿದರು. ಮೆಗಾಸ್ಟಾರ್ ಚಿರಂಜೀವಿ, ರವಿತೇಜ್, ರಾಣಾ ದಗ್ಗುಬಾಟಿ, ಶಿವಾಜಿ, ನಾನಿ, ಶ್ರೀಕಾಂತ್, ವರಲಕ್ಷ್ಮಿ ಶರತ್ ಕುಮಾರ್, ನಿರ್ಮಾಪಕ ಅಲ್ಲು ಅರವಿಂದ್, ಕೋನಾ ವೆಂಕಟ್, ನಿರ್ದೇಶಕರಾದ ರಾಘವೇಂದ್ರ ರಾವ್, ಬಿಆರ್‌ಎಸ್ ಪಕ್ಷದ ಹರೀಶ್ ರಾವ್ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿ ದಂಪತಿಗೆ ಆಶೀರ್ವದಿಸಿದರು.
ಸೋಷಿಯಾ ಮೀಡಿಯಾದಲ್ಲಿ #TejaSajjaEngagement ಹ್ಯಾಷ್ ಟ್ಯಾಗ್‌ನಲ್ಲಿ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ. ನಿಶ್ಚಿತಾರ್ಥದ ಸುದ್ದಿ ತಿಳಿದು ಅಭಿಮಾನಿಗಳು ಕಾಂಗ್ರಾಟ್ಸ್ ಹೇಳಿದ್ದಾರೆ. ಕೆಲವು ನಟ ನಟಿಯರು ವಿಡಿಯೋ ಶೇರ್ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ.
ತೇಜ ಸಜ್ಜಾ ಮದುವೆಯಾಗಲಿರುವ ಸುಂದರಿ ಯಾರು?
ಇನ್ನು ನಟ ತೇಜ ಸಜ್ಜಾ ಮದುವೆಯಾಗಲಿರುವ ಹುಡುಗಿಯ ಬಗ್ಗೆಯೂ ಅಭಿಮಾನಿಗಳಿಗೆ ಭಾರೀ ಕುತೂಹಲ ಕೆರಳಿಸಿದೆ. ತೇಜ ಸಜ್ಜಾರನ್ನ ಮದುವೆಯಾಗಲಿರುವ ಸುಂದರಿ ಯಾರಪ್ಪ ಅಂತಾ ಇಂಟರ್‌ನೆಟ್‌ನಲ್ಲಿ ಜಾಲಾಡಲು ಶುರು ಮಾಡಿದ್ದಾರೆ. ತೇಜ ಸಜ್ಜಾ ಮದುವೆಯಾಗಲಿರುವ ಹುಡುಗಿ ಹಿರಿಯರು ನಿಶ್ಚಯಿಸಿದ್ದಾರೆ. ಹಿರಿಯರು ತೋರಿಸಿದ ಕನ್ಯೆಯನ್ನೇ ಮದುವೆಯಾಗುತ್ತಿದ್ದಾರೆ. \
ಇನ್ನು ತೇಜ ಸಜ್ಜಾರನ್ನು ಮದುವೆಯಾಗಲಿರುವ ಹುಡುಗಿ ಸಿನಿಮಾ ಕ್ಷೇತ್ರದ ಹಿನ್ನೆಲೆಯವರಲ್ಲ. ಅಮೆರಿಕದಿಂದ ಬಂದಿರುವ ಸಾಫ್ಟವೇರ್ ಇಂಜಿನಿರ್ ಹುಡುಗಿ. ಹುಟ್ಟಿ ಬೆಳೆದಿದ್ದೆಲ್ಲ ಅಮೆರಿಕದಲ್ಲೇ. ಹುಡುಗಿಯ ಕುಟುಂಬಸ್ಥರು ಸಿರಿವಂತರು, ದೊಡ್ಡ ಬ್ಯುಸಿನೆಸ್ ಹೊಂದಿರುವ ಕುಟುಂಬವಾಗಿದೆ. ಆದರೆ ಅವರ ಹೆಸರನ್ನು ತೇಜ ಸಜ್ಜಾ ಕುಟುಂಬಸ್ಥರು ಬಹಿರಂಗಪಡಿಸಿಲ್ಲ.
ತೇಜ ಸಜ್ಜಾ ಮದುವೆ ಯಾವಾಗ? ಎಲ್ಲಿ?
ಇನ್ನು ತೇಜ ಸಜ್ಜಾ ಅವರ ಮದುವೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯಲಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಅಲ್ಲದೆ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಾತ್ರ ನಡೆಯಲಿದೆ. ಮದುವೆ ಬಳಿಕ ಹೈದರಾಬಾದ್‌ನಲ್ಲಿ ಆರತಕ್ಷತೆ ಸಮಾರಂಭ ಇರಲಿದೆ.
ಎಂಗೇಜ್‌ಮೆಂಟ್ ಫೋಟೋ, ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
The Hon’ble Governor of Telangana, Shri Shiv Pratap Shukla, graced the ring ceremony of popular film actor Shri Teja Sajja, held at Taj Krishna, Banjara Hills, Hyderabad.
💍 On the joyous occasion, the Hon’ble Governor extended his heartfelt congratulations and warmest wishes to the couple, wishing them a beautiful journey ahead filled with love, happiness, harmony and togetherness. ✨
@tejasajja123
— Governor of Telangana (@tg_governor) November 16, 2026
ತೇಜ ಸಜ್ಜಾ ಹಿನ್ನೆಲೆ ಬಾಲ್ಯ ನಟನಾಗಿ ಮಿಂಚಿದ್ದ ನಟ
ತೇಜ ಸಜ್ಜಾ ಬಾಲ ಕಲಾವಿದನಾಗಿ ಸೂಪರ್ ಕ್ರೇಜ್ ಸೃಷ್ಟಿಸಿದ್ದ ನಟ. 'ಝಾಂಬಿ ರೆಡ್ಡಿ' ಚಿತ್ರದ ಮೂಲಕ ನಾಯಕನಾಗಿ ಟಾಲಿವುಡ್‌ಗೆ ಪ್ರವೇಶಿಸಿದರು. ಅನಂತರ 'ಹನುಮಾನ್' ಚಿತ್ರದ ಮೂಲಕ ಅವರು ಫ್ಯಾನ್ ಇಂಡಿಯಾ ನಟನಾಗಿ ಮಿಂಚಿದರು. ಹನುಮಾನ್ ಸಿನಿಮಾ ತೆರೆಗೆ ಬಂದಾಗ ಒಂದು ವಾರದವರೆಗೆ ಥಿಯೇಟರ್‌ಗೆ ಜನರೇ ಬಂದಿರಲಿಲ್ಲ. ಬಳಿಕ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದಂತೆ ದೇಶದ್ಯಾಂತ ಭರ್ಜರಿ ಪ್ರದರ್ಶನ ಕಂಡಿತು. ಅದಾದ ಬಳಿಕ ಮಿರೈ ಜೊತೆ ಹ್ಯಾಟ್ರಿಕ್ ಯಶಸ್ಸು ಸಾಧಿಸಿದರು.
ಅಲ್ಲಿಂದ ತಿರುಗಿ ನೋಡಿದ್ದೇ ಇಲ್ಲ. ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿದ್ದರೆ ಮತ್ತೊಂದೆಡೆ OTT ಪ್ಲಾಟ್‌ಫಾರಂ ಕೂಡ ಪ್ರವೇಶಿಸಿದರು. ಹೌದು ಒಟಿಟಿಯಲ್ಲಿನ ಜನಪ್ರಿಯ ರಿಯಾಲಿಟಿ ಶೋ 'ದಿ ಟ್ರೇಟರ್ಸ್' ಅನ್ನು ಆಯೋಜಿಸುತ್ತಿದ್ದಾರೆ. ಪ್ರಸ್ತುತ ಅವರು ಮಿರೈ 2 ಹನುಮಾನ್ ಸೀಕ್ವೆಲ್, ಝಾಂಬಿ ರೆಡ್ದಿ 2 ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದು ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.









