- Home
- Entertainment
- Cine World
- Hair Stylist Aalim Hakim: ವಿರಾಟ್, ರಣಬೀರ್ ನಂತಹ ಹೇರ್ ಸ್ಟೈಲ್ ಗಾಗಿ ಆಲಿಮ್ ಹಕೀಮ್ ಎಷ್ಟು ಚಾರ್ಜ್ ಮಾಡ್ತಾರೆ?
Hair Stylist Aalim Hakim: ವಿರಾಟ್, ರಣಬೀರ್ ನಂತಹ ಹೇರ್ ಸ್ಟೈಲ್ ಗಾಗಿ ಆಲಿಮ್ ಹಕೀಮ್ ಎಷ್ಟು ಚಾರ್ಜ್ ಮಾಡ್ತಾರೆ?
ನೀವು ಕೂಡ ರಣಬೀರ್ ಕಪೂರ್ ಮತ್ತು ವಿರಾಟ್ ಕೊಹ್ಲಿ ಅವರಂತೆ ಹೇರ್ ಕಟ್ ಮಾಡಿಸಿಕೊಂಡು ಸ್ಟೈಲಿಶ್ ಆಗಿ ಕಾಣಲು ಬಯಸುತ್ತೀರಾ, ಹಾಗಾದರೆ ಇದಕ್ಕಾಗಿ ನೀವು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರಿಗೆ ಎಷ್ಟು ಹಣ ಕೊಡಬೇಕು ಗೊತ್ತ?

ದುಬಾರಿ ಜನರು. ದುಬಾರಿ ಜೀವನಶೈಲಿ. ನೀವು ಈ ಮಾತನ್ನು ಕೇಳಿರಬೇಕು. ಎಲ್ಲಾ ಸೆಲೆಬ್ರಿಟಿಗಳು ಸ್ಟೈಲಿಶ್ ಆಗಿ ಕಾಣಲು ಏನು ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ? ಅವರು ತಮ್ಮ ಹೇರ್ ಸ್ಟೈಲ್ ಮಾಡಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅಜಯ್ ದೇವಗನ್, ರಣಬೀರ್ ಕಪೂರ್, ರಣವೀರ್ ಸಿಂಗ್, ವಿರಾಟ್ ಕೊಹ್ಲಿ, ಪ್ರಭಾಸ್, ಧೋನಿ, ಅರ್ಜುನ್ ಕಪೂರ್, ಹೃತಿಕ್ ರೋಷನ್ ಸೆಲೆಬ್ರಿಟಿ ಕೇಶ ವಿನ್ಯಾಸಕ ಆಲಿಮ್ ಹಕೀಮ್ (Aalim Hakim) ಅವರಿಂದ ಹೇರ್ ಕಟ್ ಮಾಡಲು ಯಾಕೆ ಅಷ್ಟೊಂದು ಖರ್ಚು ಮಾಡುತ್ತಾರೆ.
ಆಲಿಮ್ ಹಕೀಮ್ ಅವರ ಸಲೂನ್ ಸೇವೆಗಳ ಬೆಲೆ
ಆಲಿಮ್ ಹಕೀಮ್ ಬಾಲಿವುಡ್ ಉದ್ಯಮದ ಪ್ರಸಿದ್ಧ ಹೇರ್ ಸ್ಟೈಲಿಸ್ಟ್, (popular hair stylist)ಸೆಲೆಬ್ರಿಟಿಗಳು ತಮ್ಮ ವಿಭಿನ್ನ ಮತ್ತು ಸ್ಟೈಲಿಶ್ ಹೇರ್ ಕಟ್ ಪಡೆಯಲು ಅವರ ಬಳಿಗೆ ಹೋಗುತ್ತಾರೆ. ನೀವು ರಣಬೀರ್ ಕಪೂರ್ ಅವರ 'ಅನಿಮಲ್' ಅಥವಾ 'ಸಂಜು' ಅಥವಾ ವಿರಾಟ್ ಕೊಹ್ಲಿಯ ಐಕಾನಿಕ್ ಫೇಡ್ ಕಟ್ ನಂತಹ ಹೇರ್ ಕಟ್ ಬಯಸಿದರೆ, ಆಲಿಮ್ ಹಕೀಮ್ ಅವರ ಸಲೂನ್ ಸೇವೆಗಳ ಬೆಲೆಯನ್ನು ತಿಳಿದುಕೊಳ್ಳುವುದು ಮುಖ್ಯ.
ಆಲಿಮ್ ಹಕೀಮ್ ಅವರ ಶುಲ್ಕಗಳು
ಆಲಿಮ್ ಹಕೀಮ್ ಬ್ರೂಟ್ ಇಂಡಿಯಾಗೆ (Brut India) ನೀಡಿದ ಸಂದರ್ಶನದಲ್ಲಿ ಅವರು ಮಾಡಿದ ಹೇರ್ಕಟ್‌ನ ಆರಂಭಿಕ ಬೆಲೆ 1 ಲಕ್ಷ ರೂ. ಎಂದು ಹೇಳಿದ್ದಾರೆ. ಇದರ ಜೊತೆಗೆ, 18,000 ರೂ. ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಇನ್ನು ಸಿನಿಮಾಗೆ ವಿಶೇಷ ಸ್ಟೈಲ್ ನಲ್ಲಿ ಮಾಡಬೇಕಾದರೆ ಅಥವಾ ವಿಶೇಷ ಲುಕ್ ನೀಡಬೇಕಾದರೆ ಅವರ ಶುಲ್ಕ 3 ರಿಂದ 5 ಲಕ್ಷ ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತೆ.
15 ನಿಮಿಷಗಳ ಸಂಭಾಷಣೆಗೆ ಶುಲ್ಕ ವಿಧಿಸಿ
ಆಲಿಮ್ ಹಕೀಮ್ ತುಂಬಾ ಬ್ಯುಸಿಯಾಗಿರೋದಾರಿಂದ ಹಾಗೂ ತುಂಬಾನೆ ಫೇಮಸ್ ಆಗಿರುವುದರಿಂದ, ಅವರು ಯಾವ ಹೇರ್ ಸ್ಟೈಲ್ ಸೂಕ್ತವಾಗಿದೆ ಎಂದು ಹೇಳೋದಕ್ಕೂ ಶುಲ್ಕ ವಿಧಿಸುತ್ತಾರೆ. ಅವರು 15 ನಿಮಿಷಗಳ ಸಲಹೆ ಅಥವಾ ಸಂಭಾಷಣೆಗೆ ಸಹ ಶುಲ್ಕ ವಿಧಿಸುತ್ತಾರೆ. ಆದರೆ ಅದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸಾಮಾನ್ಯ ಸಲೂನ್ ಶುಲ್ಕಗಳು
ಮುಂಬೈನಲ್ಲಿರುವ ಹಕೀಮ್ಸ್ ಆಲಿಮ್ ಹೇರ್ ಎನ್’ ಬ್ಯೂಟಿ ಲೌಂಜ್‌ನಲ್ಲಿ, ಸಾಮಾನ್ಯ ಹೇರ್ಕಟ್‌ಗೆ ಪುರುಷರಿಗೆ 4,000 ರೂ. ಮತ್ತು ಮಹಿಳೆಯರಿಗೆ 5,000 ರೂ. ವೆಚ್ಚವಾಗುತ್ತದೆ.
ರಣಬೀರ್ ಕಪೂರ್ ಅವರ ಕ್ಷೌರ
ಆಲಿಮ್ ರಣಬೀರ್‌ಗಾಗಿ ಅನೇಕ ಐಕಾನಿಕ್ ಲುಕ್‌ಗಳನ್ನು (Iconic look) ಸೃಷ್ಟಿಸಿದ್ದಾರೆ, ಉದಾಹರಣೆಗೆ- 'ಸಂಜು' (2018): ಸಂಜಯ್ ದತ್ ಅವರ ಜೀವನ ಚರಿತ್ರೆಯಲ್ಲಿ ರಣಬೀರ್ ಅವರ ಉದ್ದ ಕೂದಲಿನ ಲುಕ್, ಇದನ್ನು ರಚಿಸಲು ಆಲಿಮ್ ತಿಂಗಳುಗಟ್ಟಲೆ ಶ್ರಮಿಸಿದ್ದಾರೆ. 'ಅನಿಮಲ್' (2023) ನಲ್ಲಿ ರಣಬೀರ್ ಅವರ ಒರಟು ಮತ್ತು ಉದ್ದ ಕೂದಲಿನ ರಣವಿಜಯ್ ಲುಕ್ ವೈರಲ್ ಆಗಿತ್ತು. ಇದನ್ನು ರಚಿಸಲು 6 ತಿಂಗಳ ಸಂಶೋಧನೆ ಮತ್ತು ಸ್ಟೈಲಿಂಗ್ ಬೇಕಾಯಿತು.
ವಿರಾಟ್ ಕೊಹ್ಲಿಯ ಹೇರ್ ಸ್ಟೈಲ್
ಕ್ರಿಕೆಟರ್ ವಿರಾಟ್ ಕೊಹ್ಲಿ ಕೂಡ ಆಲಿಮ್ ಅವರಿಂದ ಹೇರ್ ಕಟ್ ಮಾಡಿಸುತ್ತಾರೆ. ಅವರಲ್ಲದೆ, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸಚಿನ್ ತೆಂಡೂಲ್ಕರ್, ಕೆಎಲ್ ರಾಹುಲ್ ಕೂಡ ಈ ಹೇರ್ ಸ್ಟೈಲಿಶ್ ಕ್ಲೈಂಟ್‌ಗಳಾಗಿದ್ದಾರೆ.
ಆಲಿಮ್ ಹಕೀಮ್ ಯಾರು?
ಆಲಿಮ್ ಹಕೀಮ್ ಮುಂಬೈನ ಭಿಂಡಿ ಬಜಾರ್‌ನಲ್ಲಿ ಜನಿಸಿದರು. ಅವರ ತಂದೆ ಹಕೀಮ್ ಕೈರಾನ್ವಿ (Hakim Kairanvi) ಕೂಡ ಪ್ರಸಿದ್ಧ ಹೇರ್ ಸ್ಟೈಲಿಶ್ ಆಗಿದ್ದರು. , ಅವರು ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಮತ್ತು ಶಶಿ ಕಪೂರ್ ಅವರಂತಹ ತಾರೆಯರ ಹೇರ್ ಸ್ಟೈಲಿಶ್ ಕೂಡ ಆಗಿದ್ದರು. 9 ನೇ ವಯಸ್ಸಿನಲ್ಲಿ ಅವರ ತಂದೆಯ ಮರಣದ ನಂತರ, ಆಲಿಮ್ 16 ನೇ ವಯಸ್ಸಿನಲ್ಲಿ ಹೇರ್ ಸ್ಟೈಲಿಂಗ್ ಪ್ರಾರಂಭಿಸಿದರು ಮತ್ತು ಹಕೀಮ್ ಅವರ ಆಲಿಮ್ ಸಲೂನ್‌ಗೆ ಅಡಿಪಾಯ ಹಾಕಿದರು. ಅವರು ಪ್ಯಾರಿಸ್ ಮತ್ತು ಆಸ್ಟ್ರಿಯಾದಿಂದ ಹೇರ್ ಸ್ಟೈಲಿಂಗ್‌ನಲ್ಲಿ ತರಬೇತಿ ಪಡೆದರು ಮತ್ತು ಮುಂಬೈನ ಮಿಥಿಬಾಯಿ ಕಾಲೇಜಿನಿಂದ ಪದವಿ ಪಡೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

