- Home
- Entertainment
- Cine World
- Guru Randhawa New Milestone: 30ಮಿಲಿಯನ್‌ಗೂ ಹೆಚ್ಚು Insta ಫಾಲೋವರ್ಸ್ ಗಳಿಸಿದ ಭಾರತದ ಮೊದಲ ಗಾಯಕ!
Guru Randhawa New Milestone: 30ಮಿಲಿಯನ್‌ಗೂ ಹೆಚ್ಚು Insta ಫಾಲೋವರ್ಸ್ ಗಳಿಸಿದ ಭಾರತದ ಮೊದಲ ಗಾಯಕ!
ಗಾಯಕ-ಕವಿ ಗುರು ರಾಂಧವಾ (Guru Randhawa)ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram)30 ಮಿಲಿಯನ್ ಅನುಯಾಯಿಗಳನ್ನು ದಾಟಿದ್ದಾರೆ. ಇಷ್ಷು ಸಂಖ್ಯೆಯ ಫಾಲೋವರ್ಸ್ ಗಳಿಸಿದ ಮೊದಲ ಭಾರತೀಯ ಪುರುಷ ಗಾಯಕರಾಗಿದ್ದಾರೆ. ಗುರು ಅವರು 'ಲಾಹೋರ್', 'ಹೈ ರೇಟೆಡ್ ಗಬ್ರು', 'ಇಶರೆ ತೇರೆ' ಮತ್ತು ಇತ್ತೀಚಿನ 'ಡ್ಯಾನ್ಸ್ ಮೇರಿ ರಾಣಿ' ನಂತಹ ಚಾರ್ಟ್‌ಬಸ್ಟರ್ ಟ್ರ್ಯಾಕ್‌ಗಳಿಗೆ ಹೆಸರುವಾಸಿಯಾಗಿದ್ದಾರೆ.

ಗಾಯಕ-ಗೀತರಚನೆಕಾರ ಗುರು ರಾಂಧವಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 30 ಮಿಲಿಯನ್ ಅನುಯಾಯಿಗಳನ್ನು ದಾಟಿದ್ದಾರೆ.ಇಷ್ಷು ಸಂಖ್ಯೆಯ ಫಾಲೋವರ್ಸ್ ಗಳಿಸಿದ ಮೊದಲ ಭಾರತೀಯ ಪುರುಷ ಗಾಯಕರಾಗಿದ್ದಾರೆ.
'ವಿಶ್ವದಾದ್ಯಂತ ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರಿಂದ ಪಡೆದ ತುಂಬಾ ಪ್ರೀತಿ ಅಗಾಧವಾಗಿದೆ. ನನ್ನನ್ನು ಬೇಷರತ್ತಾಗಿ ಪ್ರೀತಿಸಿದ, ನನ್ನ ಸಂಗೀತವನ್ನು ಮೆಚ್ಚಿದ ಮತ್ತು ಪಾಲಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಅವರು ಹೇಳಿದರು.
ಅವರು ತಮ್ಮ ಸಂಗೀತವನ್ನು ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮತ್ತು ಅವರನ್ನು ಪ್ರೇರೇಪಿಸಿದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. 'ಇದು ಖುಷಿಯ ವಿಷಯ ಮತ್ತು ನನ್ನ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ನಾನು ಸಂಪೂರ್ಣವಾಗಿ ಮೂಕನಾಗಿದ್ದೇನೆ. ನನ್ನ ಅಭಿಮಾನಿಗಳ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.
'ಡಾನ್ಸ್ ಮೇರಿ ರಾಣಿ ಯೊಂದಿಗೆ ನಾವು ಸಂಗೀತದ ಹೊಸ ವಲಯಕ್ಕೆ ಹೋಗುತ್ತಿದ್ದೇವೆ ಮತ್ತು ಆಫ್ರೋ ಬೀಟ್‌ಗಳಿಗೆ ಜನರನ್ನು ಪರಿಚಯಿಸುತ್ತಿದ್ದೇವೆ. ಇದು ಫುಟ್ ಟ್ಯಾಪಿಂಗ್ ನಂಬರ್ ಆಗಿದ್ದು ಅದನ್ನು ತುಂಬಾ ಆಸಕ್ತಿದಾಯಕವಾಗಿ ಚಿತ್ರಿಸಲಾಗಿದೆ' ಎಂದು ಗುರು ರಾಂಧವಾ ಅವರ ಇತ್ತೀಚಿನ ಹಾಡಿನ ಕುರಿತು ಮಾತನಾಡಿದ್ದಾರೆ.
'ಇದು ಖಂಡಿತವಾಗಿಯೂ ಪ್ರೇಕ್ಷಕರಿಗೆ ಹೊಸ ವಿಷಯವಾಗಿದೆ. ನೋರಾರ ಜೊತೆ ಯಾರಾದರೂ ಸಾಕಷ್ಟು ಗ್ಲಿಟ್ಜ್ ಮತ್ತು ಗ್ಲಾಮರ್ ಅನ್ನು ನಿರೀಕ್ಷಿಸಬಹುದು' ಎಂದು ಅವರು ತಮ್ಮೊಂದಿಗೆ ಹಾಡಿನಲ್ಲಿ ಕಾಣಿಸಿಕೊಂಡಿರುವ ನೋರಾ ಫತೇಹಿಯ ಬಗ್ಗೆ ಗುರು ರಾಂಧವಾ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ನೋರಾ ಫತೇಹಿ ಮತ್ತು ಗುರು ರಾಂಧವಾ ಇಬ್ಬರು ಗೋವಾದ ಕಡಲತೀರದಲ್ಲಿ ಕಾಣಿಸಿಕೊಂಡರು. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಬಳಕೆದಾರರು ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಊಹಿಸಲು ಪ್ರಾರಂಭಿಸಿದರು.