- Home
- Entertainment
- Cine World
- Nee Nange allava: ಪ್ರೀತಿಯ ಓಟದಲ್ಲಿ ಸಾಮಾಜಿಕ ತಿರುವು: 'ನೀ ನಂಗೆ ಅಲ್ಲವಾ' ಸಿನಿಮಾ ಹೇಗಿದೆ?
Nee Nange allava: ಪ್ರೀತಿಯ ಓಟದಲ್ಲಿ ಸಾಮಾಜಿಕ ತಿರುವು: 'ನೀ ನಂಗೆ ಅಲ್ಲವಾ' ಸಿನಿಮಾ ಹೇಗಿದೆ?
ನೀ ನಂಗೆ ಅಲ್ಲವಾ..: ಹೀಗೊಂದು ಪ್ರಶ್ನೆ ಮುಂದಿಟ್ಟು ಪ್ರೀತಿ- ಪ್ರೇಮ, ಹೆಣ್ಣಿನ ಸ್ವಾತಂತ್ರ್ಯ, ಮಾನಸಿಕ ತೊಳಲಾಟ ಹೀಗೆ ಹಲವು ತಿರುವುಗಳಲ್ಲಿ ಪ್ರೇಕ್ಷಕರನ್ನು ಸುತ್ತಾಡಿಸಿಕೊಂಡು ಬರುತ್ತದೆ ಸಿನಿಮಾ ಏಕೆ ನೋಡಬೇಕು. ಪ್ರೇಮಕತೆ ಜೊತೆಗೂ ಅದು ನೀಡುವ ಸಾಮಾಜಿಕ ಸಂದೇಶವೇನು? ತಿಳಿಯಲು ಮುಂದೆ ಓದಿ.ಕೇಶವ

ನೀ ನಂಗೆ ಅಲ್ಲವಾ: ಪ್ರೀತಿಯ ಓಟದಲ್ಲಿ ಸಾಮಾಜಿಕ ತಿರುವು
ಹೀಗೊಂದು ಪ್ರಶ್ನೆ ಮುಂದಿಟ್ಟು ಪ್ರೀತಿ- ಪ್ರೇಮ, ಹೆಣ್ಣಿನ ಸ್ವಾತಂತ್ರ್ಯ, ಮಾನಸಿಕ ತೊಳಲಾಟ ಹೀಗೆ ಹಲವು ತಿರುವುಗಳಲ್ಲಿ ಪ್ರೇಕ್ಷಕರನ್ನು ಸುತ್ತಾಡಿಸಿಕೊಂಡು ಬರುತ್ತದೆ ‘ನೀ ನಂಗೆ ಅಲ್ಲವಾ’ ಚಿತ್ರ. ನಿರ್ದೇಶಕ ಮನೋಜ್ ಪಿ.ನಡಲಮನೆ ಅವರು ಒನ್ ಸೈಡೆಡ್ ಪ್ರೇಮ ಕತೆಯನ್ನು ಗಂಭೀರ ಸಾಮಾಜಿಕ ಸಂದೇಶ ಹೇಳುವುದಕ್ಕೆ ಬಳಸಿರುವ ರೀತಿ ಚೆನ್ನಾಗಿದೆ. ಚಿತ್ರದ ಮೊದಲ ಭಾಗ ಪ್ರೀತಿ- ಆಟ- ಹುಡುಗಾಟಕ್ಕೆ ಸೀಮಿತ ಅನಿಸಿದರೂ ದ್ವಿತೀಯಾರ್ಧದಲ್ಲಿ ಬರುವ ಸನ್ನಿವೇಶಗಳು, ತಿರುವುಗಳು ಚಿತ್ರಕ್ಕೆ ಘನತೆ ತಂದುಕೊಡುತ್ತವೆ.
ನೀ ನಂಗೆ ಅಲ್ಲವಾ: ಪ್ರೇಮಕತೆಯಾ? ಸಾಮಾಜಿಕ ಸಂದೇಶ ಸಾರುವ ಚಿತ್ರವಾ?
ಚಿತ್ರದ ಹೆಸರಿನಂತೆ ಇದು ಸಂಪೂರ್ಣವಾಗಿ ಪ್ರೇಮ ಕತೆಯೇ ಎನ್ನುವ ಪ್ರಶ್ನೆ ಮೂಡಿದರೆ, ಸಿನಿಮಾ ನೋಡಿದರೆ ಉತ್ತರ ಸಿಗುತ್ತದೆ. ನಾಯಕನ ಪ್ರೀತಿಯನ್ನು ನಾಯಕಿ ಒಪ್ಪಲ್ಲ. ಆದರೂ ನಾಯಕನಿಗೆ ತನ್ನ ಪ್ರೀತಿಯಲ್ಲಿ ಸೋಲು ಅನುಭವಿಸುವುದನ್ನು ತಡೆಯಲಾಗದು. ಒಳ್ಳೆಯ ಮನಸ್ಸಿನ ಪ್ರೀತಿಯನ್ನು ನಾಯಕಿ ಯಾಕೆ ತಿರಸ್ಕರಿಸುತ್ತಿದ್ದಾಳೆ ಎಂಬುದಕ್ಕೆ ಆಕೆಯ ಜೀವನದಲ್ಲಿ ನಡೆದ ಒಂದು ಕಹಿ ಘಟನೆ. ಆ ಕಹಿಗೆ ನಾಯಕ ಹೇಗೆ ಎದುರಾಗುತ್ತಾನೆ ಎಂಬುದು ಚಿತ್ರದ ಅಡಿಪಾಯ.
ಇದನ್ನೂ ಓದಿ: ಟೈಟಲ್ ಚೇಂಜ್, ಕ್ಲೈಮ್ಯಾಕ್ಸ್ ಚೇಂಜ್..! ಸಲ್ಮಾನ್ ನಟನೆಯ 'ಮಾತೃಭೂಮಿ' ಸಿನಿಮಾ ಬಿಡುಗಡೆಗೆ ಕೊನೆಗೂ ಡೇಟ್ ಫಿಕ್ಸ್!
'ನೀ ನಂಗೇ ಅಲ್ಲವಾ.. ಈ ಸಿನಿಮಾ ಯಾಕೆ ನೋಡಬೇಕು?
ಪ್ರೇಮ ಕತೆಯಲ್ಲೂ ಸಾಮಾಜಿಕ ಸಂದೇಶ ಹೇಳಬೇಕು, ಅದರಲ್ಲೂ ಇವತ್ತು ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು ಎನ್ನುವ ಚಿತ್ರದ ಉದ್ದೇಶದ ಕಾರಣಕ್ಕೆ ‘ನೀ ನಂಗೆ ಅಲ್ಲವಾ’ ಚಿತ್ರವನ್ನು ನೋಡಬೇಕು.
ನೀ ನಂಗೆ ಅಲ್ಲವಾ
ಸಾಹಸ ದೃಶ್ಯಗಳಲ್ಲಿ ಚಿತ್ರದ ನಾಯಕ ರಾಹುಲ್ ಆರ್ಕಾಟ್ ಹೆಚ್ಚಿನ ಸ್ಕೋರ್ ಮಾಡಿದರೆ, ಪ್ರೇಮ ಕತೆಯ ತಿರುವಿನಲ್ಲಿ ನಾಯಕಿ ಕಾಶಿಮಾ ನೋಡುಗರಿಗೆ ಹತ್ತಿರವಾಗುತ್ತಾಳೆ. ಉಳಿದಂತೆ ಮಂಜುನಾಥ್ ಹೆಗ್ಡೆ ಪಾತ್ರ ಕತೆಗೆ ಪೂರಕವಾಗಿದೆ.
ನೀ ನಂಗೆ ಅಲ್ಲವಾ ರೇಟಿಂಗ್
ಉದಯ್ ಲೀಲಾ ಛಾಯಾಗ್ರಾಹಣವೇ ಚಿತ್ರಕ್ಕೆ ಮಾಸ್ ಲುಕ್ಕ್ ಕೊಟ್ಟಿದೆ. ಹಿನ್ನೆಲೆ ಸಂಗೀತದಲ್ಲಿ ಸಂಗೀತ ನಿರ್ದೇಶಕ ಸೂರಜ್ ಸೋಯಿಸ್ ಅವರ ಶ್ರಮ ಕಾಣುತ್ತದೆ.
ನೀ ನಂಗೆ ಅಲ್ಲವಾ
ತಾರಾಗಣ: ರಾಹುಲ್ ಆರ್ಕಾಟ್, ಕಾಶಿಮಾ, ಆರತಿ ಪಡುಬಿದ್ರೆ, ಮಂಜುನಾಥ ಹೆಗ್ಡೆ, ಭಾವನಾ ಚಂದ್ರ, ರೋಹಿತ್
ನಿರ್ದೇಶನ: ಮನೋಜ್ ಪಿ. ನಡಲಮನೆ
ರೇಟಿಂಗ್: 3
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













